ಈ ಆಧುನಿಕ ಜಗತ್ತೀನಲ್ಲಿ, ಎಲ್ಲಾ ಚಟುವಟಿಕೆಗಳು ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುತ್ತದೆ. ಪ್ರತ್ಯೇಕವಾಗಿ, ಇಂತಹ ಚಟುವಟಿಕೆಗಳು ನೇರವಾಗಿ ಲಾಭಕ್ಕೆ ಸಂಬಂಧಪಟ್ಟಿರುತ್ತದೆ. ಒಂದು ಉದ್ಯಮ ವ್ಯವಹರಿಸಲು ಹಣಕಾಸಿನ ಪೂರೈಕೆಯ ಅಗತ್ಯವಿರುತ್ತದೆ, ಆದುದರಿಂದ ಹಣಕಾಸನ್ನು ಬಂಡವಾಳ ಅಥವಾ ಹಣಹೂಡಿಕೆ ಎಂದು ಕರೆಯಬಹುದು. ಹಣಕಾಸು ನಿರ್ವಹಣೆ ಎಂದರೆ, ಒಂದು ಉದ್ಯಮ ತಾನು ಪಡೆಯುವ ಆರ್ಥಿಕ ಸಂಪನ್ಮೂಲಗಳನ್ನು ಅದರ ತತ್ವಗಳ ಪ್ರಕಾರ ಉಪಯೋಗಿಸುವುದು. ಹಣಕಾಸು ನಿರ್ವಹಣೆಯು ಪ್ರತಿಯೊಂದು ಸಂಸ್ಥೆಗೆ ಬಹಳ ಅವಶ್ಯಕ. ಏಕೆಂದರೆ, ಯಾವ ಸಂಸ್ಥೆಗಾದರು ಅದಕ್ಕೆ ಬರುವ ಸೀಮಿತ ಹಣವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಬೇಕೆಂಬ ಅರಿವಿರುತ್ತದೆ. ಇದು ಸಾಮಾನ್ಯವಾಗಿ ಉನ್ನತ ಆಡಳಿತಮಂಡಳಿಗೆ ಸಂಬಂಧ ಪಟ್ಟದ್ದು. ಅವರು ತಮ್ಮ ಹಲವಾರು ಯೋಜನೆಗಳಿಗೆ ಬೇಕಾಗುವಷ್ಟು ಬಂಡವಾಳವನ್ನು ಊಹಿಸಿ ನಂತರ ಈ ಬಂಡವಾಳವನ್ನು ಎಷ್ಟು ಉಪಯುಕ್ತವಾಗಿ ವಿವಿಧ ಭಾಗಗಳಿಗೆ ಹಂಚಬಹುದಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಂಡವಾಳ ಯೋಜನೆಯು ಧೀರ್ಘಾವಧಿ ಹಾಗೂ ಅಲ್ಪಾವಧಿಗಳಿಗೆ ಉಪಯುಕ್ತವಾಗುತ್ತದೆ.[]

ಹಣಕಾಸಿನ ವಿಧಗಳು

ಬದಲಾಯಿಸಿ
  1. ಖಾಸಗಿ ಹಣಕಾಸು- ಇದು ವ್ಯಯಕ್ತಿಕ ಹಣಕಾಸು, ಪಾಲುದಾರಿಕೆ ಹಣಕಾಸು ಹಾಗು ವ್ಯಾಪಾರ ಹಣಕಾಸುಗಳಿಂದ ಕೂಡಿರುತ್ತದೆ.
  2. ಸಾರ್ವಜನಿಕ ಹಣಕಾಸು- ಇದು ಕೇಂದ್ರ, ರಾಜ್ಯ, ಅರೆ ಸರ್ಕಾರಗಳಿಗೆ ಸಂಬಂಧಪಟ್ಟಿರುತ್ತದೆ.

ಹಣಕಾಸು ನಿರ್ವಹಣೆಯ ಧ್ಯೇಯಗಳು

ಬದಲಾಯಿಸಿ

ಒಂದು ಉದ್ಯಮದ ವ್ಯವಸ್ಥಾಪಕ, ಹಣಕಾಸು ನಿರ್ವಹಣೆಯ ಮೂಲ ಧ್ಯೇಯಗಳನ್ನು ನಿರ್ಧರಿಸಬೇಕಾಗಿರುತ್ತದೆ. ಅವುಗಳಲ್ಲಿ, ಲಾಭಗರಿಷ್ಟೀಕರಣ ಹಾಗು ಸಂಪತ್ತುಗರಿಷ್ಟೀಕರಣಗಳು ಮುಖ್ಯವಾದವುಗಳು.

ಲಾಭಗರಿಷ್ಟೀಕರಣ

ಬದಲಾಯಿಸಿ

ಒಂದು ಉದ್ಯಮದ ಮುಖ್ಯ ಗುರಿ ಲಾಭವನ್ನು ಹೆಚ್ಚಿಸುವುದು. ಇದನ್ನು ಲಾಭಗರಿಷ್ಟೀಕರಣ ಎನ್ನುತ್ತಾರೆ. ಇದು ಒಂದು ಸಾಂಪ್ರದಾಯಿಕ ವಿಧಾನ. ಈ ಪ್ರಕ್ರಿಯೆಯಲ್ಲಿ ಯಾವ ಉದ್ಯಮವಾದರು ಅದರ ಲಾಭವನ್ನು ಹೆಚ್ಚಿಸಲು ಇರುವ ಎಲ್ಲಾ ಅವಕಾಶಗಳನ್ನು ಪರಿಗಣಿಸುತ್ತದೆ.

ಲಾಭಗರಿಷ್ಟೀಕರಣದ ಅನುಕೂಲಗಳು

ಬದಲಾಯಿಸಿ
  1. ಇದರ ಬಹುಮುಖ್ಯ ಗುರಿ ಲಾಭ ಹೆಚ್ಚಿಸವುದು.
  2. ಇದು ಲಾಭದ ವ್ಯಾಪಾರಗಳನ್ನು ತಗ್ಗಿಸುತ್ತದೆ.
  3. ಲಾಭವೇ ಉದ್ಯಮದ ಮುಖ್ಯ ಮೂಲ.
  4. ಲಾಭವು ಸಾಮಾಜಿಕ ಅಗತ್ಯಗಳನ್ನು ಈಡೇರಿಸುತ್ತದೆ.

ಅನಾನುಕೂಲಗಳು

ಬದಲಾಯಿಸಿ
  1. ಲಾಭಗರಿಷ್ಟೀಕರಣವು ಕಾರ್ಮಿಕರನ್ನು ಹಾಗು ಗ್ರಾಹಕರನ್ನು ದುರ್ಬಳಕೆ ಮಾಡಬಹುದಾದ ಸಂಧರ್ಭವಿರುತ್ತದೆ. ಇದು ಅಪಾಯಕಾರಿ.
  2. ಇದರಿಂದ ಅನ್ಯಾಯ ಹಾಗು ಭ್ರಷ್ಟಾಚಾರಗಳು ತಲೆಯೆತ್ತುವ ಅಪಾಯವಿರುತ್ತದೆ.
  3. ಇದು ಪಾಲುದಾರರ, ಗ್ರಾಹಕರ, ಸಾರ್ವಜನಿಕ ಷೇರುದಾರರ ನಡುವೆ ಅಸಮಾನತೆಯನ್ನು ಉಂಟುಮಾಡುತ್ತದೆ.

ಕುಂದುಕೊರತೆಗಳು

ಬದಲಾಯಿಸಿ
  1. ಇದು ಅಸ್ಪಷ್ಟ.
  2. ಇದು ಸಮಯ ಮುಲ್ಯವನ್ನು ನಿರ್ಲಕ್ಷಿಸುತ್ತದೆ.
  3. ಇದು ಭವಿಷ್ಯದ ಅಪಾಯಗಳನ್ನು ನಿರ್ಲಕ್ಷಿಸುತ್ತದೆ.

ಸಂಪತ್ತುಗರಿಷ್ಟೀಕರಣ

ಬದಲಾಯಿಸಿ

ಒಂದು ಉದ್ಯಮದ ಷೇರುದಾರರ ಸಂಪತ್ತನ್ನು ಹೆಚ್ಚಿಸಲು ಶ್ರಮಪಡುವ ವಿಧಾನವನ್ನು ಸಂಪತ್ತುಗರಿಷ್ಟೀಕರಣ ಎನ್ನಲಾಗುತ್ತದೆ. ಇದು ಆಧುನಿಕ ವಿಧಾನಗಳಲ್ಲಿ ಒಂದು.

ಅನುಕೂಲಗಳು

ಬದಲಾಯಿಸಿ
  1. ಇದು ಷೇರುದಾರರನ್ನು ಮಾತ್ರ ಕೇಂದ್ರೀಕರಿಸುತ್ತದೆ.
  2. ಇದು ಸಮಯ ಹಾಗು ವ್ಯವಹಾರದ ಅಪಾಯಗಳನ್ನು ಪರಿಗಣಿಸುತ್ತದೆ.
  3. ಇದು ಸಂಪನ್ಮೂಲಗಳನ್ನು ಸಮರ್ಥಕವಾಗಿ ಹಂಚಲು ಉಪಯೋಗಕ್ಕೆಬರುತ್ತದೆ.
  4. ಇದು ಸಮಾಜದ ಆರ್ಥಿಕ ಆಸಕ್ತಿಗಳನ್ನು ಖಾತ್ರಿಗೊಳಿಸುತ್ತದೆ.

ಅನಾನುಕೂಲಗಳು

ಬದಲಾಯಿಸಿ
  1. ಮೇಲಾಡಳಿತ ಮಂಡಳಿಯು ಹೆಚ್ಚಿನ ಅನುಕೂಲಗಳನ್ನು ಅನುಭವಿಸಬಹುದಾದ ಭೀತಿ.
  2. ಇದರ ಅಂತಿಮ ಉದ್ದೇಶವು ಲಾಭ ಹೆಚ್ಚಿಸುವುದಾಗಿದೆ.
  3. ಇದು ಪರೋಕ್ಷವಾಗಿ ಲಾಭ ಗರಿಷ್ಟಗೊಳಿಸುವ ವಿಧಾನ.
  4. ಇದು ಉದ್ಯಮವು ಲಾಭದಾಯಕವಾಗಿರುವಾಗ ಮಾತ್ರ ಉಪಯೋಗಕ್ಕೆ ಬರುತ್ತದೆ.
  5. ಇದಿನ ಆಧುನಿಕ ಆರ್ಥಿಕ ಚಟುವಟಿಕೆಗಳಿಗೆ ಸೂಕ್ತವಲ್ಲ.[]

ಹಣಕಾಸು ನಿರ್ವಹಣೆಯ ಕ್ರಿಯೆಗಳು

ಬದಲಾಯಿಸಿ

ಬಂಡವಾಳದ ಅಗತ್ಯಗಳನ್ನು ಅಂದಾಜಿಸುವುದು

ಬದಲಾಯಿಸಿ

ಯಾವುದೇ ವ್ಯವಸ್ಥಾಪಕ ತನ್ನ ಉದ್ಯಮಕ್ಕೆ ಬೇಕಾಗುವ ಬಂಡವಾಳದ ಅತ್ಯಗತ್ಯಗಳನ್ನು ಅಂದಾಜಿಸುವಲ್ಲಿ ತನ್ನನ್ನು ಅಳವಡಿಸಿಕೊಂಡಿರಬೇಕು. ಇದು ನಿರೀಕ್ಷಿತ ವೆಚ್ಚ, ಲಾಭ, ಹಾಗು ಉದ್ಯಮದ ನೀತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಅಂದಾಜು ಆ ಉದ್ಯಮದ ಲಾಭವನ್ನು ಆದಷ್ಟು ಹೆಚ್ಚಿಸುವಂತಿರಬೇಕು.

ಬಂಡವಾಳ ಸಂಯೋಜನೆಯ ನಿರ್ಣಯ

ಬದಲಾಯಿಸಿ

ಬಂಡವಾಳ ಅಗತ್ಯತೆಯನ್ನು ಅಂದಾಜಿಸಿದ ನಂತರ ಮುಂದೆ ಅದರ ಸಂಯೋಜನೆಯನ್ನು ಮಾಡಬೇಕು. ಇದರಲ್ಲಿ ಅಲ್ಪಾವಧಿ ಹಾಗು ಧೀರ್ಘಾವಧಿ ಸಾಲಗಳ ವಿಶ್ಲೇಷಣೆಗಳು ಒಳಗೊಂಡಿರುತ್ತದೆ. ಇದು ಒಂದು ಉದ್ಯಮದ ಷೇರು ಬಂಡವಾಳದ ಮೇಲೆ ಅವಲಂಬಿಸಿರುತ್ತದೆ. ಇದನ್ನು ಅಂದಾಜಿಸಿ ನಂತರ ಹೆಚ್ಚಿನ ಹಣವನ್ನು ಹೊರಗಿನಿಂದ ತರಿಸಬೇಕೆ ಬೇಡವೇ ಎಂದು ನಿರ್ಣಯವನ್ನು ತೆಗೆದುಕೊಳ್ಳಬಹುದು.

ಮೂಲ ಹಣದ ಆಯ್ಕೆ

ಬದಲಾಯಿಸಿ

ಮತ್ತಷ್ಟು ಹಣವೇನಾದರು ಬೇಕಿದ್ದರೆ ಉದ್ಯಮದ ಮುಂದಿರುವ ಆಯ್ಕೆಗಳು ಹೀಗಿವೆ:

  1. ಷೇರು ಅಥವಾ ಸಾಲಪತ್ರಗಳನ್ನು ವಿತರಿಸುವುದು
  2. ಬ್ಯಾಂಕು ಅಥವಾ ಬೇರೆ ಹಣಕಾಸು ಸಂಸ್ಥೆಗಳಿಂದ ಸಾಲ

ಈ ಮೇಲಿನ ಆಯ್ಕೆಗಳು ಉದ್ಯಮದ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ಹಣ ಹೂಡುವುದು

ಬದಲಾಯಿಸಿ

ಉದ್ಯಮದ ವ್ಯವಸ್ಥಾಪಕ ಬಂಡವಾಳಗಳನ್ನು ಉಪಯುಕ್ತವಾಗಿ ಹಾಗು ಸುರಕ್ಷಿತವಾಗಿ ಲಾಭತರುವ ಬಂಡವಾಳಗಳನ್ನು ಅರ್ಥೈಸಿಕೊಂಡು ಹಣಹೂಡತಕ್ಕದ್ದು.

ಹಣದ ಬಳಕೆ

ಬದಲಾಯಿಸಿ

ಉದ್ಯಮಕ್ಕೆ ಬರಬಹುದಾದ ಹಣದ ವೆಚ್ಚಗಳನ್ನು ನಿರ್ವಹಿಸಬೇಕಾಗುತ್ತದೆ. ಉದಾಹರಣೆಗೆ, ಕೂಲಿ ಹಾಗು ಸಂಬಳಗಳನ್ನು ವಿತರಿಸುವುದು, ನೀರು ಅಥವಾ ವಿದ್ಯುತ್ ವೆಚ್ಚ ಹೀಗೆ ಮುಂತಾದವುಗಳು.

ಹಣಕಾಸಿನ ನಿಯಂತ್ರಣ

ಬದಲಾಯಿಸಿ

ಒಂದು ಉದ್ಯಮದ ವ್ಯವಸ್ಥಾಪಕ ಹಣಕಾಸಿನ ಯೋಜನೆ, ಸಂಗ್ರಹ, ಬಳಕೆಗಳಲ್ಲದೆ ಅದರ ನಿಯಂತ್ರಣದ ಮೇಲೂ ಸಹ ಗಮನ ನೀಡಬೇಕಾಗುತ್ತದೆ. ಇದನ್ನು ತಿಳಿಯಲು ವಿವಿಧ ತಂತ್ರಗಳಿವೆ, ಅವುಗಳಲ್ಲಿ ಅನುಪಾತ ವಿಶ್ಲೇಷಣೆ, ಹಣಕಾಸು ಮುಂದಾಲೋಚನೆ, ವೆಚ್ಚ ಮತ್ತು ಲಾಭ ನಿಯಂತ್ರಣಗಳು ಪ್ರಮುಖವಾದವುಗಳು.[]

  1. https://en.wikipedia.org/wiki/Financial_management
  2. http://managementhelp.org/businessfinance/
  3. http://www.managementstudyguide.com/financial-management.htm