ಸ್ವಾತಿ ಸೋಮನಾಥ್
ಸ್ವಾತಿ ಸೋಮನಾಥ್ ಒಬ್ಬ ಭಾರತೀಯ ಕೂಚಿಪುಡಿ ನೃತ್ಯಗಾರ್ತಿ ಮತ್ತು ಆಂಧ್ರ ಪ್ರದೇಶ ರಾಜ್ಯದ ನೃತ್ಯ ಶಿಕ್ಷಕಿ. ಅವರು ಕಾಮಸೂತ್ರ, ಕಾಮಪ್ರಚೋದಕ ಪ್ರೇಮದ ಮೇಲೆ ಹಿಂದೂ ಸಾಹಿತ್ಯದ ಆಧಾರದ ಮೇಲೆ ಬ್ಯಾಲೆ ನೃತ್ಯ ಪ್ರದರ್ಶಿಸಿದರು. ಅದರ ಮೂಲಕ ಅವರು ಮನ್ನಣೆಯನ್ನೂ ಗಳಿಸಿದರು. ಅವರು ೨೦೦೬ ರಲ್ಲಿ ಕಲಾ ರತ್ನ ಪ್ರಶಸ್ತಿಯನ್ನು ಪಡೆದರು. ಅವರು ಹೈದರಾಬಾದ್‌ನಲ್ಲಿ ನೃತ್ಯ ಭಾರತಿ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಸಂಪ್ರದಾಯಿಕ ನೃತ್ಯ ಮತ್ತು ಸಂಗೀತ ಕೇಂದ್ರವನ್ನು ಸ್ಥಾಪಿಸಿದರು.
ಸ್ವಾತಿ ಸೋಮನಾಥ್ | |
---|---|
ಜನನ | ದೂಸಿ ಸ್ವಾತಿ |
ವಿದ್ಯಾಭ್ಯಾಸ |
|
ವೃತ್ತಿ | ಕೂಚುಪುಡಿ ನೃತ್ಯಗಾರ್ತಿ |
ಗಮನಾರ್ಹ ಕೆಲಸಗಳು | ಕಾಮ ಸೂತ್ರ ಆಧಾರಿತ ಬ್ಯಾಲೆ |
ಪ್ರಶಸ್ತಿಗಳು | ಕಲಾ ರತ್ನ |
ವೈಯಕ್ತಿಕ ಜೀವನ
ಬದಲಾಯಿಸಿಸ್ವಾತಿ ಬಿಹಾರದ ಚಕ್ರಧರಪುರದಲ್ಲಿ ಹಿಂದೂ ಬ್ರಾಹ್ಮಣ ಕುಟುಂಬದ, ಭಾರತೀಯ ರೈಲ್ವೇ ಉದ್ಯೋಗಿ ಸೋಮನಾಥ್ ಮತ್ತು ಲಕ್ಷ್ಮಿ ದಂಪತಿಗೆ ಜನಿಸಿದರು.[೧] ಅವರ ಕುಟುಂಬ ಶ್ರೀಕಾಕುಳಂ ಜಿಲ್ಲೆಯ ದೂಸಿ ಅಗ್ರಹಾರದಿಂದ ಬಂದಿದೆ. [೨] ಅವರಿಗೆ ಒಬ್ಬ ಸಹೋದರ ಇದ್ದಾರೆ, ಅವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಹೈದರಾಬಾದ್‌ಗೆ ತೆರಳುವ ಮೊದಲು ಪಶ್ಚಿಮ ಬಂಗಾಳದಲ್ಲಿ ಬೆಳೆದರು. ಅವರು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಕೂಚಿಪುಡಿಯಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು, [೩] ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಮಾಡಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆಯುತ್ತಿದ್ದಾರೆ. ಅವರು ತೆಲುಗು ಚಿತ್ರರಂಗದಲ್ಲಿ ಚಲನಚಿತ್ರ ನಿರ್ದೇಶಕರಾದ ಚೆವೆಲ್ಲಾ ರವಿ ಕುಮಾರ್ ಅವರನ್ನು ವಿವಾಹವಾದರು.
ಕೂಚಿಪುಡಿ ನೃತ್ಯ
ಬದಲಾಯಿಸಿಸ್ವಾತಿ ಅವರು ಶಾಲಾ ದಿನಗಳಲ್ಲಿ ಲಂಬಾಣಿ ನೃತ್ಯ ಮಾಡಿದ್ದರು. ಅವರು ೧೧ ವರ್ಷದವರಿದ್ದಾಗ ನೃತ್ಯ ಕಲಿಯಲು ಪ್ರಾರಂಭಿಸಿದರು. ನಂತರ ನಾಲ್ಕು ವರ್ಷಗಳ ಕಾಲ ಸುಮತಿ ಕುಶಲ್ ಅವರಿಂದ ಕೂಚಿಪುಡಿ ಮತ್ತು ಭರತನಾಟ್ಯವನ್ನು ಕಲಿತರು. ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದ ನಂತರ, ಅವರು ಆಗಸ್ಟ್ ೧೯೮೦ ರಲ್ಲಿ ರವೀಂದ್ರ ಭಾರತೀಯ ವೇದಿಕೆಯಲ್ಲಿ ಪಾದಾರ್ಪಣೆ ಮಾಡಿದರು. [೪] ೧೯೮೧ ರಲ್ಲಿ ಅವರ ತಂದೆಯ ಮರಣದ ನಂತರ, ಅವರ ಕುಟುಂಬವು ಕೆಳ ಮಧ್ಯಮ ವರ್ಗದಲ್ಲಿದ್ದ ಕಾರಣ, ಅವರು ತಮ್ಮ ಮನೆಯನ್ನು ಆರ್ಥಿಕವಾಗಿ ಮುನ್ನಡೆಸಲು ತಮ್ಮ ಪ್ರದರ್ಶನಗಳನ್ನು ಮುಂದುವರೆಸಿದರು. ಅವರು ಪ್ರದರ್ಶನ ಮತ್ತು ಮುಂದಿನ ಶಿಕ್ಷಣವನ್ನು ಏಕಕಾಲದಲ್ಲಿ ಮುಂದುವರೆಸಿದರು. ಸ್ವಲ್ಪ ಸಮಯದ ನಂತರ, ಅವರು ೧೬ ನೇ ವಯಸ್ಸಿನಲ್ಲಿ ತಮ್ಮದೇ ಆದ ಆರ್ಕೆಸ್ಟ್ರಾವನ್ನು ರಚಿಸಿದರು ಮತ್ತು ತಮ್ಮದೇ ಆದ ಪ್ರದರ್ಶನವನ್ನು ಪ್ರಾರಂಭಿಸಿದರು. ತಮ್ಮ ತಂದೆಯ ನೆನಪಿಗಾಗಿ, ಅವರು ತಮ್ಮ ಕೊನೆಯ ಹೆಸರನ್ನು ಸೋಮನಾಥ್ ಎಂದು ಬದಲಾಯಿಸಿದರು.
ವಾತ್ಸಾಯನ ಕಾಮಪ್ರಚೋದಕ ಪ್ರೇಮ ಹಿಂದೂ ಸಾಹಿತ್ಯ, ಕಾಮಸೂತ್ರವನ್ನು ಆಧರಿಸಿದ ಅವರ ಮ್ಯಾಲೆ ವಾತ್ಸಾಯನಿ ಕಾಮಸೂತ್ರವು ಅಪಾರ ಮನ್ನಣೆಯನ್ನು ಗಳಿಸಿತು. ಇದು ರಸಿಕರಲ್ಲಿ ಸ್ವೀಕರಿಸಲ್ಪಟ್ಟಿತು ಮತ್ತು ವೇದಿಕೆಯಲ್ಲಿ ಶೃಂಗಾರ ಉಲ್ಲೇಖಿಸಿ ಸಂಪ್ರದಾಯವಾದಿ ನೃತ್ಯಗಾರರು ಟೀಕಿಸಿದರು. [೫] [೬][೭]
ಅವರು ೧೯೯೦ರ ದಶಕದಲ್ಲಿ ಹೈದರಾಬಾದ್‌ನಲ್ಲಿ ನೃತ್ಯ ಭಾರತಿ ನೃತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. [೮] [೯] ೨೦೧೫ ರಲ್ಲಿ, ಆಂಧ್ರ ಪ್ರದೇಶ ಸರ್ಕಾರವು ೧೨ - ೧೬ ಎಕರೆ ಜಾಗ ಮಂಜೂರು ಮಾಡಿ, ಶ್ರೀಕಾಕುಲಂ ಬಳಿಯ ಕಲ್ಲೇಪಲ್ಲಿ ಗ್ರಾಮದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಕಲಿಸಲು ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಅವರನ್ನು ಬೆಂಬಲಿಸಿತು. ಆಂಧ್ರಪ್ರದೇಶ ಪ್ರಜಾ ನಾಟ್ಯಮಂಡಳಿ ಸೇರಿದಂತೆ ಇತರರು ಸರ್ಕಾರದ ಕ್ರಮವನ್ನು ಪ್ರತಿಭಟಿಸಿದರು ಮತ್ತು ಅವರು ಶ್ರೀಕಾಕುಳಂ ಜಿಲ್ಲೆಯಲ್ಲಿ ಬೆಳೆದವಳಲ್ಲವಾದ್ದರಿಂದ, ಭೂಮಿ ಹಂಚಿಕೆಗೆ ಪರ್ಯಾಯ ಸ್ಥಳೀಯ ನೃತ್ಯಗಾರರನ್ನು ಪರಿಗಣಿಸುವಂತೆ ಸೂಚಿಸಿದರು. [೧೦] [೧೧] [೧೨] ಅವರು ಅಂತಿಮವಾಗಿ ತಮ್ಮ ಗುರುಕುಲ ಅಕಾಡೆಮಿ, ಸಂಪ್ರದಾಯಂ ನೃತ್ಯ ಮತ್ತು ಸಂಗೀತ ಕೇಂದ್ರವನ್ನು ಸ್ಥಾಪಿಸಿದರು ಮತ್ತು ಕೂಚಿಪುಡಿ ಕಲಿಸುವುದರ ಜೊತೆಗೆ ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [೧೩] [೧೦] ಅವರ ಪ್ರಕಾರ, ೧೫ ಆಗಸ್ಟ್ ೨೦೧೫ ರಂದು ಭಾರತೀಯ ಸ್ವಾತಂತ್ರ್ಯ ದಿನದಂದು ಈ ಸಂಸ್ಥೆಯ ಅಡಿಪಾಯ ಹಾಕಲಾಯಿತು. ಸಂಸ್ಥೆಯು ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಕೋರ್ಸ್‌ಗಳನ್ನು ನೀಡುತ್ತದೆ.
ಅವರು ೧೦೦ ಕ್ಕೂ ಹೆಚ್ಚು ಬ್ಯಾಲೆಗಳಲ್ಲಿ ಅಭಿನಯಿಸಿದ್ದಾರೆ, ಅವುಗಳಲ್ಲಿ ಕೆಲವು ದ್ರೌಪದಿ ಆಧಾರಿತ ದ್ರೌಪದಿ, ಕಾಮಸೂತ್ರ ಆಧಾರಿತ ಕಾಮತೋ ಮೋಕ್ಷ, ಹಿಂದುತ್ವ, ಸಹೃಣಂ ಗೋವಿಂದಂ, ಸೌಂದರ್ಯ ದರ್ಶನ ರಾಮಾನುಜರ ಜೀವನ ಆಧಾರಿತ ಸೌಂದರ್ಯ ದರ್ಶನ, ಆದಿ ಶಂಕರರ ಜೀವನವನ್ನು ಆಧರಿಸಿದ ಸರ್ವಜ್ಞ ಶಂಕರ . [೧೪] [೨]
ಡಿಡಿ ಯಾದಗಿರಿ ಅವರೊಂದಿಗಿನ ಸಂದರ್ಶನದಲ್ಲಿ, ಅವರು ಒಡಿಸ್ಸಿ ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದರೂ ಮೂಲಭೂತ ವಿಷಯಗಳಿಗೆ ಸೀಮಿತವಾಗಿದ್ದರು.
ಇತರೆ ಕೆಲಸ
ಬದಲಾಯಿಸಿಅವರು ಕೂಚಿಪುಡಿ, ನೃತ್ಯ, ನವದೆಹಲಿಗಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಮತ್ತು ಸೆಂಟ್ರಲ್ ಆಡಿಷನ್ ಬೋರ್ಡ್‌ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ, ಅವರು ಹೈದರಾಬಾದ್‌ನ ಸಂಗೀತ ಮತ್ತು ನೃತ್ಯ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. [೧೫]
ಪ್ರಶಸ್ತಿಗಳು
ಬದಲಾಯಿಸಿಸ್ವಾತಿ ಅವರು ಕೂಚಿಪುಡಿಗೆ ನೀಡಿದ ಕೊಡುಗೆಗಳಿಗಾಗಿ ೨೦೦೬ರಲ್ಲಿ ಯುನೈಟೆಡ್ ಆಂಧ್ರಪ್ರದೇಶ ಸರ್ಕಾರದಿಂದ ಕಲಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. [೧೬]
ಟಿಪ್ಪಣಿಗಳು
ಬದಲಾಯಿಸಿ
ಉಲ್ಲೇಖಗಳು
ಬದಲಾಯಿಸಿ- ↑ Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.
- ↑ ೨.೦ ೨.೧ Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.
- ↑ Vishwanath, Narayana (11 January 2014). "Representing The Art of Perfection". The New Indian Express. Archived from the original on 12 ಡಿಸೆಂಬರ್ 2022. Retrieved 12 December 2022.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.
- ↑ Vishwanath, Narayana (25 November 2013). "Saving the sanctity of Kuchipudi". The New Indian Express. Retrieved 13 December 2022.
- ↑ Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.
- ↑ Ramakrishna, Lakshmi (22 March 2019). "Artist- writer Bnim: Canvas that's vast and wide". The Hindu (in Indian English). ISSN 0971-751X. Retrieved 13 December 2022.
- ↑ Vishwanath, Narayana (25 November 2013). "Saving the sanctity of Kuchipudi". The New Indian Express. Retrieved 13 December 2022.
- ↑ Bnim (23 October 2014). ""స్వాతి సోమనాథ్" – శింజారవం" [Swathi Somnath]. acchamgatelugu.com. Retrieved 13 December 2022.
- ↑ ೧೦.೦ ೧೦.೧ "Cultural centre to come up at Kallepalli". The Hindu (in Indian English). 29 January 2016. ISSN 0971-751X. Retrieved 12 December 2022.
- ↑ "ఎందుకంత ప్రేమ" [Why so much love]. Sakshi (in ತೆಲುಗು). 27 September 2015. Retrieved 13 December 2022.
- ↑ "Allocation of land to Kuchipudi dancer opposed". The Hindu (in Indian English). 4 July 2015. ISSN 0971-751X. Retrieved 13 December 2022.
- ↑ "దృశ్య కావ్యం.. నృత్య రూపకం" [Visual poetry.. Dance metaphor]. Eenadu (in ತೆಲುಗು). 8 January 2022. Retrieved 13 December 2022.
- ↑ Vishwanath, Narayana (25 November 2013). "Saving the sanctity of Kuchipudi". The New Indian Express. Retrieved 13 December 2022.Vishwanath, Narayana (25 November 2013). "Saving the sanctity of Kuchipudi". The New Indian Express. Retrieved 13 December 2022.
- ↑ Vishwanath, Narayana (25 November 2013). "Saving the sanctity of Kuchipudi". The New Indian Express. Retrieved 13 December 2022.
- ↑ "Hamsa awards are now Kalaratna". The Hindu (in Indian English). 15 August 2006. ISSN 0971-751X. Retrieved 12 December 2022.
ಬಾಹ್ಯ ಕೊಂಡಿಗಳು
ಬದಲಾಯಿಸಿ- Media related to ಸ್ವಾತಿ ಸೋಮನಾಥ್ at Wikimedia Commons