ಹಂಪಿ ಎಕ್ಸ್‍ಪ್ರೆಸ್
ಹಂಪಿ ಎಕ್ಸ್‍ಪ್ರೆಸ್ - ಇದು ಬೆಂಗಳೂರು ನಗರ ಮತ್ತು ನೈರುತ್ಯ ರೇಲ್ವೆ ಯ ಪ್ರಧಾನ ಕಚೇರಿ ಇರುವ ಹುಬ್ಬಳ್ಳಿ ನಡುವೆ ಸಾಗುವ ದೈನಂದಿನ ಎಕ್ಸ್‍ಪ್ರೆಸ್ ರೈಲು. ೧೬೫೯೧/೧೬೫೯೨ ಸಂಖ್ಯೆಗಳನ್ನು ಇದು ಹೊಂದಿದ್ದು, ಇದರ ಪ್ರಾಥಮಿಕ ನಿರ್ವಹಣೆಯನ್ನು ಹುಬಳ್ಳಿಯಲ್ಲಿ ಮಾಡಲಾಗುತ್ತದೆ.
ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆಯ ಹೆಸರನ್ನು ಇದಕ್ಕಿಡಲಾಗಿದ್ದು ಹಂಪೆಯ ಹತ್ತಿರದ ರೈಲುನಿಲ್ದಾಣವಾದ ಹೊಸಪೇಟೆಯನ್ನು ಇದು ಸಂಪರ್ಕಿಸುತ್ತದೆ.
ಮಾರ್ಗ ಮತ್ತು ವೇಳಾಪಟ್ಟಿ
ಬದಲಾಯಿಸಿಈ ರೈಲು ಬೆಂಗಳೂರು ಕ್ಯಾಂಟೋನ್ಮೆಂಟ್, ಯಲಹಂಕ, ಹಿಂದುಪುರ, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆಗಳ ಮಾರ್ಗವಾಗಿ ಸಾಗಿ ಹುಬ್ಬಳ್ಳಿಯನ್ನು ತಲುಪುತ್ತದೆ.
- ರೈಲು ಸಂಖ್ಯೆ ೧೬೫೯೧ ಹುಬಳ್ಳಿಯನ್ನು ಪ್ರತಿದಿನ ಸಂಜೆ ೫.೪೫ಕ್ಕೆ ಬಿಟ್ಟು ೫೬೭ ಕಿಲೋಮೀಟರ್ ದೂರವನ್ನು ಕ್ರಮಿಸಿ ಬೆಂಗಳೂರನ್ನು ಮರುದಿನ ಮುಂಜಾನೆ ೬.೧೦ ಗಂಟೆಗೆ ತಲುಪುತ್ತದೆ. ಪ್ರಯಾಣದ ಸಮಯ ೧೨ ಗಂ.೨೫ ನಿ. ಸರಾಸರಿ ವೇಗ ಪ್ರತಿಗಂಟೆಗೆ ೪೮ ಕಿ.ಮೀ.
- ರೈಲು ಸಂಖ್ಯೆ ೧೬೫೯೨ ಬೆಂಗಳೂರನ್ನು ರಾತ್ರಿ ೯ ಗಂಟೆಗೆ ಬಿಟ್ಟು ಮರುದಿನ ಬೆಳಿಗ್ಗೆ ೧೦.೧೦ ಗಂಟೆಗೆ ಹುಬ್ಬಳ್ಳಿಯನ್ನು ತಲುಪುತ್ತದೆ. ಪ್ರಯಾಣದ ಸಮಯ ೧೩ ಗಂ.೧೦ ನಿ. ಸರಾಸರಿ ವೇಗ ಪ್ರತಿಗಂಟೆಗೆ ೪೫ ಕಿ.ಮೀ.
ಅಪಘಾತಗಳು ಮತ್ತು ಇತರ ಘಟನೆಗಳು
ಬದಲಾಯಿಸಿ೨೨ ಮೇ ೨೦೧೨ರಂದು ೧೬೫೯೧ ಸಂಖ್ಯೆಯ ರೈಲು ಪೆನುಕೊಂಡದಲ್ಲಿ ನಿಂತಿದ್ದ ಸರಕುಸಾಗಣೆಯ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ೧೫ ಜನರು ಸತ್ತು ೭೪ ಜನರು ಗಾಯಗೊಂಡರು.