ಸ್ನಾನದ ಮನೆಯು (ಬಚ್ಚಲು) ವೈಯಕ್ತಿಕ ಸ್ವಚ್ಛತಾ ಚಟುವಟಿಕೆಗಳ ಉದ್ದೇಶಗಳಿಗಾಗಿ ಮನೆಯಲ್ಲಿ ಅಥವಾ ಹೊಟೆಲಿನಲ್ಲಿರುವ ಕೋಣೆ.[೧] ಸಾಮಾನ್ಯವಾಗಿ, ಹೊಟೆಲುಗಳಲ್ಲಿನ ಸ್ನಾನದ ಮನೆಗಳು ಸಂಡಾಸು, ತೊಳೆಗುಂಡಿ ಮತ್ತು ಸ್ನಾನದ ತೊಟ್ಟಿ, ಅಥವಾ ಶಾವರ್, ಅಥವಾ ಎರಡನ್ನೂ ಹೊಂದಿರುತ್ತವೆ. ಕೆಲವು ದೇಶಗಳಲ್ಲಿ, ಸಾಮಾನ್ಯವಾಗಿ ಸ್ನಾನದ ಮನೆಯಲ್ಲಿ ಸಂಡಾಸನ್ನು ಅಂತರ್ಗತಗೊಳಿಸಲಾಗಿರುತ್ತದೆ. ಇತರ ಸಂಸ್ಕೃತಿಗಳು ಇದನ್ನು ಶುಚಿಯಲ್ಲದ್ದು ಅಥವಾ ಅಪ್ರಾಯೋಗಿಕವೆಂದು ಪರಿಗಣಿಸಿ ಆ ಜೋಡಣೆಗಾಗಿ ಅದರ ಸ್ವಂತದ ಮತ್ತೊಂದು ಕೋಣೆಯನ್ನು ನೀಡುತ್ತವೆ. ಗುಂಡಿಯಿರುವ ಕಕ್ಕಸಿನ ವಿಷಯದಲ್ಲಿ, ಶೌಚಾಲಯವು ಮನೆಯ ಹೊರಗಡೆಯೂ ಇರಬಹುದು. ಸಂಡಾಸು ಸ್ನಾನದ ಮನೆಯಲ್ಲಿ ಸೇರಿರುತ್ತದೆಯೋ ಅಥವಾ ಇಲ್ಲವೋ ಎಂಬುದು ಮನೆಯಲ್ಲಿ ಲಭ್ಯವಿರುವ ಸ್ಥಳದ ಪ್ರಶ್ನೆಯೂ ಆಗಿರಬಹುದು.

ಫ಼್ರಾನ್ಸ್‌ನಲ್ಲಿನ ಒಂದು ಸ್ನಾನದ ಮನೆ, ಸ್ನಾನದ ತೊಟ್ಟಿ ಮತ್ತು ಶಾವರನ್ನು ಹೊಂದಿದೆ

ಐತಿಹಾಸಿಕವಾಗಿ, ಸ್ನಾನವು ಹಲವುವೇಳೆ ಸಾಮೂಹಿಕ ಚಟುವಟಿಕೆಯಾಗಿತ್ತು. ಇದು ಸಾರ್ವಜನಿಕ ಸ್ನಾನಗೃಹಗಳಲ್ಲಿ ನಡೆಯುತ್ತಿತ್ತು. ಕೆಲವು ದೇಶಗಳಲ್ಲಿ ಶರೀರವನ್ನು ಸ್ವಚ್ಛಗೊಳಿಸುವ ಹಂಚಿಕೊಂಡ ಸಾಮಾಜಿಕ ಅಂಶವು ಈಗಲೂ ಮುಖ್ಯವಾಗಿದೆ, ಉದಾಹರಣೆಗೆ ಜಪಾನ್‍ನಲ್ಲಿನ ಸೆಂಟೊ ಮತ್ತು ಇಸ್ಲಾಮೀ ವಿಶ್ವದಾದ್ಯಂತದ ಟರ್ಕಿಷ್ ಸ್ನಾನಗೃಹ.

ಉಲ್ಲೇಖಗಳು ಬದಲಾಯಿಸಿ