ಸುವರ್ಣ ಗೆಡ್ಡೆ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
A. paeoniifolius
Binomial name
Amorphophallus paeoniifolius
Synonyms

A. campanulata

ಸುವರ್ಣ ಗೆಡ್ಡೆ {Amorphophallus paeoniifolius} ದಕ್ಷಿಣ ಏಷಿಯಾ,ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಉಷ್ಣವಲಯದ ಪೆಸಿಫಿಕ್ ದ್ವೀಪಗಳ ಪ್ರದೇಶದಲ್ಲಿ ಕಂಡುಬರುವ ಒಂದು ಸಸ್ಯ.ಇದು ತರಕಾರಿಯಾಗಿ ಬಳಕೆಯಾಗುವುದರಿಂದ ವಾಣಿಜ್ಯ ಬೆಳೆಯಾಗಿಯೂ ಬೆಳೆಸಬಹುದಾಗಿದೆ.ಆಂಗ್ಲ ಭಾಷೆಯಲ್ಲಿ ಇದನ್ನು Elephant foot yam ಎಂದು ಕರೆಯುತ್ತಾರೆ.

ಸಸ್ಯ ಕೊಳೆತಿರುವ ವಾಸನೆಯನ್ನು ನೀಡುತ್ತದೆ. ಪಿಸ್ಟಿಲ್ಲೇಟ್ (ಹೆಣ್ಣು) ಮತ್ತು ಸ್ಟಾಮಿನೇಟ್ (ಗಂಡು) ಹೂಗಳು ಒಂದೇ ಗಿಡದಲ್ಲಿ ಇರುವುದಿಲ್ಲ. ಹೂವುಗಳು ಸಿಲಿಂಡರ್‍ಆಕಾರದ ಗುಂಪಿನಲ್ಲಿ ಬೆಳೆಯುತ್ತವೆ. ಚಿಕ್ಕ ಕಾಯಿಗಳು ಹಣ್ಣಾದ ನಂತರ ಕೆಂಪು ಬಣ್ಣ ಇರುತ್ತವೆ ಮತ್ತು ಇವು ಗೋಳಾಕಾರ ಅಥವಾ ಅಂಡಾಕಾರದಲ್ಲಿ ಇರುವುದಿಲ್ಲ.

ಸುವರ್ಣಗೆಡ್ಡೆಯ ಹೂವು

ಆರೋಗ್ಯ ಉಪಯೋಗಗಳು

ಬದಲಾಯಿಸಿ

ಸುವರ್ಣ ಗೆಡ್ಡೆ ಮುಖ್ಯವಾಗಿ ಜೀರ್ಣ ನಾಳದ ಭಾಗದಲ್ಲಿ ಕಂಡು ಬರುವ ಸಿಂಬಳವನ್ನು ಇದು ಕಡಿಮೆ ಮಾಡಿ ಬೈಲ್ ಜ್ಯೂಸ್ ಉತ್ಪತ್ತಿಯನ್ನು ಹೆಚ್ಚು ಮಾಡಿ ಜೀರ್ಣ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ. ಆನಂತರದಲ್ಲಿ ದೇಹದಲ್ಲಿ ಹಗುರವಾದ ವಾತಾವರಣವನ್ನು ನಿರ್ಮಾಣ ಮಾಡಿ ನಾವು ಸೇವನೆ ಮಾಡಿದ ಆಹಾರದಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳನ್ನು ಹೀರಿಕೊಂಡು ಮೆಟಬಾಲಿಸಂ ಪ್ರಕ್ರಿಯೆಗೆ ಅಚ್ಚುಕಟ್ಟಾಗಿ ಅನುಕೂಲ ಮಾಡಿಕೊಡುತ್ತದೆ.

​ದೇಹದ ತೂಕ ಕಡಿಮೆ ಮಾಡಲು ಸಹಕಾರಿ

ಬದಲಾಯಿಸಿ

ಕರುಳಿನ ಭಾಗದಲ್ಲಿ ಕಂಡುಬರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚು ಮಾಡಿ ನಾವು ಸೇವಿಸಿದ ಆಹಾರದಲ್ಲಿ ಇರುವಂತಹ ಪೌಷ್ಟಿಕಾಂಶಗಳನ್ನು ಹೀರಿಕೊಂಡು ಅಚ್ಚುಕಟ್ಟಾಗಿ ದೇಹದ ತೂಕವನ್ನು ಹೆಚ್ಚಾಗದಂತೆ ನಿರ್ವಹಿಸಿ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಇರಿಟೇಬಲ್ ಬೋವಲ್ ಸಿಂಡ್ರೋಮ್ ಇತ್ಯಾದಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.[]

ಹಾರ್ಮೋನ್ ಸಮಸ್ಯೆಗೆ ಪರಿಹಾರ

ಬದಲಾಯಿಸಿ

ಮಹಿಳೆಯರಲ್ಲಿ ಈಸ್ಟ್ರೊಜೆನ್ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ಕೀಲು ನೋವು ಮತ್ತು ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.[]

ವಿಟಮಿನ್ ಎ ಅಂಶ

ಬದಲಾಯಿಸಿ

ಕ್ಯಾರೆಟ್‌ನಲ್ಲಿ ಸಿಗುವಷ್ಟೇ ವಿಟಮಿನ್ ಎ ಅಂಶ, ಈ ತರಕಾರಿಯಲ್ಲಿ ಸಿಗುತ್ತದೆ. ಹೀಗಾಗಿ ಈ ತರಕಾರಿ ಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಕಣ್ಣಿನ ಸಮಸ್ಯೆಗಳು ದೂರ ವಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಒದಗಿಸಿಕೊಡುತ್ತದೆ.

ವಿಟಮಿನ್ ಬಿ6

ಬದಲಾಯಿಸಿ

ವಿಟಮಿನ್ ಬಿ6 ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ವಾರದಲ್ಲಿ, ಒಂದಡೆರಡು ಬಾರಿಯಾದರೂ ಕೂಡ ಸೇವನೆ ಮಾಡುತ್ತಲೇ ಇರಬೇಕು. ಯಾಕೆಂದರೆ ಇಂತಹ ಆಹಾರಗಳು ನಮ್ಮ ದೇಹದ ತ್ವಚೆಯನ್ನು ಆರೈಕೆ ಮಾಡುವುದು ಮಾತ್ರವಲ್ಲದೆ ದೇಹದಲ್ಲಿ ಕೆಂಪು ರಕ್ತದ ಕಣಗಳನ್ನು ಹೆಚ್ಚು ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ವಿಟಮಿನ್ ಬಿ6 ಸಮೃದ್ಧವಾಗಿರುವ ಸುವರ್ಣಗೆಡ್ಡೆ. ಹೌದು ಈ ತರಕಾರಿಯಲ್ಲಿ ವಿಟಮಿನ್ ಬಿ6 ಯಥೇಚ್ಛವಾಗಿ ಸಿಗುವುದರಿಂದ, ಈ ತರಕಾರಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.[]

ಉಲ್ಲೇಖಗಳು

ಬದಲಾಯಿಸಿ
  1. "ಸುವರ್ಣ ಗೆಡ್ಡೆ, ಆರೋಗ್ಯಕ್ಕೆ ಬಹಳ ಒಳ್ಳೆಯದು..ಮಿಸ್ ಮಾಡದೇ ಸೇವಿಸಿ!". Vijay Karnataka. Retrieved 30 August 2024.
  2. "ಸುವರ್ಣಗಡ್ಡೆ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಿ!". Zee News Kannada. 23 January 2024. Retrieved 30 August 2024.
  3. "ನಿಮಗೆ ಗೊತ್ತಿರಲಿ, ಸುವರ್ಣ ಗೆಡ್ಡೆ, ಆರೋಗ್ಯಕ್ಕೆ ಬಹಳ ಒಳ್ಳೆಯದು". Vijay Karnataka. Retrieved 30 August 2024.