ಹರಳಯ್ಯ

ಹರಳಯ್ಯ 12ನೆಯ ಶತಮಾನದ ಶಿವಶರಣ. ಬಸವಣ್ಣನವರ ಸಮಕಾಲೀನ

ಹರಳಯ್ಯ 12ನೆಯ ಶತಮಾನದ ಶಿವಶರಣ. ಬಸವಣ್ಣನವರ ಸಮಕಾಲೀನ.

ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರು ಲಿಂಗ ಜಂಗಮ ಸೇವೆಗೆ ತನ್ನ ತನುಮನಧನ ಗಳನ್ನು ಮುಡಿಪಾಗಿಟ್ಟಿದ್ದವ. ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯ ದಲ್ಲಿ ಭೇಟಿಯಾದ ಹರಳಯ್ಯ, ಶರಣು ಬಸವರಸ ಎಂದು ತಲೆಬಾಗಿ ವಂದಿಸಿದ. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದ. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದ, ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು, ಹರಳಯ್ಯನಿಗೆ. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ.

ಅನಂತರ ನಡೆದ ಕಲ್ಯಾಣದ ಕ್ರಾಂತಿಗೆ ಕಾರಣವಾದ ಘಟನೆಗಳಲ್ಲಿ ಕೀಳು ಜಾತಿಯ ಹರಳಯ್ಯನ ಮಗನ ಮದುವೆ ಮೇಲು ಜಾತಿಯ ಮಧುವಯ್ಯನ ಮಗಳೊಂದಿಗೆ ನಡೆದದ್ದು ಮುಖ್ಯವಾದದ್ದು. ಹರಳಯ್ಯ ಅನುಭವ ಮಂಟಪದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಿರ ಬಹುದಾದರೂ ಇವನ ವಚನಗಳು ದೊರೆತಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹರಳಯ್ಯ&oldid=896956" ಇಂದ ಪಡೆಯಲ್ಪಟ್ಟಿದೆ