ಸ್ವಾಮಿ ರಮಾನಂದ ತೀರ್ಥ
ರಮಾನಂದ ತೀರ್ಥ ಮಹಾರಾಜರು (ವೆಂಕಟೇಶ ಭಗವಾನರಾವ್ ಕೆಳಗಿಕರ) ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ರಲ್ಲಿ ಜನಿಸಿದರು. ಇವರು ಶಿಕ್ಷಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸನ್ಯಾಸಿಗಳಾಗಿದ್ದರು.
ರಮಾನಂದ ತೀರ್ಥ ಮಹಾರಾಜರು | |
---|---|
ಜನನ | ವೆಂಕಟೇಶ ಭಗವಾನರಾವ್ ಕೆಳಗಿಕರ |
ಮರಣ | 22 ಜನವರಿ 1972 (ವಯಸ್ಸು 69) ಭಾರತ |
Cause of death | ಸಹಜ |
Resting place | ಹೈದರಾಬಾದ್, ಆಂಧ್ರ ಪ್ರದೇಶ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಶಿಕ್ಷಕ, ಸ್ವಾತಂತ್ರ್ಯ ಹೋರಾಟಗಾರ |
ಉದ್ಯೋಗದಾತ | ಮೊದಲು ಲಾತುರ್ ಜಿಲ್ಲೆಯ ಔಸಾದಲ್ಲಿ ಶಿಕ್ಷಕ |
ಗಮನಾರ್ಹ ಕೆಲಸಗಳು | ಭಾರತದ ಸ್ವಾತಂತ್ರ್ಯ ಚಳುವಳಿ, ಹೈದರಾಬಾದ್ ವಿಮೋಚನಾ ಹೋರಾಟದ ಕ್ರಿಯಾವಾದ ಹಾಗೂ ಹೈದರಾಬಾದ್ ವಿಮೋಚನಾ ಹೋರಾಟದ ಪುನರ್‍ಸಂಘಟನೆ ಮತ್ತು ನೇತೃತ್ವಕ್ಕಾಗಿ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಜನನ ಮತ್ತು ಬಾಲ್ಯ
ಬದಲಾಯಿಸಿಸ್ವಾಮಿ ರಾಮಾನಂದ ತೀರ್ಥರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ ರಂದು ಜನಿಸಿದರು.ಇವರ ತಂದೆ ಭಗವಾನರಾವ್ ಕೆಳಗಿಕರ. ರಾಮಾನಂದ ತೀರ್ಥರ ಹುಟ್ಟು ಹೆಸರು ವೆಂಕಟೇಶ.
ಶಿಕ್ಷಣ
ಬದಲಾಯಿಸಿತಮ್ಮ ಮೊದಲ ಹಂತದ ವಿದ್ಯಾಭ್ಯಾಸವನ್ನು ಇವರು ದೇವರ ಗಾಣಗಾಪುರದಲ್ಲಿ ತಮ್ಮ ದೊಡ್ಡ ಅಕ್ಕ ಗಂಗಾಬಾಯಿಯ ಬಳಿಯಲ್ಲಿ ಮಾಡಿದರು. ಬಳಿಕ ಸೊಲ್ಲಾಪುರದ ನಾರ್ಥಕೋಟ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಗಾಂಧೀಜಿ ಹಾಗು ಲೋಕಮಾನ್ಯ ತಿಲಕರ ದರ್ಶನ ಪಡೆದರು.
ಹೋರಾಟ
ಬದಲಾಯಿಸಿತಿಲಕ ವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಕಾರ್ಮಿಕ ಧುರೀಣ ಎನ್.ಎಮ್.ಜೋಶಿ ಅವರ ಕಾರ್ಯದರ್ಶಿಯಾಗಿ ದಿಲ್ಲಿಗೆ ತೆರಳಿದರು. ದಿಲ್ಲಿಯ ಹವಾಮಾನದಿಂದ ಬಳಲಿದ ವೆಂಕಟೇಶ ಅವರು ಹವಾ ಬದಲಾವಣೆಗೆಂದು ಉಸ್ಮಾನಾಬಾದ ಜಿಲ್ಲೆಯ ಹಿಪ್ಪರಗಾಕ್ಕೆ ಬಂದರು.ಅಲ್ಲಿ ಹೈದರಾಬಾದ ನಿಜಾಮನ ರಾಜ್ಯವಿತ್ತು. ಸಾಮಾನ್ಯ ಪ್ರಜೆಗಳ ಮೇಲೆ ನಿಜಾಮ ಆಡಳಿತ ನಡೆಯಿಸುತ್ತಿದ್ದ ಅತ್ಯಾಚಾರದ ವಿರುದ್ಧ ರಾಮಾನಂದರು ಪ್ರಜೆಗಳನ್ನು ಸಂಘಟಿಸಿದರು. ಹೈದರಾಬಾದ ಕಾಂಗ್ರೆಸ್ ಪಕ್ಷ ಕಟ್ಟಿದರು.ಅತ್ಯಾಚಾರದ ವಿರುದ್ಧ ಹೋರಾಟಕ್ಕಿಳಿದರು. ನಿಜಾಮ ಸರಕಾರ ರಾಮಾನಂದರನ್ನು ಬಂಧಿಸಿ ಚಂಚಲಗುಡ್ಡಾ ಸೆರೆಮನೆಗೆ ಕಳಿಯಿಸಿತು.
ನಾಯಕತ್ವ
ಬದಲಾಯಿಸಿ೧೯೪೮ ಸಪ್ಟಂಬರ ೧೧ ರಿಂದ ಸಪ್ಟಂಬರ ೧೭ ರವರೆಗೆ ಜರುಗಿದ ಹೈದರಾಬಾದ ವಿಮೋಚನಾ ಕಾರ್ಯಾಚರಣೆಯ ನಾಯಕತ್ವವನ್ನು ಇವರು ವಹಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಇವರನ್ನು ಪೂಜ್ಯ ಭಾವನೆಯಿಂದ ನೋಡುವ ಲಕ್ಷಾಂತರ ಜನರಿದ್ದಾರೆ. ಹೈದರಾಬಾದ್ ವಿಮೋಚನೆಯ ನಂತರ ರಾಜಕೀಯ ಸೇರದೆ, ಸ್ವಾಮಿ ರಾಮಾನಂದ ತೀರ್ಥರು ಆನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.[೧]
ರಾಜಕೀಯ
ಬದಲಾಯಿಸಿರಮಾನಂದ ತೀರ್ಥರು ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ೧೯೫೧ರಲ್ಲಿ ಕಾಂಗ್ರೇಶ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.[೨] [೩]
ಗೌರವ
ಬದಲಾಯಿಸಿಮಹಾರಾಷ್ಟ್ರದ ನಾಂದೇಡನಲ್ಲಿ ಇವರ ಹೆಸರಿನ ಸ್ಮಾರಣಾರ್ಥವಾಗಿ ಸ್ವಾಮಿ ರಮಾನಂದ ತೀರ್ಥ ಮರಾಠಾವಾಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.[೪]
ನಿಧನ
ಬದಲಾಯಿಸಿಸ್ವಾಮಿ ರಮಾನಂದ ತೀರ್ಥರು ೧೯೭೨ ಜನೆವರಿ ೨೨ರಂದು ಹೈದರಾಬಾದಿನಲ್ಲಿ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ https://sujankumarshetty.wordpress.com/page/24/
- ↑ https://www.prajavani.net/news/article/2014/04/12/239014.html[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು" (PDF). Archived from the original (PDF) on 2018-07-13. Retrieved 2018-08-28.
- ↑ http://www.srtmun.ac.in/en/