ಹರಿರಾವ್ ನವಕಲ್ ಒಬ್ಬ ಭೌತ ವಿಜ್ಞಾನಿ.ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಲ್ಲಿ ಪದವಿಯನ್ನು ಗಳಿಸಿದ ಬಳಿಕ, 'ಹರಿರಾವ್' ರವರು ಕಲ್ಕತ್ತಾಕ್ಕೆ ಹೋಗಿ, 'ಕಲ್ಕತ್ತಾದ ಯೂನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್,' ನಲ್ಲಿ ಭೌತ ಶಾಸ್ತ್ರವಿಭಾಗದಲ್ಲಿ ಮಾಸ್ಟರ್ ಪದವಿಯನ್ನು ಗಳಿಸಿದರು.ಅಲ್ಲಿ ಅವರು, 'ಗೋಲ್ಡ್ ಮೆಡಲ್' ನಿಂದ ಸನ್ಮಾನಿಸಲ್ಪಟ್ಟಿದ್ದರು. ಹರಿರಾವ್ ನವಕಲ್ ರವರಿಗೆ ಮಾರ್ಗದರ್ಶನಮಾಡಿದ ಗುರುವರೇಣ್ಯರುಗಳು,' ಪ್ರೊ.ಮೇಘನಾದ್ ಸಹ',ಮತ್ತು, 'ಪ್ರೊ.ಸಿ. ವಿ. ರಾಮನ್. ಹರಿರಾವ್,(ಸೆಪ್ಟೆಂಬರ್, ೧೯೫೬-ಜನವರಿ,೧೯೫೭)'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯ ನಿರ್ದೇಶಕರಾಗಿ ಸೇವೆಸಲ್ಲಿಸಿದರು.