ಸೇವಂತಿ ಸುಲಭೌಷಧಿ ಬದಲಾಯಿಸಿ

ರಾಸಾಯನಿಕ ದ್ರವ್ಯಗಳಿವೆ.ಆಯುರ್ವೇದ ಶಾಸ್ತ್ರದ ಪ್ರಕಾರ ಇದು ತಂಪು ಗುಣವನ್ನು ಹೊಂದಿದೆ.ಕಹಿಸರ,ಹೃದ್ಯ, ವರ್ಣ್ಯ ಗುಣಗಳನ್ನು ಹೊಂದಿದೆ.

ಉಪಯೋಗ ಬದಲಾಯಿಸಿ

  • ಸೇವಂತಿಯ ಹೂವುಗಳಿಂದ ಕಷಾಯ ತಯಾರಿಸಿ ೮-೧೦ ಚಮಚ ಸೇವಿಸಲು ನೀಡಿದರೆ ಹೊಟ್ಟೆ ನೋವು ಶಮನವಾಗುತ್ತದೆ.
  • ಇದರ ಹೂವುಗಳನ್ನು ಅರೆದು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿಮುಖದ ಕಾಂತಿ ಹೆಚ್ಚುತ್ತದೆ.
  • ಚರ್ಮವ್ಯಾದಿ ಉಳ್ಳವರು ಸೇವಂತಿ ಹೂವು, ಅರಸಿನ ಮತ್ತು ನಿಂಬೆರಸ ಬೆರೆಸಿ ಲೇಪಿಸಿದರೆ ತುರಿಕೆ, ಕಜ್ಜಿಗುಣವಾಗುತ್ತದೆ.
  • ಸೇವಂತಿ ಹೂವು, ಎಲೆ ಅರೆದು ಅರಸಿನ ಹುಡಿ ಬೆರೆಸಿ ಗಾಯ ವೃಣಗಳಿಗೆ ಲೇಪಿಸಿದರೆ ಗುಣಕಾರಿ.
  • ಗುಲಾಬಿಯ ದಳಗಳಿಂದ ಗುಲ್ ಕಂದ್ ತಯಾರಿಸುವಂತೆ, ಸೇವಂತಿಯ ಹೂವುಗಳ ದಳಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿ ಬಿಸಿಲಿನಲ್ಲಿಟ್ಟು ಕದಡಿ ಪುನಃ ಬಿಸಿಲಿನಲ್ಲಿಟ್ಟು (೩-೪ ದಿನ) ಕೊನೆಗೆ ಜೇನು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಬೇಕು. ಇದನ್ನು ಅಮರ್ಧ - ಒಂದು ಚಮಚ ಸೇವಿಸಿದರೆ ಉತ್ತಮ ಹೃದಯದ ಟಾನಿಕ್.
  • ಮೂತ್ರ ಉರಿ, ಮೂತ್ರಕಟ್ಟು ಇರುವಾಗ ೧೦-೧೨ ಸೇವಂತಿಯ ಎಲೆಗಳನ್ನು ೨ ಕಾಳು ಮೆಣಸಿನೊಂದಿಗೆ ಅರೆದು ದಿನಕ್ಕೆ ೩ ಬಾರಿ ನೀಡುವುದರಿಂದ ಮೂತ್ರ ಉರಿ,ಮೂತ್ರಕಟ್ಟು ಶಮನವಾಗುತ್ತದೆ.
  • ಚರ್ಮದ ಮೇಲಿನ ಕುರ, ಗುಳ್ಳೆಗಳಿಗೆ ಸೇವಂತಿಯ ಬೇರನ್ನು ಅರೆದು ಲೇಪಿಸಿದರೆ ಶಮನಕಾರಿ.