ಸ್ಪೇಸ್ ನೀಡಲ್, ಸಿಯಾಟಲ್
'ಸ್ಪೇಸ್ ನೀಡಲ್ ಟವರ್,[೧] ಸಿಯಾಟಲ್ ನಗರದಲ್ಲಿ ಪ್ರಮುಖವಾಗಿ ಗೋಚರಿಸುವ ಅತ್ಯುತ್ತಮ ಮಾನವ ನಿರ್ಮಿತ ಶಿಖರಗಳಲ್ಲೊಂದು. ಸಿಯಾಟಲ್ ನಗರ, ಉತ್ತರ ಅಮೆರಿಕೆಯ, ಉತ್ತರ ಪಶ್ಚಿಮದಲ್ಲಿದೆ. 'ವಾಶಿಂಗ್ಟನ್ ರಾಜ್ಯ,' ದ ಪ್ರಮುಖ ನಗರಗಳಲ್ಲೊಂದು. ವಿಶ್ವದ ಅತ್ಯಂತ ಹಣವಂತ 'ಬಿಲ್ ಗೇಟ್ಸ್,' ರವರ, 'ಮೈಕ್ರೋಸಾಫ್ಟ್ ಕಂಪೆನಿಯ ಪ್ರಮುಖ ಕಚೇರಿ,' ಯಿರುವುದು ಈ ನಗರದಲ್ಲೇ. ಪಕ್ಕದ ದ್ವೀಪವೊಂದರಲ್ಲಿ 'ಬಿಲ್ ಗೇಟ್ ರ ಭವ್ಯವಾಸದ- ಭವನ,' ವಿದೆ. ಈ ನಗರದ ಭಾಗದಲ್ಲೇ, ವಿಶ್ವ-ವಿಖ್ಯಾತ, 'ವಿಮಾನ ತಯಾರಿಕೆಯ ಘಟಕ,' ವಿದೆ. ಹವಾಮಾನಗಳ ವೈಪರೀತ್ಯವಿರುವ ಈ ನಗರದಲ್ಲಿ ಕಾಫಿಯ ಪರಿಮಳ ಎಲ್ಲೆಲ್ಲೂ ಆವರಿಸಿರುತ್ತದೆ. ವಸ್ತುಸಂಗ್ರಹಾಲಯಗಳ ನೆಲೆವೀಡಾಗಿದೆ.
'Space needle' 'ಸಿಯಾಟಲ್,' ನಗರದ ಅತ್ಯಂತ ಜನಪ್ರಿಯ ತಾಣ
ಬದಲಾಯಿಸಿ'ಸ್ಪೇಸ್ ನೀಡಲ್,'[೨] ಸಿಯಾಟಲ್ ನಗರದ ’ಸಿಯಾಟಲ್ ಸೆಂಟರ್,' ಭಾಗದಲ್ಲಿರುವ ಒಂದು ಶೋಭಾಯಮಾನವಾದ-ಕಳಸದಂತೆ . ೧೯೬೨ ರ’ 'ವರ್ಲ್ಡ್ ಫೇರ್,’ ನ ಸಮಯದಲ್ಲಿ 'ಈ ಅದ್ಭುತ ಟವರ್' ನ್ನು ನಿರ್ಮಿಸಲಾಯಿತು.(೬೦೫ ಅಡಿ ಎತ್ತರ) ಈ ಟವರ್ ಮೇಲೆ ಕುಳಿತು ನಗರದ ೩೬೦ ಯನ್ನು ವೀಕ್ಷಿಸಲು ಅನುಕೂಲವಿದೆ. 'ಪೆಸಿಫಿಕ್ ಸೈನ್ಸ್ ಸೆಂಟರ್', ಅಥವಾ ’ಇಮ್ಯಾಕ್ಸ್ ಥಿಯೇಟರ್ ’ ನಲ್ಲಿ ಚಲನ-ಚಿತ್ರವನ್ನು ವೀಕ್ಷಿಸಲು ಸಾಧ್ಯವಿದೆ. ಹತ್ತಿರದಲ್ಲೇ ಉದ್ಯಾನಗಳು, ಕಲಾ-ಮಂದಿರಗಳಿವೆ, ಸುಂದರವಾದ ನೀರಿನ ಚಿಲುಮೆಗಳಿವೆ. ಅಲ್ಲಿನ ಸುಮಾರು ೨೦ ರೆಸ್ಟೋರಾಂಟ್ ಗಳಲ್ಲಿ ಖಾದ್ಯಪದಾರ್ಥಗಳ ರುಚಿಯನ್ನು ಸವಿಯಬಹುದು. ವಿಶ್ವ ಪ್ರಸಿದ್ಧ 'ಸ್ಟಾರ್‌ಬಕ್ಸ್, [೩]' ಕಾಫೀ ಅಂಗಡಿಗಳು ನಗರದಲ್ಲೆಲ್ಲಾ ಹಬ್ಬಿವೆ. ಕೇವಲ ಸಿಯಾಟಲ್ ನಗರವಲ್ಲದೆ, ಅಮೆರಿಕಾದ್ಯಂತ 'ಸ್ಟಾರ್ ಬಕ್ ಕಾಫೀ ಶಾಪ್,' ಗಳು ನಮಗೆ ಲಭ್ಯವಿವೆ. ಸನ್. ೧೯೭೧ ರಲ್ಲಿ ಅತ್ಯಂತ ಪ್ರಸಿದ್ಧಿಯಾದ ಸ್ಟಾರ್ ಬಕ್ಸ್ ಕಾಫಿ ಹೋಟೆಲ್, 'ಸಿಯಾಟಲ್ ಡೌನ್ ಟೌನ್ ನ ಮಾರ್ಕೆಟ್' ಬಳಿ ಶುರುವಾಯಿತು. ರುಚಿಯಾದ ಸ್ಟ್ರಾಂಗ್ ಸ್ಟಾರ್ ಬಕ್ಸ್, ಕಾಪಿಸಿನೋ ಕಾಫಿ ಕುಡಿಯದೆ ಹೋದರೆ, ಸಿಯಾಟೆಲ್ ನಗರ ಪೂರ್ಣ ದರ್ಶಿಸಿದಂತೆ ಭಾಸವಾಗುವುದಿಲ್ಲ. ವಿಶ್ವದಲ್ಲೆಲ್ಲಾ ಸ್ಟಾರ್ ಬಕ್ಸ್ ಕಾಫಿಗೆ ಬಹಳ ಬೇಡಿಕಿಯಿದೆ. ಭಾರತದಲ್ಲೂ ಮುಂಬಯಿ ನಗರದಲ್ಲಿ ಪ್ರಥಮವಾಗಿ 'ಸ್ಟಾರ್ ಬಕ್ಸ್ ಕಾಫಿ ರೆಸ್ಟೊರಾಂಟ್ ಇತ್ತೀಚೆಗೆ ಶುರುವಾಗಿದೆ. (೨೦೧೩) ಸುಂದರ ಸರೋವರಗಳು, ಹಸಿರು ಹಬ್ಬಿಸಿ ನಿಂತ ಪೈನ್ ಮರಗಳು,ಕರ್ನಾಟಕದ ಪಶ್ಚಿಮ ಘಟ್ಟದಂತೆ ಕಾಣಿಸುವ ಬೆಟ್ಟಗಳ ಸಾಲು, ಲೇನ್ ಶಿಸ್ತನ್ನು ಪಾಲಿಸಿ ಭರ್ರನೆ ವೇಗವಾಗಿ ಓಡುವ ಕಾರುಗಳು, ಪ್ರವಾಸಿಗರಿಗೆ ಮುದಕೊಡುತ್ತವೆ. ನಗರವೆಲ್ಲವೂ ಸ್ವಚ್ಛತೆಗೆ ಮೊದಲ ಆದ್ಯತೆ. ಶಿಸ್ತು ಮತ್ತು ಹವಾಗುಣದಲ್ಲಿ ಏರಿಳಿತ, ಚಳಿಗಾಲದಲ್ಲಿ ಚಿನ್ನದ ಬಣ್ಣದ ಲೇಪವಿರುವ ಮಿರುಗುವ ಮರದ ಎಲೆಗಳು ಇಲ್ಲಿನ ವಿಶೇಷತೆಗಳು.
ಪ್ರವಾಸಿಗಳ ಸ್ವರ್ಗ
ಬದಲಾಯಿಸಿ"ಎಮರಾಲ್ಡ್ ಸಿಟಿ," ಯೆಂದೇ ಹೆಸರುವಾಸಿಯಾಗಿರುವ, ಸಿಯಾಟಲ್ ನ ಮತ್ತೊಂದು ವಿಶೇಷತೆಯೆಂದರೆ, ಊರಿನ ಬಳಿಯಲ್ಲೇ ಇರುವ, 'ಪೆಸಿಫಿಕ್ ಸಮುದ್ರ'. ಸಮುದ್ರದಮೇಲೆ 'ಮೋಟಾರ್ ಬೋಟ್ ನ ರೇಸ್,' ಗಳಲ್ಲಿ ಪಾಲ್ಗೊಳ್ಳಬಹುದು. 'ಕೆರೋಸಿಲ್,' ಗಳಲ್ಲಿ ಅಡಬಹುದು, ಅಥವಾ ಬೇಕಾದಷ್ಟು 'ವೀಡಿಯೋ ಗೇಮ್,' ಗಳು ಮೂಲೆಮೂಲೆಗಳಲ್ಲಿ ಲಭ್ಯವಿವೆ.
ಶಾಪಿಂಗ್ ಗೆ ಸುಪ್ರಸಿದ್ಧ ಸ್ಥಳ
ಬದಲಾಯಿಸಿಶಾಪಿಂಗ್ ಗೆ ಸಿಯಾಟಲ್ ಒಳ್ಳೆಯ ಸರಿಯಾದ ಜಾಗ. 'ಪುಸ್ತಕಗಳು', 'ಫ್ಯಾಷನ್ ಬಟ್ಟೆ-ಬರೆಗಳು', ಹಾಗೂ 'ವ್ಯಾನಿಟಿ ಬ್ಯಾಗ್ ಗಳು' ಇತ್ಯಾದಿಗಳನ್ನು ಅಲ್ಲಿನ 'ಸುಪ್ರಸಿದ್ಧ ಶಾಪಿಂಗ್ ಮಾಲ್' ನಲ್ಲಿ ಖರೀದಿಸಬಹುದು. ಸಮುದ್ರದ ವಿಶೇಷ-ತಿಂಡಿತಿನಸುಗಳಾದ, ’ಕಿಂಗ್ ಕ್ರಾಬ್', 'ಸಾಲೋಮನ್,' 'ಕಾಡ್ ಮತ್ತು ಹಾಲಿಬಟ್,' ಇಲ್ಲಿ ಸಿಗುತ್ತವೆ. 'ಪೈಕ್ ಪ್ಲೇಸ್ ಮಾರ್ಕೆಟ್,' ಕೂಡಾ ಹತ್ತಿರದಲ್ಲಿದೆ. ಮೆಕ್ಸಿಕೋದ ಬಟ್ಟೆಬರೆಗಳು, ಪಾಟರಿ, ಸ್ಪೋರ್ಟ್ಸ್ ಸಾಮಾನುಗಳು, ಮ್ಯಾಗಜೈನ್, ಪುಸ್ತಕಗಳು ಇತ್ಯಾದಿಗಳು ಸಿಗುತ್ತವೆ.
ಬಗೆ-ಬಗೆಯ ವಸ್ತು-ಸಂಗ್ರಹಾಲಯಗಳು
ಬದಲಾಯಿಸಿಸಿಯಾಟಲ್ ನಗರದ ಬಗ್ಗೆ ವಿಚಾರಿಸಿದರೆ, ನಮಗೆ ಮಾಹಿತಿಗಳು ಸಿಗುವ ಪ್ರಕಾರ, ೧೯೦ ಆರ್ಟ್ ಗ್ಯಾಲರಿಗಳು, ೨೯ ಪ್ರೊಫೆಶನಲ್ ಥಿಯೇಟರ್ ಗಳು, ೧೦ 'ಆರ್ಟ್ಸ್ ಮತ್ತು 'ಹೆರಿಟೇಜ್ ವಸ್ತು-ಸಂಗ್ರಹಲಾಯಗಳು', ಇವೆ. ಇವೆಲ್ಲಾ ಪುರಾತನ ಸಿಯಾಟಲ್ ನಗರದ ಮೇಲೆಯೇ ನಿರ್ಮಾಣವಾಗಿವೆ. ಇಲ್ಲಿನ 'ಎಸ್ಪ್ರೆಸ್ಸೋ ಕಾಫಿ,' ಯ ಪರಿಮಳ ಜೋರಾಗಿರುತ್ತದೆ. ಈ ಬ್ರಾಂಡ್ ನ ಕಾಫಿ ಅಮೆರಿಕದಲ್ಲೆಲ್ಲಾ ಪ್ರಖ್ಯಾತವಾಗಿದೆ.
ವರ್ಷವಿಡೀ ಕಾರ್ಯಕ್ರಮಗಳ ಸಮರ್ಥ-ಆಯೋಜನೆ
ಬದಲಾಯಿಸಿಸಿಯಾಟಲ್ ನಗರದ "ಕ್ವೆಸ್ಟ್ ಸ್ಟೇಡಿಯಮ್", ನಲ್ಲಿ ವರ್ಷವಿಡೀ ಏನಾದರೊಂದು ಕಾರ್ಯಕ್ರಮಗಳನ್ನು ಆಯೋಜನೆಮಾಡುವ ಕೆಲಸ. ಸಂಗೀತ,'ಸೀ ಹಾಕ್ಸ್ ಫುಟ್ಬಾಲ್ ಆಟ,' 'ಬೇಸ್ಬಾಲ್ ಆಟ,'ವಿರುತ್ತದೆ. ಆಗಸ್ಟ್ ತಿಂಗಳಿನಲ್ಲಿ ಪ್ರತಿವರ್ಷವೂ 'ವಾಶಿಂಗ್ಟನ್ ಲೇಕ್,' ನಲ್ಲಿ ಆಯೋಜಿಸಲಾಗುವ ’ಸೀಫೇರ್ ಚವರ್ಲೆಟ್ ಕಪ್,' ನಿಜಕ್ಕೂ ಅತಿ-ಆಕರ್ಷಣೀಯವಾಗಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ "'ಸ್ಪೇಸ್ ನೀಡಲ್ ಟವರ್, ಸಿಯಾಟಲ್ ನಗರದ ಅತ್ಯಂತ ಪ್ರಸಿದ್ಧ ಪರ್ಯಟಕರ ಮೆಚ್ಚಿನ ತಾಣವೆಂದು ಹೆಸರುವಾಸಿಯಾಗಿದೆ". Archived from the original on 2014-02-13. Retrieved 2014-07-08.
- ↑ ಪ್ರಜಾವಾಣಿ,೦೨-೨೩-೨೦೧೪, ಸಿಯಾಟಲ್ ಕನ್ನಡಿ ಸ್ಪೇಸ್ ನೀಡಲ್
- ↑ "'Original Starbucks, in Seattle'". Archived from the original on 2014-03-22. Retrieved 2014-07-08.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)