ಸೂರ್ಯಕೀರ್ತಿ (ಉರಗ ತಜ್ಞ)

({{lang-en|Surya Keerthi}}) ಅಥವಾ ಸ್ನೇಕ್ ಸೂರ್ಯಕೀರ್ತಿ, ಮೈಸೂರು ಮೂಲದ ಒಬ್ಬ ಉರಗ ತಜ್ಞ ಮತ್ತು ಪರಿಸರ ಸಂರಕ್ಷಣಾವಾದಿ

ಸೂರ್ಯಕೀರ್ತಿ (ಆಂಗ್ಲ:Surya Keerthi) ಅಥವಾ ಸ್ನೇಕ್ ಸೂರ್ಯಕೀರ್ತಿ, ಮೈಸೂರು ಮೂಲದ ಒಬ್ಬ ಉರಗ ತಜ್ಞ ಮತ್ತು ಪರಿಸರ ಸಂರಕ್ಷಣಾವಾದಿ.[][] ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರ ಮಗನಾದ ಕೀರ್ತಿ,[] ಮೈಸೂರು ಜಿಲ್ಲೆಯಲ್ಲಿ ಈವರೆಗೂ ಸಂರಕ್ಷಣೆ ಮಾಡಿರುವ ಹಾವುಗಳ ಸಂಖ್ಯೆ ಕೆಲವು ಸಾವಿರಗಳು. ಹಾವುಗಳು ಮಾತ್ರವಲ್ಲದೆ, ಗೂಬೆಮರಿಗಳು, ಅಳಿಲುಗಳು, ನಾಯಿಮರಿಗಳು, ರಸ್ತೆ ಅಪಘಾತದಲ್ಲಿ ಅಂಗವಿಕಲಗೊಂಡ ಇತರ ಪ್ರಾಣಿಗಳ ಸಂರಕ್ಷಣೆಗಾಗಿಯೇ ಹಗಲಿರುಳು ಶ್ರಮಿಸುವ ಇವರು ಹಾವುಗಳ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಕೈಗೊಳ್ಳುತ್ತಿದ್ದಾರೆ.[][][]

ಸೂರ್ಯಕೀರ್ತಿ
ಜನನ
ವೃತ್ತಿs
  • ಉರಗತಜ್ಞ
  • ಸಂರಕ್ಷಣವಾದಿ
ಗಮನಾರ್ಹ ಕೆಲಸಗಳುಹಾವುಗಳ ರಕ್ಷಣೆ ಮತ್ತು ಪರಿಸರ ಜಾಗೃತಿ
ಪೋಷಕಸ್ನೇಕ್ ಶ್ಯಾಮ್

ಇಲ್ಲಿಯವರೆಗೆ ನೂರಾರು ಮನೆಗಳಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೇ ಹಾವುಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಅವುಗಳನ್ನು ಬಿಡುತ್ತಾ ತಮ್ಮ ಪರಿಸರ ರಕ್ಷಣಾಕಾರ್ಯ ನಡೆಸುತ್ತಿದ್ದಾರೆ ಸೂರ್ಯಕೀರ್ತಿ.

ಪ್ರಾರಂಭಿಕ ಜೀವನ

ಬದಲಾಯಿಸಿ

ಸ್ನೇಕ್ ಶ್ಯಾಮ್ ಮಗನಾಗಿ ಮೈಸೂರಿನಲ್ಲಿ ಹುಟ್ಟಿದ ಕೀರ್ತಿ ಓದಿದ್ದು ಪದವಿ ಹಂತದವರೆಗೆ.[]

ಉರಗತಜ್ಞರಾಗಿ

ಬದಲಾಯಿಸಿ

ಚಿಕ್ಕವಯಸ್ಸಿನಲ್ಲಿಯೇ ಹಾವುಗಳ ಬಗೆಗೆ ಕುತೂಹಲ ಬೆಳೆಸಿಕೊಂಡ ಸೂರ್ಯ, ತಂದೆಯ ಜೊತೆ ಹಾವುಗಳ ರಕ್ಷಣಾಕಾರ್ಯ ನಡೆಯುವಲ್ಲಿಗೆ ಹೋಗಿ ಗಮನಿಸುತ್ತಿದ್ದರು. ತಂದೆಯನ್ನೇ ಗುರುವಾಗಿಸಿಕೊಂಡ ಅವರು, ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ನೋಡಿದ ಕೂಡಲೇ ಗುರುತಿಸುವ ವಿದ್ಯೆ ಕಲಿತರು.[]

ಮೈಸೂರು ಭಾಗದ ಸರಿಸುಮಾರು ಎಲ್ಲಾ ಬಗೆಯ ಹಾವುಗಳನ್ನು ಅವುಗಳ ಆವಾಸಸ್ಥಾನಗಳ ಮೂಲದಲ್ಲೇ ಹೋಗಿ ಅಧ್ಯಯನ ನಡೆಸುತ್ತಾ ಕಲಿತ ಸೂರ್ಯ ಅವರು ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡರು.[]

ಪ್ರಾಣಿಗಳ ಅಕ್ರಮ ಮಾರಾಟ ಮತ್ತು ಚರ್ಮಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ಕಾಳದಂಧೆಯ ವಿರುದ್ಧವೂ ಜನಜಾಗೃತಿ ಮೂಡಿಸುತ್ತಿರುವ ಸೂರ್ಯ, ದೇಶದ ಅತಿಕಿರಿಯ ಉರಗತಜ್ಞರಲ್ಲಿ ಒಬ್ಬರೆನಿಸಿದ್ದಾರೆ.[]

ಹಾವಿನ ಮೊಟ್ಟೆಗಳ ರಕ್ಷಣೆ

ಬದಲಾಯಿಸಿ

ಹಾವುಗಳ ರಕ್ಷಣೆ ಮಾತ್ರವೇ ಅಲ್ಲದೇ, ಹಾವುಗಳ ಮೊಟ್ಟೆಗಳನ್ನೂ ರಕ್ಷಿಸುವ ಕೆಲಸ ಮಾಡುತ್ತಾರೆ ಸೂರ್ಯಕೀರ್ತಿ. ಕೃತಕ ಕಾವು ನೀಡಿ, ಹೊರಬಂದ ಮರಿಗಳಿಗೆ ಸೂಕ್ತ ಹಾರೈಕೆ ಮಾಡಿ, ಸೂಕ್ತ ಹಂತದಲ್ಲಿ ಸುರಕ್ಷಿತ ಜಾಗಗಳಿಗೆ ಹಾವುಗಳನ್ನು ಬಿಡುವ ಅವರು, ಕೃತಕ ಕಾವು ನೀಡಿ ಹಾರೈಕೆ ಮಾಡಲು ತಮ್ಮ ಮನೆಯಲ್ಲೇ ಜಾಗ ಮಾಡಿಕೊಂಡಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. "Forty five snake eggs hatched through artificial incubation". Star of Mysore. 4 March 2021. Retrieved 7 April 2021.
  2. Avinasha Vagarnal (11 March 2021). "ಶಿವರಾತ್ರಿಯಂದೇ ಮೈಸೂರಿನಲ್ಲಿ ಹಾವುಗಳು ಪ್ರತ್ಯಕ್ಷ..! ಉರಗ ತಜ್ಞ ಸೂರ್ಯ ಕೀರ್ತಿಯಿಂದ ರಕ್ಷಣೆ". Vijaya Karnataka. Retrieved 7 April 2021.
  3. Dileep DR (17 November 2020). "ಅಪ್ಪನಂತೆಯೇ ಅಖಾಡಕ್ಕಿಳಿದ ಸ್ನೇಕ್ ಶ್ಯಾಂ ಪುತ್ರ..! ದೀಪಾವಳಿ ದಿನ 10ಕ್ಕೂ ಹೆಚ್ಚು ಉರಗ ರಕ್ಷಣೆ..!". Vijaya Karnataka.
  4. "ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶ್ವೇತವರ್ಣದ ಗೂಬೆ ಪತ್ತೆ". City Today. 12 October 2020. Retrieved 7 April 2021.[ಶಾಶ್ವತವಾಗಿ ಮಡಿದ ಕೊಂಡಿ]
  5. "Orphaned owlets rescued". Star of Mysore. 22 January 2021. Retrieved 7 April 2021.
  6. "Frequent spotting of snakes worries residents". Star of Mysore. 19 November 2020. Retrieved 7 April 2021.
  7. "Snake Shyam rescues rare Ornate Flying Snake". Star of Mysore. 1 July 2020. Retrieved 7 April 2021.
  8. ೮.೦ ೮.೧ ೮.೨ Rozebud Gonesalves. "In conversation with a snake rescuer". Medium.com. Retrieved 7 April 2021.
  9. Dileep DR (2 March 2021). "ಮೈಸೂರಿನಲ್ಲಿ ಸ್ನೇಕ್ ಶ್ಯಾಂ ಪುತ್ರನ ಸಾಧನೆ: 45 ಹಾವಿನ ಮೊಟ್ಟೆಗಳನ್ನು ಕೃತಕವಾಗಿ ಮರಿ ಮಾಡಿದ ಸೂರ್ಯ ಕೀರ್ತಿ..!". Vijaya Karnataka. Retrieved 7 April 2021.