ಸೂಲಗಿತ್ತಿಯು ಶಿಶುಜನನ ಕಾಲದ ಸಮೀಪ ಮತ್ತು ಸುತ್ತಮುತ್ತ ತಾಯಂದಿರು ಹಾಗೂ ನವಜಾತ ಶಿಶುಗಳ ಆರೈಕೆಮಾಡುವ ಆರೋಗ್ಯ ವೃತ್ತಿಗೆ. ಈ ಕ್ಷೇತ್ರವನ್ನು ಸೂತಿಕಾಶಾಸ್ತ್ರ ಎಂದು ಕರೆಯಲಾಗುತ್ತದೆ.

ಸೂಲಗಿತ್ತಿಗಳು ಶಿಶುಜನನದ ಸಾಮಾನ್ಯ ಪ್ರಗತಿಯ ಬದಲಾವಣೆಗಳನ್ನು ಗುರುತಿಸಲು, ಮತ್ತು ಸಾಮಾನ್ಯದಿಂದ ಆಗುವ ಭಿನ್ನತೆಗಳನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ತರಬೇತಿ ಪಡೆದಿರುತ್ತಾರೆ. ಅವರು ಪೃಷ್ಠಾಭಿಮುಖ ಪ್ರಸವ, ಅವಳಿಜವಳಿ ಜನನ ಮತ್ತು ಶಿಶುವು ಹಿಂಭಾಗದ ಸ್ಥಿತಿಯಲ್ಲಿರುವಂಥ ಜನನಗಳಂತಹ ಹೆಚ್ಚಿನ ಅಪಾಯದ ಪರಿಸ್ಥಿತಿಗಳಲ್ಲಿ, ಶಸ್ತ್ರಚಿಕಿತ್ಸೆ ಬೇಡದ ತಂತ್ರಗಳನ್ನು ಬಳಸಿ ಮಧ್ಯ ಪ್ರವೇಶಿಸಬಹುದು. ಶಸ್ತ್ರಚಿಕಿತ್ಸಾ ಹಾಗೂ ಸಾಧನ ಬಳಸಿ ಮಾಡುವ ಹೆರಿಗೆಗಳು ಸೇರಿದಂತೆ ಸೂಲಗಿತ್ತಿಯ ಅಭ್ಯಾಸದ ವ್ಯಾಪ್ತಿಯನ್ನು ಮೀರಿದ ಗರ್ಭಾವಸ್ಥೆ ಹಾಗೂ ಜನನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವೈದ್ಯರು ಅಥವಾ ಶಸ್ತ್ರಚಿಕಿತ್ಸಕರಿಗೆ ವಹಿಸಲಾಗುತ್ತದೆ.[][]

ಉಲ್ಲೇಖಗಳು

ಬದಲಾಯಿಸಿ
  1. Epstein, Abby (9 January 2008). "The Business of Being Born (film)". The New York Times. Archived from the original on 13 February 2009. Retrieved 30 October 2009.
  2. Carson, A (May–June 2016). "Midwifery around the World: A study in the role of midwives in local communities and healthcare systems". 82. Elsevier Inc: 381. doi:10.1016/j.aogh.2016.04.617. {{cite journal}}: Cite journal requires |journal= (help)