ಹಣದ ಬೇಡಿಕೆ,ಹಣದ ಪೂರೈಕೆ ಮತ್ತು ಹಣದ ಮೌಲ್ಯ ಸಿದ್ಧಾಂತಗಳು
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಭಾಷೆ ಸರಿಪಡಿಸಬೇಕು. ಕೊಂಡಿಗಳು, ಉಲ್ಲೇಖಗಳು ಬೇಕು. |
ಹಣದ ಬೇಡಿಕೆ ಮತ್ತು ಪೂರೈಕೆ ಅತಿ ಮುಖ್ಯವಾದ ಎರಡು ಸಂಗತಿಗಳು. ಅನೇಕ ಉದ್ದೇಶಗಳಿಗಾಗಿ ಹಣವು ಬೇಡಿಕೆಯಲ್ಲಿರುತ್ತದೆ, ಅಂದರೆ ಅವಶ್ಯಕವಾಗಿರುತ್ತದೆ.ಅಂತಯೇ ವಿವಿಧ ಮೂಲಗಳಿಂದ ಹಣವು ಪೂರೈಕೆಯಾಗುತ್ತದೆ.ಬೇರೆ ರೀತಿಯಲ್ಲಿ ಹೇಳುವುದಾದರೆ,ಯಾವುದೇ ಒಂದು ದೇಶದಲ್ಲಿ ಹಣದ ಬೇಡಿಕೆಯನ್ನು ನಿರ್ಧರಿಸುವ ವಿಭಿನ್ನ ಅಂಶಗಳು ಹಾಗೂ ಹಣದ ಪೂರೈಕೆಯಲ್ಲಿ ಭಾಗಿಯಾಗುವ ವಿವಿಧ ಮೂಲಗಳನ್ನು ಅಭ್ಯಾಸಿಸುವುದು ಅವಶ್ಯಕವಾಗಿರುತ್ತದೆ.ಈ ಸಂಗತಿಗಳ ಅಧ್ಯಯನವು ಹಣ ಸಂಬಂಧಿ ವ್ಯವಸ್ಥೆ ಕಾರ್ಯಚರಣೆಯನ್ನು ಕುರಿತಂತೆ ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ. ಹಣದ ಬೇಡಿಕೆ: ಸರಳವಾಗಿ ಹೇಳುವುದಾದರೆ ಹಣದ ಬೇಡಿಕೆ ಎಂದರೆ. ಜನರು ತಮ್ಮ ಬಳಿ ಇಟ್ಟುಕೊಳ್ಳಲು ಬಯಸುವ ನಗದು ಹಣದ ಪ್ರಮಾಣ ಎಂದರ್ಥ. ಇದನ್ನು ‘ದ್ರವ್ಯದೊಲವು’ ಎಂತಲೂ ಕರೆಯಲಾಗುತ್ತದೆ. ಹಣಕ್ಕೆ ಬೇಡಿಕೆಯು ಅದರ ಎರಡು ಮುಖ್ಯ ಕಾರ್ಯಗಳ ಕಾರಣದಿಂದ ಉದ್ಬವಿಸುತ್ತದೆ. ಅವುಗಳು ಎಂದರೆ .
(೧) ಹಣವು ವಿನಿಮಯದ ಮಾಧ್ಯಮವಾಗಿ ಕಾರ್ಯ ಮಾಡುವುದರಿಂದ, ಮತ್ತು (೨) ಹಣವು ಮೌಲ್ಯ ಸಂಗ್ರಹದ ಸಾಧನವಾಗಿರುವುದರಿಂದ. ಹಣವು ವಿನಿಮಯದ ಸಾಧನವಾಗಿ ಕೆಲಸ ಮಾಡುವುದರಿಂದ ಇತರ ಸರಕುಗಳನ್ನು ಖರೀದಿಸಲು ಹಣವು ಅತ್ಯಗತ್ಯವಾಗಿ ಬೇಕಾಗಿರುತ್ತದೆ.
ಅಲ್ಲದೆ ಮೌಲ್ಯವು ನಾಶವಾಗದಂತೆ ಸಂಪತ್ತನ್ನು ಹಣದ ರೂಪದಲ್ಲಿ ಶೇಖರಿಸಿಡಬಹುದಾಗಿರುವುದರಿಂದ ಹಣಕ್ಕೆ ಬೇಡಿಕೆ ಇದೆ.
ಸೈದ್ಧಾಂತಿಕವಾಗಿ ನೋಡಿದಾಗ ಹಣದ ಬೇಡಿಕೆಯನ್ನು ಕುರಿತಂತೆ ಮೂರು ನಿರೂಪಣೆಗಳಿವೆ. ಅವುಗಳು ಯಾವುವೆಂದರೆ:
(೧) ಸಾಂಪ್ರದಾಯಿಕ ಸಿದ್ಧಾಂತ, (೨) ಕೇನ್ಸ್ ನ ಸಿದ್ಧಾಂತ, ಮತ್ತು (೩) ಆಧುನಿಕ ಸಿದ್ಧಾಂತ.
ಇರ್ವಿಂಗ್ ಫಿಷರನ ಸಮೀಕರಣ ಮತ್ತು ಕೇಂಬ್ರಿಜ್ ನಿರೂಪಣೆಗಳನೊಳಗೊಂಡ ಸಾಂಪ್ರದಯಿಕೆ ಸಿದ್ಧಾಂತದ ಪ್ರಕಾರ ಹಣದ ಬೇಡಿಕೆಯು ರಾಷ್ಟೀಯ ಆದಾಯದ ಮಟ್ಟಕ್ಕೆ ಸಮನಾಗಿರುತ್ತದೆ. ಅಂದರೆ ವಾರ್ಷಿಕ ರಾಷ್ಟೀಯ ಉತ್ಪನವು ಹಣದ ಬೇಡಿಕೆಯ ಗಾತ್ರವನ್ನು ನಿರ್ಧಿರಿಸುತ್ತದೆ. ಜಿ ಎಂ ಕೆನ್ಸನ ಅಭಿಪ್ರಾಯದಲ್ಲಿ ಮೂರು ಉದ್ದೇಶಗಳ ಈಡೇರಿಕೆಯ ಕಾರಣದಿಂದ ಹಣಕಕ್ಕೆ ಬೇಡಿಕೆ ಬರುತ್ತದೆ. ಈ ಉದೆಶಗಳೆಂದರೆ ವ್ಯವಹಾರದ ಉದೇಶ, ಮುಂಜಾಗರೂಕತೆಯ ಉದೇಶ ಮತ್ತು ಸಟ್ಟಾ ವ್ಯಾಪಾರದ ಉದೇಶ ಒಟ್ಟು ಹಣದ ಬೇಡಿಕೆಯು ಈ ಮೂರು ಉದೇಶಗಳಿಂದ ಪ್ರಭವಗೊಳ್ಳುತ್ತದೆ. ಅಧುನಿಕ ಸಿದ್ಧಾಂತವು ಮಿಲ್ಟನ್ ಪ್ರೀಡಮನನಿಂದ ಪರ್ಯಾಲೋಚನೆಗೊಂಡಿದೆ. ಈ ಸಿದ್ಧಾಂತದ ಪ್ರಕಾರ, ಹಣದ ಬೇಡಿಕೆಯು ಬೆಲೆಯ ಮಟ್ಟ, ಆದಾಯ, ಹಣ ದುಬ್ಬರದ ದರ, ಸಂಪತ್ತು ಮತ್ತು ಆಸ್ತಿಗಳ ಮೇಲೆ ದೊರೆಯುವ ಪ್ರತಿಫಲ, ಮಾನವೇತರ ಬಂಡವಾಳಕ್ಕೆ ಮಾನವ ಬಂಡವಾಳದ ಅನುಪಾತ ಮೊದಲಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಹಣವು ವಿನಿಮಯದ ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಕಾರಣದಿಂದ ಅದಕ್ಕೆ ಬೇಡಿಕೆ ಇದೆ. ಅಂದರೆ ಸರಕುಗಳನ್ನು ಮತ್ತು ಸೇವೆಗಳನ್ನು ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ. ಒಂದು ನಿರ್ಧಿಷ್ಠ ಅವಧಿಯಲ್ಲಿ ಹಣದ ಬೇಡಿಕೆಯು ಆ ಅವಧಿಯಲ್ಲಿ ಲಭ್ಯವಿದ್ದ ಸರಕುಗಳ ಮತ್ತು ಸೇವೆಗಳ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ ಅಂದರೆ ಯಾವುದೊಂದು ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣವು ಸರಕುಗಳನ್ನು ಮತ್ತು ಸೇವೆಯನ್ನು ಖರೀದಿಸಲು ಬಳಸಲ್ಪಡುವುದರಿಂದ ಜನರು ಕೊಂಡುಕೊಳ್ಳುವ ಸರಕುಗಳ ಮತ್ತು ಸೇವೆಗಳ ಒಟ್ಟು ಗಾತ್ರಕ್ಕೆ ಚಲಾವಣೆಯಲ್ಲಿರುವ ಒಟ್ಟು ಹಣವು ಸಮವಾಗಿರುತ್ತದೆ ದೇಶದಲ್ಲಿ ಒಂದು ನಿರ್ದಿಷ್ಠ ಅವಧಿಯಲ್ಲಿ ಲಭ್ಯವಿರುವ ಸರಕು ಮತ್ತು ಸೇವೆಗಳ ಪ್ರಮಾಣವನ್ನು T ಎಂತಲೂ ಮತ್ತು ಅವುಗಳ ಸರಾಸರಿ ಬೆಲೆಯನ್ನು P ಎಂತಲೂ ಪರಿಗಣಿಸಿದರೆ, ಆಗ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವು PT ಆಗುತ್ತದೆ.ಇದೇ ಹಣದ ಬೇಡಿಕೆಯಾಗಿದೆ. ಇದನ್ನು ಕೆಳಗಿನ ಸೂತ್ರದ ಮೂಲಕ ವ್ಯಕ್ತಪಡಿಸಬಹುದು.
MD=PT ಈ ಸೂತ್ರದಲ್ಲಿ, MD ಎಂದರೆ ಹಣದ ಬೇಡಿಕೆ. PT ಎಂದರೆ ಸರಕುಗಳ ಮತ್ತು ಸೇವೆಗಳ ಒಟ್ಟು ಮೌಲ್ಯ. ಹಣದ ಬೇಡಿಕೆಯು ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದಲ್ಲಿ ಲಭ್ಯವಿರುವ ಸರಕುಗಳ ಮತ್ತು ಸೇವೆಗಳ ಮೌಲ್ಯಕ್ಕೆ ಸಮನಾಗಿರುತ್ತದೆ ಎಂಬುದು ಇದರರ್ಥ. ಉದಾರಣೆಗೆ, ಲಭ್ಯವಿರುವ ಸರಕುಗಳ ಮತ್ತು ಸೇವೆಗಳ ಪ್ರಮಾಣವು (T) 50000 ಘಟಕಗಳು ಮತ್ತು ಒಂದು ಘಟಕದ ಸರಾಸರಿ ಬೆಲೆ ( P ) 10 ಎಂದು ಭಾವಿಸಿಕೊಂಡರೆ.ಆಗ ಹಣದ. ಬೇಡಿಕೆಯು ಕೆಳಗಿನಂತೆ ಇರುತ್ತದೆ. PT=MD 10*50000=500000 ಈ ಪ್ರಕಾರ ಹಣದ ಬೇಡಿಕೆಯು ರೂ 5,00,000 ಆಗಿರುತ್ತದೆ.
ಹಣದ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ ಸಂಗತಿಗಳು 1)ರಾಷ್ಟೀಯ ಉತ್ಪನ್ನದ ಮಟ್ಟ: ರಾಷ್ಟೀಯ ಉತ್ಪನ್ನದ ಮಟ್ಟವು ಹಣದ ಬೇಡಿಕೆಯನ್ನು ನಿರ್ಧರಿಸುವ ಮುಖ್ಯ ಅಂಶಗಳಲ್ಲೊಂದು. ರಾಷ್ಟೀಯ ಉತ್ಪನ್ನದ ಹೆಚ್ಚಳದೊಡನೆ ಸರಕುಗಳ ಮತ್ತು ಸೇವೆಗಳ ಖರೀದಿಗೆ ಹಣದ ಅವಶ್ಯಕತೆರುದ್ಧಿಸುತ್ತದೆ. ಹಣವು ವಿನಿಮಯದ ಸಾಧನವಾಗಿ ಕೆಲಸ ಮಾಡುವುದರಿಂದ ಉತ್ಪನ್ನದ ಏರಿಕೆಯೊಡನೆ ಅಧಿಕ ಗಾತ್ರದ ಹಣವು ಅವಶ್ಯಕವಾಗುವುದು ಸ್ವಾಭಾವಿಕವೇ ಆಗಿದೆ. ಇದ್ದಕ್ಕೆ ವಿರುದ್ಧವಾಗಿ ಸರಕುಗಳ ಮತ್ತು ಸೇವೆಗಳ ಪ್ರಮಾಣ ಹಾಗೂ ರಾಷ್ಟೀಯ ಆದಾಯದ ಮಟ್ಟ ಕಡಿಮೆ ಇರುವಾಗ ಹಣದ ಬೇಡಿಕೆಯು ಸಹಜವಾಗಿ ತಗ್ಗಿದ ಮಟ್ಟದಲ್ಲಿರುತ್ತದೆ.
ಭಾರತದಂತಹ ಅಭಿವೃದ್ದಿಶೀಲ ಅರ್ಥವ್ಯವಸ್ಥೆಯೊಂದರಲ್ಲಿ ರಾಷ್ಟೀಯ ಆದಾಯವು ವರ್ಷದಿಂದ ವರ್ಷಕ್ಕೆ ಅಧಿಕಗೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಉದಾರಣೆಗೆ, 1950- 51ರಲ್ಲಿ ಪ್ರಸ್ತುತ ಬೇಲೆಗಳಲ್ಲಿ ಕೇವಲ 8939 ಕೋಟಿ ರೂಪಾಯಿಗಳಿದ್ದ ಒಟ್ಟು ರಾಷ್ಟೀಯ ಉತ್ಪನ್ನವು 2008-09 ದಲ್ಲಿ 43,26,684 ಕೋಟಿ ರೂಪಾಯಿಗಳ ಅಗಾಧ ಮೊತ್ತಕ್ಕೆ ಹೆಚ್ಚಿದೆ. ಆ ಪ್ರಕಾರ ಹಣದ ಬೇಡಿಕೆಯ ಹೆಚ್ಚಳವನ್ನು ಊಹಿಸುವುದು ಸುಲಭ.
2) ಅರ್ಥವ್ಯವಸ್ಥೆಯ ನಾಣ್ಯೀಕರಣ: ಅರ್ಥ ವ್ಯವಸ್ಥೆಯ ನಾಣ್ಯೀಕರಣವು ಹಣದ ಬೇಡಿಕೆಯ ಮೇಲೆ ಪ್ರಭಾವ ಬೀರುತ್ತದೆ. ನಾಣ್ಯೀಕರಣವು ವ್ಯವಹಾರಗಳಲ್ಲಿ ಅಂದರೆ ಕೊಳ್ಳುವಿಕೆ ಮತ್ತು ಮಾರುವಿಕೆಯಲ್ಲಿ ಹಣದ ಬಳಕೆಯ ಪ್ರಮಾಣವನ್ನು ಸೂಚಿಸುತ್ತದ. ಅರ್ಥವ್ಯವಸ್ಥೆಯು ಪೂರ್ಣವಾಗಿ ನಾಣ್ಯೀಕರಣಗೊಂಡಿದೆ ಎಂದರೆ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಹಣವೇ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ ಮತ್ತು ಸಾಟಿ ಪದ್ಧತಿ ಅಸ್ತಿತ್ವದಲ್ಲಿಲ್ಲ ಎಂದು ಅರ್ಥ. ನಾಣ್ಯೀಕರಣದ ಪ್ರಮಾಣವು ಅಧಿಕವಾಗಿದ್ದರೆ ಸರಕುಗಳ ಖರೀದಿಗೆ ಮತ್ತು ಮಾರಟಕ್ಕೆ ಜಾಸ್ತಿ ಮೊತ್ತದ ಹಣವು ಅಗತ್ಯವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ನಾಣ್ಯೀಕರಣದ ಪ್ರಮಾಣವು ಕಡಿಮೆ ಇದ್ದರೆ ಹಣದ ಬೇಡಿಕೆಯು ಸ್ವಾಭಾವಿಕವಾಗಿ ಕೆಳಮಟ್ಟದಲ್ಲಿರುತ್ತದೆ. ಏಕೆಂದರೆ ಅತಂಹ ಸಂದರ್ಭದಲ್ಲಿ ಸರಕುಗಳ ಖರೀದಿಗೆ ಮತ್ತು ಮಾರಾಟಕ್ಕೆ ಹೆಚ್ಚಿನ ಮೊತ್ತದ ಹಣವು ಅವಶ್ಯಕವಾಗಿರುವುದಿಲ್ಲ. 3) ಬೆಲೆಯ ಮಟ್ಟ: ಬೆಲೆಯ ಮಟ್ಟವು ಹಣದ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲೊಂದು. ಬೆಲೆಯ ಮಟ್ಟದ ಏರಿಕೆಯೊಡನೆ ಹಣದ ಮೌಲ್ಯವು ಕುಸಿಯುವುದರಿಂದ ಹಿಂದಿನಷ್ಟೇ ಪ್ರಮಾಣದ ಸರಕುಗಳನ್ನು ಖರೀದಿಸಲು ಹಾಗೂ ಅನುಭೋಗವನ್ನು ಯಥಾಸ್ಥಿತಿಯಲ್ಲಿಡಲು ಅಧಿಕ ಗಾತ್ರದ ಹಣದ ಅವಶ್ಯಕತೆ ಉದ್ಭವಿಸುತ್ತದೆ. 4) ಹಣದುಬ್ಬರದ ನಿರೀಕ್ಷಿತ ದರ ಹಣದುಬ್ಬರದ ನಿರೀಕ್ಷಿತ ದರವು ಹಣದ ಬೇಡಿಕೆಯನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಎರಡೂ ವಿಧಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದಾಗಿ, ನಿರಂತರವಾಗಿ ಬೆಲೆಗಳು ಏರುತ್ತಿರುವಂತಹ ಸನ್ನಿವೇಶದಲ್ಲಿ ಸ್ಜನರು ಇನ್ನೂ ಹೆಚ್ಚಿನ ದರದ ಹಣದುಬ್ಬರವನ್ನು ನಿರೀಕ್ಷಿಸಿಕೊಂಡು ಕುಸಿಯುತ್ತಿರುವ ಹಣದ ಮೌಲ್ಯಕ್ಕೆ ಸುರಕ್ಷತೆಯಾಗಿ ಅಧಿಕ ಮೊತ್ತದ ಹಣವನ್ನು ಸಂಗ್ರಹಿಸಲು ಬಯಸುತ್ತಾರೆ.
ಹಣದ ಪೂರೈಕೆ (supply of money) ಯಾವುದೊಂದು ದೇಶದಲ್ಲಿ ಹಣದ ಪೂರೈಕೆ ಎಂದರೆ ಚಲಾವಣೆಯಲ್ಲಿರುವ ಹಣದ ಒಟ್ಟು ಸಂಗ್ರಹ ಎಂದರ್ಥ. ಆ ಪ್ರಕಾರ ದೇಶದಲ್ಲಿ ಸಾರ್ವಜನಿಕರು ಹೊಂದಿರುವ ಸ್ವದೇಶಿ ಹಣದ ಒಟ್ಟು ಪರಿಮಾಣವೇ ಹಣದ ಪೂರೈಕೆ ಅಥವ ಚಲಾವಣೆಯಲ್ಲಿರುವ ಒಟ್ಟು ಹಣದ ಗಾತ್ರ. "ಹಣದ ಪೂರೈಕೆ", "ಹಣದ ಪರಿಮಾಣ", ಮತ್ತು "ಹಣದ ಸಂಗ್ರಹ" ಎಂಬ ಪರಿಕಲ್ಪನೆಗಳನ್ನು ಒಂದೇ ಅರ್ಥದಲ್ಲಿ ಪರ್ಯಾಯವಾಗಿ ಉಪಯೋಗಿಸಲಾಗುತ್ತದೆ. "ಸಾರ್ವಜನಿಕರು" ಎಂಬ ಪದವು ಖಾಸಗಿ ವ್ಯಕ್ತಿಗಳನ್ನು ಮತ್ತು ಉದ್ಯಮ ಸಂಸ್ಥೆಗಳನ್ನು ಒಳಗೊಳ್ಳುತ್ತದೆ. ಸಾರ್ವಜನಿಕರ ಬಳಿ ಖರ್ಚುಮಾಡಬಹುದಾದ ರುಪದಲ್ಲಿರುವ ಹಣದ ಸಂಗ್ರಹವು ಮಾತ್ರ ಹಣದ ಪೂರೈಕೆ ಎಂದು ಪರಿಗಣಿಸಲ್ಪಡುತ್ತದೆ. ಕೇಂದ್ರ ಸರ್ಕಾರ, ಕೇಂದ್ರ ಬ್ಯಾಂಕು ಮತ್ತು ವಾಣಿಜ್ಯ ಬ್ಯಾಂಕುಗಳು ಹೊಂದಿರುವ ನಗದು ಶಿಲ್ಕುಗಳು ಹಣದ ಪೂರೈಕೆ. ಏಕೆಂದರೆ ಅವು ಅರ್ಥವ್ಯವಸ್ಥೆಯಲ್ಲಿ ವಾಸ್ತವವಾಗಿ ಚಲಾವಣೆಯಲ್ಲಿರುವುದಿಲ್ಲ. ಆ ಮೇರೆಗೆ, ಯಾವುದೇ ಅವಧಿಯಲ್ಲಿ ಹಣದ ಪೂರೈಕೆ ಎಂದರೆ ಆ ಅವಧಿಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಗಾತ್ರ ಎಂದರ್ಥ. ಆ ಪ್ರಕಾರ ಯಾವುದೇ ಸಮಯದಲ್ಲಿ ಹಣದ ಪೂರೈಕೆ , ಅಂದರೆ ಖರ್ಚು ಮಾಡಬಹುದಾದ ರೂಪದಲ್ಲಿರುವ ಹಣದ ಗಾತ್ರವು, ಎರಡು ಬಾಬುಗಳನ್ನು ಒಳಗೊಂಡಿರುತ್ತದೆ.
೧.ನಾಣ್ಯ ಹಣ (coin money): ಕೇಂದ್ರ ಬ್ಯಾಂಕಿನಿಂದ ಹೊರಡಿಸಲ್ಪಟ್ಟು ದೇಶದಲ್ಲಿ ಚಲಾವಣೆಯಲ್ಲಿರುವ ಲೋಹದ ನಾಣ್ಯಗಳು ಮತ್ತು ಕಾಗದದ ನೋಟುಗಳಿಗೆ ನಾಣ್ಯ ಹಣ ಎಂದು ಹೆಸರು. ೨.ಠೇವಣಿ ಹಣ : ಸಾರ್ವಜನಿಕರು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳ ರೂಪದಲ್ಲಿ ಹೊಂದಿರುವ ಹಣವು ಠೇವಣಿ ಹಣವಾಗಿರುತ್ತದೆ.
ಭಾರತದ ರಿಸರ್ವ್ ಬ್ಯಾಂಕು 1961ರಲ್ಲಿ ರಚಿಸಿದ ಹಣದ ಪೂರೈಕೆಯ ಮೇಲಿನ ಕಾರ್ಯಕಾರಿ ತಂಡವು ಭಾರತದಲ್ಲಿ ಹಣದ ಸರಬರಾಜು ಯಾವ ಅಂಶಗಳನ್ನು ಒಳಗೊಂಡಿರಬೇಕು ಎಂದು ವಿಶದಪಡಿಸಿತು. 1977ರಲ್ಲಿ ಭಾರತದ ರಿಸರ್ವ್ ಬ್ಯಾಂಕು ರಚಿಸಿದ ಎರಡನೆಯ ಕಾರ್ಯಕಾರಿ ತಂಡವು ಇದರ ವಿಮರ್ಶೆ ನಡೆಸಿತು.ವಿಶ್ಲೇಷಣೆಯ ದೃಷ್ಟಿಯಿಂದ ಗಮನಿಸಿದಾಗ ಪ್ರಸ್ತುತದಲ್ಲಿ ಹಣದ ಪೂರೈಕೆಯು ನಾಲ್ಕು ಅಂಗಭಾಗಗಳನ್ನು ಒಳಗೊಂಡಿರುವುದು ಕಂಡುಬರುತ್ತದೆ. ಅವುಗಳೆಂದರೆ M1,M2,M3 ಮತ್ತು M4.
M1 ಸಾರ್ವಜನಿಕರ ಬಳಿ ಇರುವ ನೋಟುಗಳು ಮತ್ತು ನಾಣ್ಯಗಳು, ಬ್ಯಾಂಕುಗಳಲ್ಲಿರುವ ಬೇಡಿಕೆ ಠೇವಣಿಗಳು ಮತ್ತು ರಿಸರ್ವ್ ಬ್ಯಾಂಕಿನಲ್ಲಿರುವ ಇತರ ಠೇವಣಿಗಳನ್ನು ಒಳಗೊಂಡಿರುತ್ತದೆ. ಈ ವಿಧದ ಹಣವು ಶ್ರೇಷ್ಠ ದ್ರವ್ಯತೆಯ ಲಕ್ಷಣವನ್ನು ಪಡೆದಿರುತ್ತದೆ. ಅಂದರೆ ಇದು ನಗದು ಹಣವಾಗಿರುತ್ತದೆ. ಅಥವಾ ಇದನ್ನು ತಕ್ಷಣವೇ ನಗದಾಗಿ ಪರಿವರ್ತಿಸಬಹುದಾಗಿರುತ್ತದೆ. ವಿನಿಮಯದ ಮಾಧ್ಯಮವಾಗಿ ಕೆಲಸ ನಿರ್ವಹಿಸುವ ಹಣವನ್ನು ಇದು ಪ್ರತಿನಿಧಿಸುತ್ತದೆ. M2 ಉಳಿತಾಯ ಬ್ಯಾಂಕುಗಳಲ್ಲಿರುವ ಉಳಿತಾಯ ಠೇವಣಿಗಳನ್ನು ಸೂಚಿಸುತ್ತದೆ. M3 ಬ್ಯಾಂಕುಗಳಲ್ಲಿರುವ ವಾಯಿದೆ ಠೇವಣಿಗಳನ್ನು (Time Deposits) ಒಳಗೊಂದಿರುತ್ತದೆ. M4 ಅಂಚೆ ಕಛೇರಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ಇರುವ ಎಲ್ಲಾ ರಿತಿಯ ಇತರೆ ಠೇವಣಿಗಳನ್ನು ಪ್ರತಿನಿಧಿಸುತ್ತದೆ. ಇದು ಹೆಚ್ಚಾಗಿ ಹಣದ (Near Money) ವಿಧಿದಲ್ಲಿರುತ್ತದೆ.
ಹಣದ ಪೂರೈಕೆಯನ್ನು ನಿರ್ಧರಿಸುವ ಸಂಗತಿಗಳು (Factors Determining Money Supply) ಹಣದ ಪೂರೈಕೆ ಅಂದರೆ ಖರ್ಚು ಯೋಗ್ಯರೂಪದಲ್ಲಿರುವ ಹಣದ ಗಾತ್ರವು ಕೆಳಗೆ ವಿವರಿಸಿದ ಅಂಶಗಳಿಂದ ನಿರ್ಧಾರವಾಗುತ್ತದೆ.
೧. ಜನಸಂಖ್ಯೆಯ ಗಾತ್ರ (size of population): ಯಾವುದೇ ದೇಶದಲ್ಲಿ ಜನಸಂಖ್ಯೆಯ ಗಾತ್ರವು ಹಣದ ಪೂರೈಕೆಯ ಪ್ರಮುಖ ನಿರ್ಧಾರಗಳಲ್ಲಿ ಒಂದು. ಜನಸಂಖ್ಯೆವು ಹೆಚ್ಚಾಗಿದ್ದರೆ, ಹಣದ ಪೂರೈಕೆಯು ಅಧಿಕವಾಗಿರಬೇಕಾಗಿರುವುದು ಸ್ವಾಭಾವಿಕ. ಏಕೆಂದರೆ ಜನಸಂಖ್ಯೆಯ ಗಾತ್ರಕ್ಕೆ ತಕ್ಕಂತೆ ಸೌಲಭ್ಯಗಳನ್ನೊದಗಿಸಲು, ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಸರಕುಗಳನ್ನು ಮತ್ತು ಸೇವೆಗಳನ್ನು ಉತ್ಪಾದಿಸಲು ಅಧಿಕ ಪ್ರಮಾಣದ ಹಣವು ಅವಶ್ಯಕವಾಗುತ್ತದೆ. ಜನಸಂಖ್ಯೆಯ ಗಾತ್ರವು ಕಡಿಮೆ ಇದ್ದರೆ ಹಣದ ಪೂರೈಕೆಯು ಹೆಚ್ಚಾಗಿರಬೇಕಾದ ಅಗತ್ಯವಿರುವುದಿಲ್ಲ. ೨. ಸಾರ್ವಜನಿಕ ವೆಚ್ಚದ ಪರಿಮಾಣ(Quantity of Public Expenditure ): ಸಾರ್ವಜನಿಕ ವೆಚ್ಚದ ಗಾತ್ರವು ಚಲಾವಣೆಯಲ್ಲಿರುವ ಹಣದ ಗಾತ್ರವನ್ನು ನಿರ್ಧರಿಸುತ್ತದೆ. ಸರ್ಕಾರವು ಅವಶ್ಯಕ ಸೇವೆಗಳ ಕಲ್ಪನೆಗಾಗಿ, ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕಾಗಿ ಮತ್ತು ಉತ್ಪಾದನೆಯನ್ನು ವ್ಯವಸ್ಥೆಗೊಳಿಸಲು ಅಗಾಧ ಮೊತ್ತದ ಹಣದ ವಿನಿಯೋಜನೆಯನ್ನು ಕೈಗೊಳ್ಳಬೇಕಾಗಿರುತ್ತದೆ. ಕೃಷಿ, ಕೈಗಾರಿಕೆ, ಸಾರಿಗೆ,ಸಂಪರ್ಕ, ನೀರಾವರಿ ಮೊದಲಾದ ಕ್ಷೇತ್ರಗಳ ಅಭಿವೃದ್ದಿ, ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು ಪೂರೈಕೆ, ವಸತಿ ಮುಂತಾದ ಸೌಲಭ್ಯಗಳ ಕಲ್ಪನೆ, ಮತ್ತಿತರ ಕಾರ್ಯಕ್ರಮಗಳು,ಅರ್ಥವ್ಯವಸ್ಥೆಯಲ್ಲಿ ಬಹು ದೊಡ್ಡ ಮೊತ್ತದ ಹಣದ ಹೂಡಿಕೆಯನ್ನು ಕೋರುತ್ತವೆ.ಹಣದ ಪೂರೈಕೆಯು ಹೆಚ್ಚಾಗಿದ್ದರೆ ಮಾತ್ರ ಅಧಿಕ ಗಾತ್ರದ ಸಾರ್ವಜನಿಕ ವೆಚ್ಚವನ್ನು ಕೈಗೊಳ್ಳಲು ಸಾಧ್ಯವಿರುತ್ತದೆ. ಹಣದ ಪೂರೈಕೆಯ ಕೊರತೆಯ ಪರಿಣಾಮವಾಗಿ ಸಾರ್ವಜನಿಕ ವೆಚ್ಚವು ನಿರ್ಬಂಧಗೊಳ್ಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾರ್ವಜನಿಕ ವೆಚ್ಚದ ಗಾತ್ರವು ಕಡಿಮೆ ಇದ್ದರೆ ಹಣದ ಪೂರೈಕೆಯೂ ಸಹ ಕಡಿಮೆ ಇರುತ್ತದೆ. ೩. ಬೆಲೆ ಏರಿಕೆಯ ತೀವ್ರತೆ(Intensity of Price Rise): ಹಣದ ಪೂರೈಕೆಯ ಗಾತ್ರವು ಅರ್ಥವ್ಯವಸ್ಥೆಯಲ್ಲಿ ಬೆಲೆ ಏರಿಕೆಯ ತೀವ್ರತೆಯಿಂದಲೂ ಸಹ ನಿರ್ಧಾರವಾಗುತ್ತದೆ. ಬೆಲೆಗಳು ರಭಸವಾಗಿ ಏರುತ್ತಿರುವ ಸನ್ನಿವೇಶದಲ್ಲಿ ಸರಕುಗಳನ್ನು ಮತ್ತು ಸೇವೆಗಳನ್ನು ಖರೀದಿಸಲು ಹೆಚ್ಚಿನ ಗಾತ್ರದ ಹಣವು ಆವಶ್ಯಕವಾಗುವುದು ಸ್ವಾಭಾವಿಕ. ಬೆಲೆಗಳು ಏರುತ್ತಿರುವ ಸಂದರ್ಭಗಳಲ್ಲಿ ಅರ್ಥವ್ಯವಸ್ಥೆಗೆ ಎಷ್ಟೇ ಪ್ರಮಾಣದ ಹಣವನ್ನು ಸರಬರಾಜು ಮಾಡಿದರೂ ಸಾಕಾಗುವುದಿಲ್ಲ. ಏಕೆಂದರೆ ಚಲಾವಣೆಯಲ್ಲಿರುವ ಹಣವನ್ನು ಏರುತ್ತಿರುವ ಬೆಲೆಗಳೇ ನುಂಗಿ ಹಾಕುತ್ತದೆ. ಹಣದುಬ್ಬರ ಅಥವಾ ಹಣದ ಪೂರೈಕೆಯ ಹೆಚ್ಚಾಳವು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದ ರೆ ಹಣದ ಪೂರೈಕೆಯ ಹೆಚ್ಚಳದ ಪರಿಣಾಮವಾಗಿ ಸರಕುಗಳ ಮತ್ತು ಸೇವೆಗಳ ಬೆಲೆಗಳು ಅಧಿಕಗೊಳ್ಳುತ್ತವೆ. ಅಂದರೆ ಹಣದ ಪೂರೈಕೆಯು ಸೃಷ್ಟಿಕರ್ತನಾಗಿಯೂ, ಬೆಲೆ ಏರಿಕೆಯು ಸೃಷ್ಟಿಯಾದ ವಸ್ತುವಾಗಿಯೂ ಕೆಲಸ ನಿರ್ವಹಿಸುತ್ತವೆ. ಹಣದ ಪೂರೈಕೆಯ ಹೆಚ್ಚಳದೊಂದಿಗೆ ಸರಕುಗಳ ಮತ್ತು ಸೇವೆಗಳ ಬೆಲೆಗಳು ಏರುವುದೇನೋ ನಿಜ. ಆದರೆ ಕಾಲಕ್ರಮೇಣ ಬೆಲೆ ಏರಿಕೆಯು ತೀವ್ರಗೊಂಡಂತೆ, ಬೆಲೆಗಳು ನಾಗಾಲೋಟದಲ್ಲಿ ಏರತೊಡಗಿ ಗಗನಚುಂಬಿಯಾದಂತೆ ಸೃಷ್ಟಿಯಾಗಿ ಚಲಾವಣೆಗೆ ಬಂದ ಹಣವೆಲ್ಲವೂ ಮಂಗಮಾಯವಾಗುತ್ತದೆ. ಎಷ್ಟೇ ಪ್ರಮಾಣದ ಹಣವನ್ನು ಸೃಷ್ಟಿಸಿ ಚಲಾವಣೆಗೆ ತಂದರೂ ಏರುತ್ತಿರುವ ಬೆಲೆಗಳ ಮುಂದೆ ಸಾಕೆನಿಸುವುದಿಲ್ಲ. ಪೂರೈಕೆಯಾಗಿ ಚಲಾವಣೆಗೆ ಬಂದ ಹಣವೆಲವನ್ನೂ ಏರುತ್ತಿರುವ ಬೆಲೆಗಳೇ ನುಂಗಿಹಾಗುವುದರಿಂದ ಸೃಷ್ಟಿಯಾದ ವಸ್ತುವೇ ಸೃಷ್ಟಿಕರ್ತನನ್ನು ಸಂಹರಿಸಿದಂತಹ ವಿಚಿತ್ರ ಘಟನೆ ನಡೆಯುತ್ತದೆ. ಇದನ್ನು "ಹಣದುಬ್ಬರ ವಿರೋಧಾಭಾಸ"(paradox of inflation) ಎಂದು ಕರೆಯಲಾಗುತ್ತದೆ.ಆ ಪ್ರಕಾರ ಬೆಲೆ ಏರಿಕೆಯು ತೀಕ್ಷ್ವವಾಗಿದ್ದಾಗ ಅರ್ಥವ್ಯವಸ್ಥೆಯಲ್ಲಿ ಅಧಿಕ ಗಾತ್ರದ ಹಣದ ಪೂರೈಕೆಯ ಅವಶ್ಯಕತೆ ಇರುತ್ತದೆ. ತದ್ವಿರುದ್ದವಾಗಿ ಬೆಲೆಗಳ ಮಟ್ಟವು ಕಡಿಮೆ ಇರುವಾಗ ಅಥವಾ ಬೆಲೆ ಏರಿಕೆಯು ನಿಧಾನವಾಗಿರುವ ಸಂದರ್ಭಗಳಲ್ಲಿ ಹಣದ ಪೂರೈಕೆಯ ಗಾತ್ರವು ಕಡಿಮೆ ಇದ್ದರೂ ಸಾಕಾಗುತ್ತದೆ. ಏಕೆಂದರೆ ಸರಕುಗಳ ಮತ್ತು ಸೇವೆಗಳ ಬೆಲೆಗಳು ಕಡಿಮೆ ಇರುವುದರಿಂದ ಅವುಗಳನ್ನು ಕೊಳ್ಳಲು ಅಧಿಕ ಪ್ರಮಾಣದ ಹಣದ ಅವಶ್ಯಕತೆ ಉದ್ಭವಿಸುವುದಿಲ್ಲ. ೪. ಸರಕಾರದ ಚಟುವಟಿಕೆಗಳ ವೈಶಾಲ್ಯ(The Extent of Government Activities):
ಸರಕಾರದ ಆರ್ಥಿಕ ಚಟುವಟಿಕೆಗಳು ವಿಸ್ತಾರವಾಗಿದ್ದರೆ ಅಧಿಕ ಪ್ರಮಾಣದ ಹಣದ ಪೂರೈಕೆ ಅಗತ್ಯವಾಗುತ್ತದೆ. ಇಪ್ಪತ್ತನೆಯ ಶತಮಾನದ ಉಗಮಕ್ಕೆ ಮೊದಲು ಅರಕ್ಷಕ ರಾಷ್ಟ್ರ ವ್ಯವಸ್ಥೆಯು(Police State) ಅಸ್ತಿತ್ವದಲ್ಲಿದ್ದಾಗ ಬಾಹ್ಯ ದಾಳಿಗಳಿಂದ ದೇಶದ ರಕ್ಷಣೆ ಹಾಗೂ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆ ಮಾತ್ರ ಸರಕಾರದ ಕರ್ತವ್ಯಗಳಾಗಿದ್ದವು. ಇಂತಹ ವ್ಯವಸ್ಥೆಯಲ್ಲಿ ಸರ್ಕಾರವು ಕೈಗೊಳ್ಳಬೇಕಾಗಿರುವ ವೆಚ್ಚವು ತಗ್ಗಿದ ಮಟ್ಟದಲ್ಲಿರುವುದರಿಂದ ಹಣದ ಅವಶ್ಯಕತೆ ಮತ್ತು ಹಣದ ಪೂರೈಕೆ ಕಡಿಮೆ ಇರುವುದು ಸ್ವಾಭಾವಿಕ. ಸುಖೀ ರಾಜ್ಯದ ಆಧುನಿಕ ಸರ್ಕಾರಗಳು ರಕ್ಷಣೆ ಮತ್ತು ಕಾನೂನು ಪಾಲನೆಯ ಜೊತೆಗೆ ಆರ್ಥಿಕಾಭಿವೃದ್ಧಿಯ ಸಾಧನೆ ಹಾಗೂ ಆರ್ಥಿಕ ಸಮಸ್ಯೆಗಳ ನಿವಾರಣೆಗಾಗಿ ವಿಪರೀತ ಮೊತ್ತದ ವೆಚ್ಚವನ್ನು ಕೈಗೊಳ್ಳಬೇಕಾಗುವಂದಹ ಪರಿಸ್ಥಿತಿ ಅಸ್ತಿತ್ವದಲ್ಲಿದೆ. ವಿವಿಧ ವಲಯಗಳಲ್ಲಿ ಉತ್ಪಾದನೆಯನ್ನು ವ್ಯವಸ್ಥೆಗೊಳಿಸುವಿಕೆ ಮತ್ತು ಧನಸಹಾಯ ನೀಡಿಕೆಯಂತಹ ಕಾರ್ಯಗಳಲ್ಲದೆ ಆಹಾರವಸ್ತುಗಳ ಕೊರತೆ, ನಿರುದ್ಯೋಗ, ಬೆಲೆ ಏರಿಕೆ, ವಸತಿ ಸೌಕರ್ಯಗಳ ಅಭಾವ, ಅನೈರ್ಮಲ್ಯ ಮೊದಲಾದ ಆರ್ಥಿಕ ಸಮಸ್ಯೆಗಳ ನಿರ್ಮೂಲನಕ್ಕೆ ಸರ್ಕಾರಗಳು ವಿಸ್ತೃತವಾದ ಕಾರ್ಯಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಕಾರ್ಯಗಳು ಮತ್ತು ಕರ್ತವ್ಯಗಳು ಅಪಾರ ಮೊತ್ತದ ಹಣವನ್ನು ಅಪೇಕ್ಷಿಸುತ್ತವೆ. ಆ ಮೇರಿಗೆ, ಸರ್ಕಾರದ ಆರ್ಥಿಕ ಚಟುವಟಿಕೆಗಳ ಗಾತ್ರವು ಸಂಕುಚಿತವಾಗಿದ್ದರೆ ಕಡಿಮೆ ಪ್ರಮಾಣದ ಹಣದ ಪೂರೈಕೆಯು ಸಾಕಾಗುತ್ತದೆ. ಬದಲಾಗಿ ಸರ್ಕಾರದ ಆರ್ಥಿಕ ಚಟುವಟಿಕೆಗಳು ವ್ಯಾಪಕವಾಗಿದ್ದರೆ ಅವುಗಳನ್ನು ಈಡೇರಿಸಲು ಅಧಿಕ ಮೊತ್ತದ ಹಣದ ಪೂರೈಕೆಯು ಅವಶ್ಯವಾಗುತ್ತದೆ.
೫. ಆಯವ್ಯಯದ ಸ್ವರೂಪ(Nature of the Budget): ಸರ್ಕಾರದ ಆಯವ್ಯಯವೂ ಸಹ ಹಣದ ಪೂರೈಕೆಯ ಗಾತ್ರದಒಂದು ಪ್ರಮುಖ ನಿರ್ಧಾರವಾಗಿದೆ. ಸರ್ಕಾರವು ಹೆಚ್ಚುವರಿ ಆಯವ್ಯಯದ(Surplus budget) ನೀತಿಯನ್ನು ಅನುಸರಿಸಿದರೆ ವೆಚ್ಚಗಿಂತ ವರಮಾನಗಳು ಅಧಿಕವಾಗಿರುತ್ತವೆ. ಅಂದರೆ ತೆರಿಗೆ ಮತ್ತಿತರ ಮೂಲಗಳಿಂದ ಸರ್ಕಾರವು ಅಧಿಕ ಮೊತ್ತದ ವರಮಾನವನ್ನು ಸಂಗ್ರಹಿಸುತ್ತಿದೆ. ಆದರೆ ಕಡಿಮೆ ಮೊತ್ತದ ಸಾರ್ವಜನಿಕ ವೆಚ್ಚವನ್ನು ಕೈಗೊಳ್ಳುತ್ತಿದೆ ಎಂದರ್ಥ. ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಂದ ಸರ್ಕಾರಕ್ಕೆ ಹೇರಳ ಮೊತ್ತದ ನಿಧಿಯು ವರ್ಗಾವಣೆಯಾಗುವುದರಿಂದ ಜನರ ಬಳಿ ಕಡಿಮೆ ಹಣ ಉಳಿವುತ್ತದೆ. ಈ ಪರಿಣಾಮವಾಗಿ ಹಣದ ಪೂರೈಕೆಯು ತಗ್ಗುತದೆ. ಬದಲಾಗಿ, ಸರ್ಕಾರವು ಕೊರತೆ ಆಯವ್ಯಯದ (Deficit budget) ನೀತಿಯನ್ನು ಅನುಸರಿಸಿದರೆ ಅದರ ವರಮಾನಗಳಿಗಿಂತ ಸಾರ್ವಜನಿಕ ವೆಚ್ಚವು ಹೆಚ್ಚುತ್ತದೆ. ಇದರಿಂದಾಗಿ ಜನರ ಬಳಿ ಇರುವ ಹಣದ ಗಾತ್ರ ವಿಕಸನಗೊಳ್ಳುತ್ತದೆ. ೬.ಉದ್ಯಮದ ಸ್ಥಿತಿಗತಿಗಳು(Business conditions): ಯಾವುದೊಂದು ಅರ್ಥ ವ್ಯವಸ್ಥೆಯಲ್ಲಿ ಉದ್ಯಮವು ಉರ್ಜಿತಗೊಂಡಿದ್ದರೆ, ವ್ಯಾಪಾರವಹಿವಾಟುಗಳು ತುಂಬ ಬಿರುಸಾಗಿ ನಡೆಯುತ್ತಿದ್ದರೆ ಹಣದ ಪೂರೈಕೆಯು ತಾನಾಗಿಯೇ ಹೆಚ್ಚಾಗಿರುತ್ತದೆ. ಬಿರುಸಾಗಿ ನಡೆಯುತ್ತಿರುವ ಉದ್ಯಮ ಚಟುವಟಿಕೆಗಳಿಕೆ ಅಧಿಕ ಮೊತ್ತದ ಹಣದ ಅವಶ್ಯಕತೆ ತಲೆದೋರುತ್ತದೆ. ಅಲ್ಲದೆ ಹಣದ ಚಲಾವಣೆಯ ವೇಗವೂ ಜಾಸ್ತಿ ಇರುತ್ತದೆ. ಇದಕ್ಕೆ ವಿರುದ್ಧವಾಗಿ ಮೂಲಾರಂಭದ ಅರ್ಥವ್ಯವಸ್ಥೆ(Rudimentary Economy)ಗಳಲ್ಲಿ ಮತ್ತು ಉದ್ಯಮ ಚಟುವಟಿಕೆಗಳು ಮಂದಗತಿಯಲ್ಲಿರುವ ವ್ಯವಸ್ಥೆಗಳಲ್ಲಿ ಹಣದ ಪೂರೈಕೆಯು ಕಡಿಮೆ ಇರುತ್ತದೆ. ಉದ್ಯಮ ಚಟುವಟಿಕೆಗಳು ಬಿರುಸಾಗಿ ನಡೆಯದಿರುವಂತಹ ಅರ್ಥವ್ಯವಸ್ಥೆಗಳಲ್ಲಿ ಮತ್ತು ಪರಿಸ್ಥಿತಿಗಳಲ್ಲಿ ಹಣದ ಪೂರೈಕೆಯು ಕಡಿಮೆ ಇರುವುದು ಸ್ವಾಭಾವಿಕ. ಏಕೆಂದರೆ ಇಂತಹ ಸ್ಥಿತಿಗತಿಗಳಲ್ಲಿ ಹಣಕ್ಕೆ ಹೆಚ್ಚಿನ ಬೇಡಿಕೆ ಇರುವುದಿಲ್ಲ ಹಾಗೂ ಹಣದ ಚಲಾವಣೆಯ ವೇಗವು ಮಂದಗತಿಯಲ್ಲಿರುತ್ತದೆ. ಆ ಪ್ರಕಾರ ಉದ್ಯಮದ ಸ್ಥಿತಿಗತಿಗಳು ಹಣದ ಪೂರೈಕೆಯ ನಿರ್ಧಾರದಲ್ಲಿ ಭಾಗಿಯಾಗುತ್ತವೆ. ಹಣದ ಪೂರೈಕೆಯ ಸೃಷ್ಟಿಕರ್ತರು ಖರ್ಚು ಮಾಡಬಹುದಾದ ರೂಪದಲ್ಲಿರುವ ಹಣವನ್ನು ಮೂರು ಸಂಸ್ಥೆಗಳು ಸೃಷ್ಟಿಸುತ್ತವೆ. ಅವುಗಳೆಂದರೆ: ೧. ಕೇಂದ್ರ ಬ್ಯಾಂಕು ೨. ವಾಣಿಜ್ಯ ಬ್ಯಾಂಕುಗಳು ಮತ್ತು ೩. ಸರ್ಕಾರ ೧.ಕೇಂದ್ರ ಬ್ಯಾಂಕು: ದೇಶದ ಅತ್ಯುಚ್ಛ ಹಣಕಾಸಿನ ಪ್ರಧಿಕಾರವಾಗಿರುವ ಕೇಂದ್ರ ಬ್ಯಾಂಕು ಎರಡು ರೀತಿಗಳಲ್ಲಿ ಹಣದ ಪೂರೈಕೆಯ ಮೇಲೆ ಪ್ರಭಾವ ಬೀರುತ್ತದೆ. ಮೊದಲನೆಯದಾಗಿ, ಕೇಂದ್ರ ಬ್ಯಾಂಕು ಹಣವನ್ನು ಚಲಾವಣೆಗೆ ತರುವ ಸಂಸ್ಥೆಯಾಗಿರುವುದರಿಂದ ಅದು ನೇರವಾಗಿ ಹಣದ ಪೂರೈಕೆಯನ್ನು ನಿರ್ಧರಿಸುತ್ತದೆ. ಎರಡೆನೇಯದಾಗಿ, ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲದ ಮೇಲೆ ಪ್ರಭಾವ ಬೀರುವ ಅಧಿಕಾರವು ಕೇಂದ್ರ ಬ್ಯಾಂಕಿಗೆ ಇರುವುದರಿಂದ ಆ ಮೂಲಕವೂ ಅದು ಹಣದ ಪೂರೈಕೆಯನ್ನು ನಿರ್ಧರಿಸುತ್ತದೆ. ವಾಣಿಜ್ಯ ಬ್ಯಾಂಕುಗಳ ಬಳಿ ಹೆಚ್ಚಿನ ಮೊತ್ತದ ನಗದು ಶಿಲ್ಕು ಇದ್ದಾಗ ಅವು ಅಧಿಕ ಗಾತ್ರದ ಹಣವನ್ನು ಸಾಲವಾಗಿ ನೀಡಬಲ್ಲವು. ಆಗ ಹಣದ ಪೂರೈಕೆವು ಸ್ವಾಭಾವಿಕವಾಗಿ ಜಾಸ್ತಿಯಾಗುತ್ತದೆ. ಆದರೆ ವಾಣಿಜ್ಯ ಬ್ಯಾಂಕುಗಳು ಎಷ್ಟು ಮೊತ್ತದ ನಗದು ಶಿಲ್ಕನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕೆನ್ನುವುದು ಕೇಂದ್ರ ಬ್ಯಾಂಕಿನ ನೀತಿಯಿಂದ ನಿರ್ಧಾರವಾಗುತ್ತದೆ. ಕೇಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳಿಕೆ ಸಾಲವನ್ನು ನೀಡುವಾಗ ವಿಧಿಸುವ ಬಡ್ಡಿ ದರವನ್ನು ಅಂದರೆ ಬ್ಯಾಂಕು ದರವನ್ನು ಕಡಿಮೆ ಮಾಡಿದರೆ ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ಹೆಚ್ಚಿನ ಮೊತ್ತದ ಹಣವನ್ನು ಸಾಲವಾಗಿ ಪಡೆದು ಬೇರೆಯವರಿಗೆ ಸಾಲ ನೀಡಬಲ್ಲವು ಮತ್ತು ಇದರಿಂದ ಅರ್ಥವ್ಯವಸ್ಥೆಯಲ್ಲಿ ಹಣದ ಪೂರೈಕೆ ಏರುತ್ತದೆ. ಅಂತೆಯೇ ಕೇಂದ್ರ ಬ್ಯಾಂಕು ತೆರೆದ ಮಾರುಕಟ್ಟೆಯಲ್ಲಿ ವಾಣಿಜ್ಯ ಬ್ಯಾಂಕುಗಳ ವಿನಿಯೋಜಕಗಳನ್ನು ಖರೀದಿಸಿದಾಗ ವಾಣಿಜ್ಯ ಬ್ಯಾಂಕುಗಳಿಕೆ ನಗದು ಹಣವು ದೊರೆತು ಅವುಗಳ ಹಣ ಪೂರೈಕೆಯ ಸಾಮರ್ಥ್ಯ ಹೆಚ್ಚುತ್ತದೆ. ಅದೇ ರೀತಿ, ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕಿನಲ್ಲಿ ಕಾನೂನುಪ್ರಕಾರವಾಗಿ ಕಾಯ್ದಿರಿಸಬೇಕಾಗಿರುವ ನಗದು ಹಣದ ಪ್ರಮಾಣವನ್ನು ಕೇಂದ್ರ ಬ್ಯಾಂಕು ತಗ್ಗಿಸಿದಾಗ ವಾಣಿಜ್ಯ ಬ್ಯಾಂಕುಗಳ ಬಳಿ ಸಾಲ ನೀಡಿಕೆಗೆ ಹೆಚ್ಚಿನ ಮೊತ್ತದ ನಗದು ಶಿಲ್ಕು ಉಳಿಯುವುದರಿಂದ ಹಣದ ಪೂರೈಕೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಬ್ಯಾಂಕುದರವನ್ನು ಹೆಚ್ಚಿಸಿದಾಗ, ತೆರೆದ ಮಾರುಕಟ್ಟೆಯಲ್ಲಿ ಕೇಂದ್ರ ಬ್ಯಾಂಕು ವಾಣಿಜ್ಯ ಬ್ಯಾಂಕುಗಳಿಕೆ ವಿನಿಯೋಜಕಗಳನ್ನು ಮಾರಿದಾಗ ಮತ್ತು ಕಾಯ್ದಿಸಿದ ನಗದು ಹಣದ ಪ್ರಮಾಣವನ್ನು ಹೆಚ್ಚಿಸಿದಾಗ ವಾಣಿಜ್ಯ ಬ್ಯಾಂಕುಗಳ ಬಳಿ ಕಡಿಮೆ ನಗದು ಶಿಲ್ಕು ಉಳಿಯುವುದರಿಂದ ಅವುಗಳ ಹಣ ಪೂರೈಕೆಯ ಸಾಮರ್ಥ್ಯ ತಗ್ಗುತ್ತದ್ದೆ. ೨. ವಾಣಿಜ್ಯ ಬ್ಯಾಂಕುಗಳು: ಸಾರ್ವಜನಿಕರು ತಮ್ಮ ಬಳಿ ಇಡುವ ಠೇವಣಿಗಳನ್ನು ಬಳಸಿಕೊಂಡು ವಾಣಿಜ್ಯ ಬ್ಯಾಂಕುಗಳು ವಿವಿಧ ಜನ ವರ್ಗಗಳಿಗೆ ಸಾಲವನ್ನು ಮತ್ತು ಮುಂಗಡಗಳನ್ನು ನೀಡುತ್ತವೆ. ಈ ವಿಧದಲ್ಲಿ ವಿಣಿಜ್ಯ ಬ್ಯಾಂಕುಗಳು ಹಣದ ಪೂರೈಕೆಯನ್ನು ಮಾಡುತ್ತವೆ. ಠೇವಣಿಗಳು ಸಾಲವನ್ನು ಸೃಷ್ಟಿಸುವುದರಿಂದ ವಾಣಿಜ್ಯ ಬ್ಯಾಂಕುಗಳಿಂದ ಹಣದ ಪೂರೈಕೆಯಾಗುತ್ತದೆ. ೩.ಸರಕಾರ: ಸರಕಾರಗಳು ಕೇಂದ್ರ ಬ್ಯಾಂಕಿನಿಂದ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಸಾಲವನ್ನು ಪಡೆದು ವೆಚ್ಚವನ್ನು ಕೈಗೊಳ್ಳಬಹುದು. ಇದರಿಂದ ಹಣದ ಪುರೈಕೆಯು ಹೆಚ್ಚುತ್ತದೆ. ಅಂದರೆ ಸರಕಾರವು ಪರೋಕ್ಷವಾಗಿ ಹಣದ ಪೂರೈಕೆಯನ್ನು ಕೈಗೊಂಡಂತಾಗುತ್ತದೆ. ಸಾಮಾಜಿಕ ಮೌಲ್ಯೋತ್ಪಾದಕ ಬಂಡವಾಳ ನಿರ್ಮಾಣ ಮೊದಲಾದ ಕಾರ್ಯಗಳಿಗಾಗಿ ಸರ್ಕಾರವು ಸಾರ್ವಜನಿಕ ವೆಚ್ಚವನ್ನು ಕೈಗೊಳ್ಳಬೇಕಾಗಿರುತ್ತದೆ. ಬ್ಯಾಂಕೋದ್ಯಮ ವ್ಯವಸ್ಥೆಯಿಂದ ದೊರೆಯುವ ಸಾಲವು ಸಾರ್ವಜನಿಕ ವೆಚ್ಚವನ್ನು ಭರಿಸಲು ಪ್ರಮುಖ ಮೂಲವಾಗಿ ಬೆಳೆದಿದೆ.ಬೇರೆ ರೀತಿಯಲ್ಲಿ ಹೇಳುವುದಾದರೆ ಅಭಿವೃದ್ಧಿ ವೆಚ್ಚ ಮತ್ತು ಅಭಿವೃದ್ಧಿಯೇತರ ವೆಚ್ಚವನ್ನು ಭರಿಸಲು ಸರ್ಕಾರಗಳು ಬ್ಯಾಂಕೋದ್ಯಮ ವ್ಯವಸ್ಥೆಯಿಂದ ಸಾಲವನ್ನು ಪಡೆದುಕೊಂಡಾಗ ಹಣದ ಪೂರೈಕೆ ಸಹಜವಾಗಿ ಹೆಚ್ಚುತ್ತದೆ.