ಹಬೆ ಇಂಜಿನ್ ಒಂದು ಉಷ್ಣ ಎಂಜಿನ್ ಆಗಿದ್ದು ,ಅದು ಹಬೆಯನ್ನು ತನ್ನ ದ್ರವ ರ್ಕಾಯನಿರ್ವಹಣಾ ದ್ರವವನ್ನಾಗಿ ಬಳಸಿಕೊಂಡು ಯಾಂತ್ರಿಕ ಕೆಲಸವನ್ನು ಮಾಡುತ್ತದೆ.

ಹಬೆ ರೇಲ್ವೆ ಎಂಜಿನ್
ಥಾಮಸ್ ನ್ಯೂಕೊಮೆನ್ ರ ವಾಯುಮಂಡಲದ (ಯಂತ್ರ)ಇಂಜಿನ್

೨೦೦೦ ವರುಷಗಳ ಹಿಂದೆಯೇ ಕುದಿಯುವ ನೀರಿನಿಂದ ಯಾಂತ್ರಿಕ ಚಲನೆಯು ಸಾದ್ಯವೆಂದು ತಿಳಿದಿತ್ತು.ಆದರೆ ಈ ಸಾಧನಗಳನ್ನು ಪ್ರಾಯೊಗಿಕವಾಗಿ ಬಳಸಲು ಆಗುತ್ತಿರಲಿಲ್ಲ.೧೬೦೬ ರಲ್ಲಿ ಸ್ಪೇನ್ ನ ಅನ್ವೇಷಕರಾದ ಜಿರೋಮ್ ಅಯಾಂಝ್ ಬಿಯೋ ಮಾವುಂಟ್ ಅವರು ಮೊದಲ ಹಬೆ ಇಂಜಿನ್ ನ ಹಕ್ಕು ಸ್ವಾಮ್ಯವನ್ನು ಪಡೆದುಕೊಂಡರು.೧೬೯೮ ರಲ್ಲಿ ಥಾಮಸ್ ಸಾವೇರಿಯವರು ನೀರಿನ ನೇರ ಸಂಪರ್ಕಹೊಂದಿದ ಹಬೆಯನ್ನು ಬಳಸುವ ಹಬೆ ಪಂಪಿನ ಹಕ್ಕು ಸ್ವಾಮ್ಯವನ್ನು ಪಡೆದುಕೊಂಡರು. ಸಾವೇರಿಯವರ ಈ ಪಂಪು,ಸಂಕುಚಿತಗೊಳಿಸಿದ ಹಬೆಯು ನಿರ್ವಾತವನ್ನುಂಟು ಮಾಡಿ ತನ್ಮೂಲಕ ನೀರನ್ನು ಎಳೆಯುತ್ತಿತ್ತು. ಥಾಮಸ್ ನ್ಯೂಕೊಮೆನ್ ರ ವಾಯುಮಂಡಲದ (ಯಂತ್ರ)ಇಂಜಿನ್ ಇದು ಮೊಟ್ಟಮೊದಲ ವಾಣಿಜ್ಯ ಉದ್ದೇಶದ ಹಾಗೂ ಬೆಣೆಯನ್ನು ಹೊಂದಿದ ನೈಜ ಹಬೆ ಇಂಜಿನ್ ಆಗಿದ್ದಿತು.ಇದನ್ನು ೧೭೧೨ ರಲ್ಲಿ ಗಣಿಗಾರಿಕೆಯಲ್ಲಿ ಬಳಸಲಾಯಿತು.

೧೭೮೧ ರಲ್ಲಿ ಜೇಮ್ಸ್ ವ್ಯಾಟ್

ಜೇಮ್ಸ್ ವ್ಯಾಟ್

ರವರು ನಿರಂತರ ರೋಟರಿ ಚಲನೆಯನ್ನು ಹೊಂದಿದ ಹಬೆ ಇಂಜಿನ್ ನ ಹಕ್ಕು ಸ್ವಾಮ್ಯವನ್ನು ಪಡೆದುಕೊಂಡರು. ೧೦ ಅಶ್ವಶಕ್ತಿ ಸಾಮ‍ರ್ಥ್ಯ ಹೊಂದಿದ್ದ ವಾಟ್ ರವರ ಇಂಜಿನ್ ಗಳು ವಿಶಾಲಶ್ರೇಣಿಯ ಯಂತ್ರಗಳ ತಯಾರಿಕೆಗೆ ಸಹಾಯಕಾರಿಯಾಗಿದ್ದವು.ಈ ಇಂಜಿನ್ ಗಳನ್ನು ನೀರು ಮತ್ತು ಕಲ್ಲಿದ್ದಲು ಅಥವಾ ಕಟ್ಟಿಗೆ ಇಂಧನ ದೊರೆಯುವ ಕಡೆಗೆ ಸ್ಥಾಪಿಸಬಹುದು. ೧೮೮೩ ರ ಹೊತ್ತಿಗೆ ೧೦,೦೦೦ಅಶಸಾ(ಹೆಚ್ ಪಿ)ವುಳ್ಳ ಇಂಜಿನ್ ಗಳು ಕಾರ್ಯನಿರ್ವಹಿಸಲು ಆರಂಭಸಿದ್ದವು.ಹಬೆ ಇಂಜಿನ್ ಗಳನ್ನು ರೈಲುಗಳಿಗೆ ಬಳಸಬಹುದು.ಸ್ಥಿರ ಹಬೆ ಇಂಜಿನ್ ಗಳು ಕೈಗಾರಿಕಾ ಕ್ರಾಂತಿಯ ಪ್ರಮುಖ ಅಂಶಗಳಾಗಿದ್ದವು.ಇದರಿಂದ ನೀರು ದೊರೆಯದ ಕಡೆಯಲ್ಲೂ ಕಾರಖಾನೆಗಳನ್ನು ಸ್ಥಾಪಿಸಲು ಸಹಾಯವಾಯಿತು.

ಹಬೆ ಇಂಜಿನ್ ಗಳು ಬಹಿರ್ದಹನ ಇಂಜಿನ್ ಗಳಾಗಿದ್ದು ಇವುಗಳ ಕಾರ್ಯನಿರ್ವಹಣಾ ದ್ರವವು ದಹನವಸ್ತುಗಳಿಗಿಂತ ಬೇರೆಯಾಗಿದೆ.ಈ ಇಂಜಿನ್ ಗಳಲ್ಲಿ ಸೌರಶಕ್ತಿ, ಬೈಜಿಕ ಶಕ್ತಿ ಅಥವಾ ಭೂಉಷ್ಣಶಕ್ತಿ ಗಳನ್ನು ಬಳಸಬಹುದು.ಈ ಇಂಜಿನ್ ಗಳಲ್ಲಿ ನೀರನ್ನು ಕಾಯಿಸಿ ನಂತರ ಅತಿ ಒತ್ತಡದಲ್ಲಿ ಹಬೆಯಾಗಿ ಮಾರ್ಪಡಿಸಿ, ಈ ಹಬೆಯನ್ನು ಬೆಣೆಯ ಅಥವಾ ಟರ್ಬೈನ್ ಗಳ ಮೂಲಕ ವಿಕಸನ ಮಾಡಿದಾಗ ಯಾಂತ್ರಿಕ ಕಾರ್ಯವಾಗುತ್ತದೆ.ನಂತರ ಹಬೆಯನ್ನು ತಂಪುಗೊಳಿಸಿ ಬಾಯ್ಲರಿಗೆ ಮರಳಿಸಲಾಗುವುದು. ಹಬೆ ಇಂಜಿನ್ ನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಂಶಗಳನ್ನು ವೀಕ್ಷಿಸಿ..

ಇತಿಹಾಸ ಬದಲಾಯಿಸಿ

ಹಬೆ ಇಂಜಿನ್ ನ ಭಾಗಗಳು ಬದಲಾಯಿಸಿ

ಇಂಜಿನ್ ನ ಸಂರಚನೆ ಬದಲಾಯಿಸಿ

ಸುರಕ್ಷತಾ ಕ್ರಮಗಳು ಬದಲಾಯಿಸಿ

ಇಂಜಿನ್ ನ ಸಾಮರ್ಥ್ಯ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ