ಸೋಸ್ಯೊ ಭಾರತದ ಒಂದು ಅನಿಲಗೂಡಿಸಿದ ಪಾನೀಯವಾಗಿದ್ದು (ಏರೇಟಡ್ ಡ್ರಿಂಕ್) ಮುಖ್ಯವಾಗಿ ಭಾರತದ ಪಶ್ಚಿಮ ಮತ್ತು ಉತ್ತರದ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಉತ್ಪಾದಿತವಾಗಿ ಮಾರಾಟವಾಗುತ್ತದೆ. ಇದು ಸೂರತ್‍ನಲ್ಲಿ ನೆಲೆಗೊಂಡಿದೆ.[೧]

ಸೋಸ್ಯೊ ಭಾರತದ ಸ್ವಾತಂತ್ರ್ಯ ಹೋರಾಟಸ್ವದೇಶಿ ಚಳುವಳಿಯ ಉತ್ಪನ್ನವಾಗಿದೆ. ಮೋಹ್ಸೀನ್ ಹಜೂರಿ ಸೋಸ್ಯೊವನ್ನು ೧೯೨೭ರಲ್ಲಿ ಯುಕೆಯ ಪಾನೀಯವಾದ ವಿಮ್ಟೊಗೆ ಭಾರತೀಯ ಪರ್ಯಾಯವಾಗಿ ಪರಿಚಯಿಸಿದರು.

ಸೋಸ್ಯೊ ದ್ರಾಕ್ಷಿ ಮತ್ತು ಸೇಬಿನ ರಸ ಜೊತೆಗೆ ಜರ್ಮನಿ ಹಾಗೂ ಇಟಲಿಯಿಂದ ಆಮದು ಮಾಡಿಕೊಳ್ಳಲಾದ ಕೆಲವು ಘಟಕಾಂಶಗಳಿರುವ ಮಿಶ್ರಣವಾಗಿರುತ್ತದೆ.[೨]

ಪ್ರತಿ ವರ್ಷ ೫೦ ದಶಲಕ್ಷ ಸೋಸ್ಯೊ ಬಾಟಲಿಗಳನ್ನು ಸೇವಿಸಲಾಗುತ್ತದೆ, ಮುಖ್ಯವಾಗಿ ಸೂರತ್ ಮತ್ತು ಬಾಟ್ಲಿಂಗ್ ಕಾರ್ಖಾನೆಗಳಿರುವ ಗುಜರಾತ್ ಹಾಗೂ ಮಹಾರಾಷ್ಟ್ರದ ಭಾಗಗಳಲ್ಲಿ.

ಉಲ್ಲೇಖಗಳು ಬದಲಾಯಿಸಿ

  1. "India's oldest fizzy drink Sosyo plans to become a national brand". timesofindia-economictimes. 19 August 2015. Retrieved 18 April 2016.
  2. Khurana, Ashlesha (2009-03-01). "Sosyo: Gandhi-inspired drink close to whisky-rum cocktail!". The Times of India. Surat. Retrieved 2014-04-04.
"https://kn.wikipedia.org/w/index.php?title=ಸೋಸ್ಯೊ&oldid=991208" ಇಂದ ಪಡೆಯಲ್ಪಟ್ಟಿದೆ