ಸೂಪರ್ ರೆಕಗ್ನೈಸರ್

೨೦೦೯ ರಲ್ಲಿ ಲಂಡನ್‌ನಲ್ಲಿನ ಹಾರ್ವರ್ಡ್ ಯೂನಿವರ್ಸಿಟಿ ಕಾಲೇಜಿನ ಸಂಶೋಧಕರು ಸರಾಸರಿಗಿಂತ ಉತ್ತಮವಾದ ಮುಖ ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವ ಜನರಿಗಾಗಿ ಸೂಪರ್ ರೆಕಗ್ನೈಸರ್ ಎಂಬ ಪದವನ್ನು ಸೃಷ್ಟಿಸಿದರು.[][] ಸೂಪರ್ ರೆಕಗ್ನೈಸರ್‌ಗಳು ಒಂದೇ ಬಾರಿಗೆ ನೋಡಿದ ಸಾವಿರಾರು ಮುಖಗಳನ್ನು ನೆನಪಿಟ್ಟುಕೊಳ್ಳುವ ಮತ್ತು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. []


ಕೌಶಲ್ಯ

ಬದಲಾಯಿಸಿ

ಇದು ಪ್ರೊಸೊಪಾಗ್ನೋಸಿಯಾಕ್ಕೆ ವಿರುದ್ಧವಾಗಿದೆ. ಜನಸಂಖ್ಯೆಯ ೧ ರಿಂದ ೨% ರಷ್ಟು ಜನರು ಸೂಪರ್ ರೆಕಗ್ನೈಸರ್[] ಆಗಿದ್ದಾರೆ ಎಂದು ಅಂದಾಜಿಸಲಾಗಿದೆ, ಹಾಗೂ ಅವರು ೨೦% ಸಾಮಾನ್ಯ ಜನಸಂಖ್ಯೆಗೆ[] ಹೋಲಿಸಿದರೆ ಅವರು ನೋಡಿದ ೮೦% ಮುಖಗಳನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಈ ಅಂಕಿಅಂಶಗಳು ವಿವಾದಾಸ್ಪದವಾಗಿವೆ.[]ಕೆಲವು ಸಂದರ್ಭಗಳಲ್ಲಿ ಕಂಪ್ಯೂಟರ್ ಗುರುತಿಸುವಿಕೆ ವ್ಯವಸ್ಥೆಗಳಿಗಿಂತ ಸೂಪರ್ ರೆಕಗ್ನೈಸರ್‌ಗಳು ಮುಖಗಳನ್ನು ಉತ್ತಮವಾಗಿ ಗುರುತಿಸಬಹುದು.[][][] ಇದರ ಹಿಂದಿನ ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ ಇದು ಮೆದುಳಿನ ಫ್ಯೂಸಿಫಾರ್ಮ್ ಮುಖದ ಭಾಗಕ್ಕೆ ಸಂಬಂಧಿಸಿರಬಹುದೆಂದು ಅಂದಾಜಿಸಲಾಗಿದೆ.[]

ಪ್ರಾಯೋಗಿಕ ಅನ್ವಯಗಳು

ಬದಲಾಯಿಸಿ

ಬ್ರಿಟಿಷ್ ಗುಪ್ತಚರ ಸಮುದಾಯದಲ್ಲಿ ಈ ಕೌಶಲ್ಯವನ್ನು ಗುರುತಿಸಿ ಬಳಸಿಕೊಳ್ಳಲಾಗಿದೆ.[]

ಮೇ ೨೦೧೫ರಲ್ಲಿ, ಲಂಡನ್ ಮೆಟ್ರೋಪಾಲಿಟನ್ ಪೋಲೀಸ್ ಅಧಿಕೃತವಾಗಿ ಜನರನ್ನು ಗುರುತಿಸುವ ಈ ಉನ್ನತ ಸಾಮರ್ಥ್ಯ ಹೊಂದಿರುವ ಜನರ ತಂಡವನ್ನು ರಚಿಸಿತು ಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸಕ್ಕೆ ಅವರನ್ನು ತೊಡಗಿಸಿಕೊಂಡಿತು.[]ಸ್ಕಾಟ್‌ಲ್ಯಾಂಡ್ ಯಾರ್ಡ್ ೨೦೦ಕ್ಕೂ ಹೆಚ್ಚು ಸೂಪರ್ ರೆಕಗ್ನೈಸರ್‌ಗಳ ತಂಡವನ್ನು ಹೊಂದಿದೆ. [] ಆಗಸ್ಟ್ ೨೦೧೮ರಲ್ಲಿ,ಸೆರ್ಗೆಯ್ ಮತ್ತು ಯುಲಿಯಾ ಸ್ಕ್ರಿಪಾಲ್ ಮೇಲಿನ ದಾಳಿಯ ಶಂಕಿತರನ್ನು ಗುರುತಿಸಲು ಮೆಟ್ರೋಪಾಲಿಟನ್ ಪೋಲೀಸರು ಸ್ಯಾಲಿಸ್‌ಬರಿ ಮತ್ತು ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳಿಂದ ೫,೦೦೦ ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ ನಂತರ ಎರಡು ಸೂಪರ್ ರೆಕಗ್ನೈಸರ್‌ಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.[೧೦][೧೧] ಥೇಮ್ಸ್ ವ್ಯಾಲಿ ಪೋಲಿಸ್, ಸಿಟಿ ಆಫ್ ಲಂಡನ್ ಪೋಲಿಸ್, ಜೆರ್ಸಿ ಪೋಲಿಸ್ ಮತ್ತು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸ್ ಅನ್ನು ಒಳಗೊಂಡಂತೆ ಇತರ ಪೋಲೀಸ್ ಪಡೆಗಳು ಸೂಪರ್ ರೆಕಗ್ನೈಸರ್‌ಗಳನ್ನು ಬಳಸುತ್ತವೆ.[೧೨]

೨೦೨೦ರ ಸ್ಟಟ್‌ಗಾರ್ಟ್ ಗಲಭೆಯ ಹಿನ್ನೆಲೆಯಲ್ಲಿ ಜರ್ಮನ್ ಪೋಲೀಸ್ ಪಡೆಗಳು ಶಂಕಿತರನ್ನು ಗುರುತಿಸುವುದಕ್ಕಾಗಿ ಸೂಪರ್ ರೆಕಗ್ನೈಸರ್‌ಗಳ ಬಳಕೆಯನ್ನು ಹೆಚ್ಚಿಸಿವೆ.[೧೩]

ಗ್ಲ್ಯಾಸ್ಗೋ ಫೇಸ್ ಹೊಂದಾಣಿಕೆಯ ಪರೀಕ್ಷೆ

ಬದಲಾಯಿಸಿ

ನಿಯಂತ್ರಣ ಗುಂಪಿಗೆ ಹೋಲಿಸಿದರೆ ಸೂಪರ್ ರೆಕಗ್ನೈಸರ್‌ಗಳು ಗ್ಲ್ಯಾಸ್ಗೋ ಫೇಸ್ ಮ್ಯಾಚಿಂಗ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.[೧೪]

ಉಲ್ಲೇಖಗಳು

ಬದಲಾಯಿಸಿ
  1. Russell, Richard; Duchaine, Brad; Nakayama, Ken (April 2009). "Super-recognizers: People with extraordinary face recognition ability". Psychonomic Bulletin & Review. 16 (2): 252–257. doi:10.3758/PBR.16.2.252. PMC 3904192. PMID 19293090.
  2. Dahl, Melissa (August 13, 2020). "What Does It Mean If You're Really Really Good at Recognizing Faces?". The Cut (in ಇಂಗ್ಲಿಷ್). Retrieved 2018-09-27.
  3. ೩.೦ ೩.೧ ೩.೨ ೩.೩ ೩.೪ Moshakis, Alex (11 November 2018). "Super recognisers: the people who never forget a face". The Guardian. Retrieved 2018-11-13.
  4. "I put names to faces as a police super-recogniser". www.ft.com. Retrieved 17 February 2020.
  5. Ramon, Meike; Bobak, Anna K.; White, David (August 2019). "Super-recognizers: From the lab to the world and back again". British Journal of Psychology. 110 (3): 461–479. doi:10.1111/bjop.12368. PMC 6767378. PMID 30893478.
  6. Barry, Ellen (2018-09-06). "From Mountain of CCTV Footage, Pay Dirt: 2 Russians Are Named in Spy Poisoning". The New York Times. Retrieved 6 September 2018.
  7. Keefe, Patrick Radden (15 August 2016). "The Detectives Who Never Forget a Face". The New Yorker. Retrieved 6 September 2018.
  8. "Super Recognisers". Crime + Investigation (in ಇಂಗ್ಲಿಷ್). 2017-07-05. Retrieved 2018-09-27.
  9. Jaslow, Ryan (2013-09-27). "London police using 200 super-recognizers: What makes them "super"?". CBS News. Retrieved 2020-01-23.
  10. Hopkins, Nick; Harding, Luke; MacAskill, Ewen (6 August 2018). "UK poised to ask Russia to extradite Salisbury attack suspects". the Guardian.
  11. Brunt, Martin (28 August 2018). "Super recogniser squad tracks Skripal novichok attackers". news.sky.com.
  12. "Thames Valley Police: 'Super-recognisers' used to patrol for sex offenders". BBC News. 25 August 2023.
  13. "Jeder zweite Verdächtige wiedererkannt – dank »Super-Recogniser«" [One in two suspects identified - thanks to 'super recognisers']. Der Spiegel (in ಜರ್ಮನ್). 25 August 2021. Retrieved August 31, 2021.
  14. Robertson, David James (24 March 2016). "Could super recognisers be the latest weapon on the war on terror?". The Conversation. Retrieved 31 August 2021.