ಸ್ಲೇಟು (ಪಾಟಿ) ಸ್ಲೇಟ್‍ ಎಂದೇ ಕರೆಯಲ್ಪಡುವ ಶಿಲೆಯಂತಹ ಗಟ್ಟಿಯಾದ ಚಪ್ಪಟೆ ವಸ್ತುವಿನ ತೆಳುವಾದ ಹಲಗೆ. ಇದನ್ನು ಬರೆಯುವ ಮಾಧ್ಯಮವಾಗಿ ಬಳಸಲಾಗುತ್ತದೆ. ಈ ಶಿಲೆಯು ಜೇಡಿಮಣ್ಣಿನಿಂದ ಹಿಡಿದು ಅಭ್ರಕದಂತಹ ಸಮಾಂತರವಾಗಿ ಜೋಡಣೆಯಾದ, ಚಪ್ಪಟೆ, ಹಲ್ಲೆಗಳಂತಹ ಖನಿಜಗಳವರೆಗೆ ಜೇಡಿ ಪದರಗಲ್ಲಿನಲ್ಲಿನ ಖನಿಜಗಳ ಮರುಸ್ಫಟಿಕೀರಣದಿಂದ ಸೃಷ್ಟಿಯಾಗುವ ರೂಪಾಂತರ ಶಿಲೆಯಾಗಿರುತ್ತದೆ.[೧]

ಬರೆಯುವ ಸ್ಲೇಟು ಸ್ಲೇಟ್ ಶಿಲೆಯ ತುಂಡನ್ನು, ಸಾಮಾನ್ಯವಾಗಿ 4x6 ಅಂಗುಲಗಳು ಅಥವಾ 7x10 ಅಂಗುಲ ಗಾತ್ರದ್ದು, ಹೊಂದಿರುತ್ತಿತ್ತು. ಇದನ್ನು ಕಟ್ಟಿಗೆಯ ಚೌಕಟ್ಟಿನಿಂದ ಆವರಿಸಲಾಗುತ್ತಿತ್ತು.[೨]

ತರಗತಿಗಳಲ್ಲಿ ಅಥವಾ ಮನೆಯಲ್ಲಿ ಮತ್ತು ಬಹು ಕೋಣೆಗಳ ಶಾಲೆಗಳಲ್ಲಿ ಬರವಣಿಗೆ ಮತ್ತು ಅಂಕಗಣಿತವನ್ನು ಅಭ್ಯಾಸ ಮಾಡಲು ಬರೆಯುವ ಸ್ಲೇಟನ್ನು ಮಕ್ಕಳು ಒಂಟಿ ಕೋಣೆ ಶಾಲೆಗಳಾಗಿ ಬಳಸುವ ಮನೆಗಳಲ್ಲಿ ಇಪ್ಪತ್ತನೇ ಶತಮಾನದವರೆಗೆ ಬಳಸುತ್ತಿದ್ದರು.

ಉಲ್ಲೇಖಗಳು ಬದಲಾಯಿಸಿ

  1. Robert N. Pierport, "Slate Roofing", APT Bulletin, Vol. 19(2) (1987), 10.
  2. "Standard Sizes of Blackboard Slate", U.S Department of Commerce: National Bureau of Standards (1966), 3.
"https://kn.wikipedia.org/w/index.php?title=ಸ್ಲೇಟು&oldid=967400" ಇಂದ ಪಡೆಯಲ್ಪಟ್ಟಿದೆ