ಸಾಲೊಮನ್ ದ್ವೀಪಗಳು
(ಸೊಲೊಮನ್ ದ್ವೀಪಗಳು ಇಂದ ಪುನರ್ನಿರ್ದೇಶಿತ)
ಸಾಲೊಮನ್ ದ್ವೀಪಗಳು ಮೆಲಾನೇಷ್ಯಾದ ಒಂದು ದ್ವೀಪಗುಚ್ಛವಾಗಿರುವ ರಾಷ್ಟ್ರ. ಈ ದೇಶವು ಶಾಂತ ಮಹಾಸಾಗರದಲ್ಲಿ ಪಾಪುವ ನ್ಯೂಗಿನಿಯ ಪೂರ್ವಕ್ಕಿದೆ. ಸುಮಾರು ಒಂದು ಸಾವಿರ ದ್ವೀಪಗಳ ಸಮೂಹವಾಗಿರುವ ಸಾಲೊಮನ್ ದ್ವೀಪಗಳ ಒಟ್ಟು ವಿಸ್ತೀರ್ಣ ೨೮,೪೦೦ ಚ.ಕಿ.ಮೀ. ರಾಷ್ಟ್ರದ ರಾಜಧಾನಿ ಹೊನಿಯಾರ. ಯು.ಕೆ.ಯು ೧೮೯೦ರಲ್ಲಿ ಇಲ್ಲಿ ತನ್ನ ವಸಾಹತನ್ನು ಸ್ಥಾಪಿಸಿತು. ದ್ವಿತೀಯ ಜಾಗತಿಕ ಸಮರದ ಅನೇಕ ಭೀಷಣ ಕದನಗಳು ೧೯೪೨-೪೫ರ ಮಧ್ಯದಲ್ಲಿ ಇಲ್ಲಿ ನಡೆದುವು. ೧೯೭೬ರಲ್ಲಿ ಸ್ವಯಮಾಡಳಿತ ಪಡೆದುಕೊಂಡ ಈ ದೇಶವು ಮುಂದೆ ೧೯೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಈ ರಾಷ್ಟ್ರವು ಕಾಮನ್‌ವೆಲ್ತ್‌ನ ಸದಸ್ಯತ್ವ ಹೊಂದಿದೆ.
ಸಾಲೊಮನ್ ದ್ವೀಪಗಳು Solomon Islands | |
---|---|
Flag | |
Motto: "ಸೇವೆಗಾಗಿ ನಾಯಕತ್ವ" | |
Anthem: "ದೇವನು ಸಾಲೊಮನ್ ದ್ವೀಪಗಳನ್ನು ರಕ್ಷಿಸಲಿ" Royal anthem: ದೇವನು ರಾಣಿಯನ್ನು ರಕ್ಷಿಸಲಿ" | |
Capital | ಹೊನಿಯಾರ |
Largest city | ರಾಜಧಾನಿ |
Official languages | ಇಂಗ್ಲಿಷ್ |
Demonym(s) | Solomon Islander |
Government | ಸಾಂವಿಧಾನಿಕ ಅರಸೊತ್ತಿಗೆ |
• ರಾಣಿ | ರಾಣಿ ಎಲಿಜಬೆತ್ II |
ನೆಥಾನಿಯಲ್ ವೇನಾ | |
• ಪ್ರಧಾನಿ | ಡೆರೆಕ್ ಸಿಕುವಾ |
ಸ್ವಾತಂತ್ರ್ಯ | |
ಜುಲೈ 7 1978 | |
• Water (%) | 3.2% |
Population | |
• ಜುಲೈ 2005 estimate | 478,000 (170ನೆಯದು) |
GDP (PPP) | 2005 estimate |
• Total | $911 ಮಿಲಿಯನ್ (171st) |
• Per capita | $1,894 (146ನೆಯದು) |
HDI (೨೦೦೪) | ೦.೫೯೨ Error: Invalid HDI value · ೧೨೮ನೆಯದು |
Currency | ಸಾಲೊಮನ್ ದ್ವೀಪಗಳ ಡಾಲರ್ (SBD) |
Time zone | UTC+೧೧ |
Calling code | ೬೭೭ |
ISO 3166 code | SB |
Internet TLD | .sb |