ಸೋಲಂಗ್ ಕಣಿವೆ
ಸೋಲಂಗ್ ಕಣಿವೆಯು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಕಣಿವೆಯ ಮೇಲ್ಭಾಗದಲ್ಲಿರುವ ಒಂದು ಪಾರ್ಶ್ವ ಕಣಿವೆ. ರೋಹ್‍ತಾಂಗ್ ಕಣಿವೆಮಾರ್ಗಕ್ಕೆ ಹೋಗುವ ಮಾರ್ಗದಲ್ಲಿ ಇದೆ. ಇದು ಬೇಸಿಗೆ ಮತ್ತು ಚಳಿಗಾಲದ ಕ್ರೀಡಾ ಸನ್ನಿವೇಶಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ನೀಡಲಾಗುವ ಕ್ರೀಡೆಗಳಲ್ಲಿ ಧುಮುಕುಕೊಡೆ, ಪ್ಯಾರಾಗ್ಲೈಡಿಂಗ್, ಸ್ಕೇಟಿಂಗ್ ಮತ್ತು ಜೋರ್ಬಿಂಗ್ ಸೇರಿವೆ.
ಹುಲ್ಲುಹಾಸಿನ ದೈತ್ಯ ಇಳಿಜಾರುಗಳು ಸೋಲಂಗ್ ಕಣಿವೆಯಲ್ಲಿವೆ ಮತ್ತು ಜನಪ್ರಿಯ ಸ್ಕೀ ರೆಸಾರ್ಟ್ ಆಗಿ ಇದಕ್ಕೆ ಖ್ಯಾತಿಯನ್ನು ನೀಡುತ್ತವೆ. ಸೋಲಂಗ್ ಕಣಿವೆಯು ಇಲ್ಲಿ ಮಾರಾಟವಾಗುವ ಚಹಾಕ್ಕೆ ಹೆಸರುವಾಸಿಯಾಗಿದೆ.
ಮೇ ತಿಂಗಳಿನಿಂದ ಪ್ರಾರಂಭವಾಗುವ ಬೇಸಿಗೆಯ ತಿಂಗಳುಗಳಲ್ಲಿ ಹಿಮ ಕರಗುತ್ತದೆ ಮತ್ತು ನಂತರ ಸ್ಕೀಯಿಂಗ್‍ನ್ನು ಜ಼ಾರ್ಬಿಂಗ್ (2 ಜನರಿಗೆ ಸ್ಥಳಾವಕಾಶವಿರುವ ದೈತ್ಯ ಚೆಂಡನ್ನು 200 ಮೀಟರ್ ಬೆಟ್ಟದ ಮೇಲಿನಿಂದ ಕೆಳಗೆ ಉರುಳಿಸಲಾಗುತ್ತದೆ), ಪ್ಯಾರಾಗ್ಲೈಡಿಂಗ್, ಧುಮುಕುಕೊಡೆ ಮತ್ತು ಕುದುರೆ ಸವಾರಿಯಿಂದ ಬದಲಾಯಿಸಲಾಗುತ್ತದೆ. ಸ್ಕೀ ಹಿಮಾಲಯ ರಜ್ಜುಪಥವನ್ನು ಇತ್ತೀಚೆಗೆ ತೆರೆಯಲಾಯಿತು.[೧] ಶಿಖರಕ್ಕೆ ಹೋಗುವುದು ಎಟಿವಿಗಳು, ರಜ್ಜುಪಥ ಅಥವಾ ಏರಿಕೆ (ಚಾರಣ) ಮೂಲಕ ಸಾಧ್ಯವಿದೆ.
ಛಾಯಾಂಕಣ
ಬದಲಾಯಿಸಿ-
ಸೋಲಂಗ್ ಕಣಿವೆಯ ವಿದ್ಯುದಾಗಾರ
-
ಸೋಲಂಗ್ ಕಣಿವೆಯ ಪ್ಯಾರಾಗ್ಲೈಡಿಂಗ್ ಮೈದಾನ/ರಜ್ಜುಪಥ (28-02-2019)