ಸ್ವಪ್ನ ಸಾದೃಶ್ಯ
ಕಮರ್ಷಿಯಲ್ ಸಿನಿಮಾಗಳ ಬಗೆಗೆ. 'ಸ್ವಪ್ನ ಸಾದೃಶ್ಯ' ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ಪ್ರಬಂಧಗಳ ಸಂಕಲನ. ಸಂವಾದ ಡಾಟ್ ಕಾಂ (www.samvaada.com) ಇದನ್ನು ಅನೇಕ ಲೇಖಕರುಗಳ ಸಹಾಯದಿಂದ ಹೊರತಂದಿದೆ. ಇದಕ್ಕೆ ಹಿರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ ಮುನ್ನುಡಿ ಬರೆದಿದ್ದಾರೆ.
ಲೇಖಕರು | ಸಂಪಾದನೆ ಕಿರಣ್ ಎಂ. ಮತ್ತು ಅನೇಕ ಲೇಖಕರು |
---|---|
ಮುಖಪುಟ ಕಲಾವಿದ | ಪ್ರಮೋದ್ ಪಿ |
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಸಿನೆಮಾ |
ಪ್ರಕಾರ | ಪ್ರಬಂಧ |
ಪ್ರಕಾಶಕರು | ಸಂವಾದ ಡಾಟ್ ಕಾಂ |
ಪ್ರಕಟವಾದ ದಿನಾಂಕ | ಡಿಸೆಂಬರ್ ೧, ೨೦೧೨ |
ಪುಟಗಳು | ೧೧೩ |
ಕನ್ನಡದಲ್ಲಿ ಸಿನಿಮಾಗಳ ಕುರಿತ ಬರಹ, ಪುಸ್ತಕಗಳು ಅತ್ಯಂತ ಕಡಿಮೆ ಇರುವ ಈ ಸಮಯದಲ್ಲಿ ಇಂಥದ್ದೊಂದು ಪುಸ್ತಕದ ಅನಿವಾರ್ಯತೆ ಇತ್ತು, ಅದೂ ಕಮರ್ಷಿಯಲ್ ಸಿನಿಮಾಗಳ ಬಗೆಗೆ. 'ಸ್ವಪ್ನ ಸಾದೃಶ್ಯ' ಕನ್ನಡದ ಕಮರ್ಷಿಯಲ್ ಸಿನಿಮಾಗಳ ಕುರಿತಂತೆ ಹೊರಬರುತ್ತಿರುವ ಮೊದಲ ವಿಮರ್ಶಾ ಲೇಖನಗಳ ಸಂಕಲನ. ಒಂದಿಡೀ ದಶಕದ ಮುಖ್ಯವೆನಿಸುವ ಹದಿಮೂರು ಸಿನಿಮಾಗಳನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಪ್ರತಿ ಸಿನಿಮಾದ ಕುರಿತೂ ಅಗತ್ಯ ವಿವರಗಳಿವೆ. ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ದಯಾನಂದ ಟಿ ಕೆ ಒಳಗೊಂಡು ಯುವಕಲಾವಿದ ಮಂಸೋರೆ ತನಕ ಹಲವು ಭರವಸೆಯ ಬರಹಗಾರರು ಬರೆದ ಲೇಖನಗಳಿವೆ
ಬಾಹ್ಯಕೊಂಡಿಗಳು
ಬದಲಾಯಿಸಿ- ಸ್ವಪ್ನ ಸಾದೃಶ್ಯ’ ಲೇಖನಗಳನ್ನು ಓದುತ್ತಾ ಜೋಗಿ ಬರೆದದ್ದು.. - ಅವಧಿಯಲ್ಲಿ
- ಕಮರ್ಷಿಯಲ್ ಸಿನೆಮಾ ಕುರಿತ ಪುಸ್ತಕ ಸ್ವಪ್ನ ಸಾದೃಶ್ಯ - ಒನ್ ಇಂಡಿಯಾ