ಸೋನಾಕ್ಷಿ ಅವರು ಕನ್ನಡ ಚಲನಚಿತ್ರ ನಟಿ. ಇವರು ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದು ಮೂರೇ ವರ್ಷವಾದರೂ ಇವರು ತಮ್ಮ ಕುಂತೀಪುತ್ರ ಮತ್ತು ಮೋಜುಗಾರ ಸೊಗಸುಗಾರ ಚಿತ್ರಗಳ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು.

ಸೋನಾಕ್ಷಿ
ಕುಂತೀಪುತ್ರ ಚಲನಚಿತ್ರದಲ್ಲಿ ಸೋನಾಕ್ಷಿ
ಜನನ
ವೃತ್ತಿ(ಗಳು)ನಟಿ, ರೂಪದರ್ಶಿ
ಸಕ್ರಿಯ ವರ್ಷಗಳು೧೯೯೪-೧೯೯೬

ಸಿನಿಮಾ ಜೀವನ

ಬದಲಾಯಿಸಿ

ಸೋನಾಕ್ಷಿ ಅವರ ಮೊದಲ ಚಿತ್ರ ಕುಂತೀಪುತ್ರವನ್ನು ವಿಜಯ್ ಅವರು ನಿರ್ದೇಶಿಸಿದ್ದರು. ಇದರಲ್ಲಿ ಇವರು ಡಾ| ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದರು. ಇದರಲ್ಲಿ ಇವರ "ಈ ಪ್ರೇಮ ಮರೆಯದ ಮನಸಿನ ಸಂಗಮ" ಗೀತೆ ತುಂಬಾ ಪ್ರಸಿದ್ಧವಾಗಿತ್ತು. ವಿಷ್ಣುವರ್ಧನ್ ಮತ್ತು ಸೋನಾಕ್ಷಿ ಅವರ ಯಶಸ್ವಿ ಜೋಡಿ ಯಮಕಿಂಕರ, ಮೋಜುಗಾರ ಸೊಗಸುಗಾರ ಮತ್ತು ಹೆಲೋ ಡ್ಯಾಡಿ ಚಿತ್ರಗಳಲ್ಲಿ ಅಭಿನಯಿಸಿದರು.

ವಿಷ್ಣುವರ್ಧನ್ ನಾಯಕಿ

ಬದಲಾಯಿಸಿ

ಇವರ ನಾಲ್ಕೂ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೇ ನಾಯಕರಾಗಿದ್ದರಿಂದ ಇವರಿಗೆ ವಿಷ್ಣುವರ್ಧನ್ ಅವರ ನಾಯಕಿ ಎಂದೇ ಜನ ಕರೆಯುತ್ತಿದ್ದರು.

ಸೋನಾಕ್ಷಿ ಅವರ ಅಭಿನಯದ ಚಲನಚಿತ್ರಗಳು

ಬದಲಾಯಿಸಿ
ಕೀಲಿ
  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಚಿತ್ರದ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೧೯೯೪ ಕುಂತೀ ಪುತ್ರ [] [] ಮಾಲಾ "ಸೂರ್ಯ/ರವಿ" ಆಗಿ ವಿಷ್ಣುವರ್ಧನ್ [] ವಿಜಯ್ ಕನ್ನಡ
೧೯೯೫ ಯಮ ಕಿಂಕರ [] ವಿಷ್ಣುವರ್ಧನ್ , ಟೈಗರ್ ಪ್ರಭಾಕರ್ ಟೈಗರ್ ಪ್ರಭಾಕರ್ ಕನ್ನಡ ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರು ಯಮನಾಗಿಯೂ ವಿಷ್ಣುವರ್ಧನ್ ಅವರು ಭೂಲೋಕಕ್ಕೆ ಹುಡುಗಿಯೊಬ್ಬಳ ಪ್ರಾಣವನ್ನು ತರಲೆಂದು ಬಂದು ಆಕೆಯ ಪ್ರೇಮದಲ್ಲಿ ಸಿಲುಕುವ ಯಮನ ದೂತನಾಗಿಯೂ ನಟಿಸಿದ್ದಾರೆ. ಇದಕ್ಕೆ ರಾಜನ್ ನಾಗೇಂದ್ರ ಅವರು ಸಂಗೀತ ನಿರ್ದೇಶಿಸಿದ್ದಾರೆ
ಮೋಜುಗಾರ ಸೊಗಸುಗಾರ [] ಅಂಜನಾ ವಿಷ್ಣುವರ್ಧನ್ ವಿಜಯ್ ಕನ್ನಡ ಇದು ವಿಷ್ಣುವರ್ಧನ್ ಅವರ ೧೫೦ನೇ ಸಿನಿಮಾ ಆಗಿತ್ತು. [] ಇದು ೧೯೬೪ರಲ್ಲಿ ತೆರೆಕಂಡ ತೆಲುಗು ಚಿತ್ರ "ರಾಮುಡು ಭೀಮುಡು" ವಿನ ರಿಮೇಕ್ ಆಗಿದೆ. ಇದರಲ್ಲಿ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ
೧೯೯೬ ಹಲೋ ಡ್ಯಾಡಿ [] ವಿಷ್ಣುವರ್ಧನ್ ಬಿ ನಾಗಣ್ಣ ಕನ್ನಡ

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ