ಪವಿತ್ರ ಕಮಲ ಪುಷ್ಪ (Nelumbo nucifera)

ಒಳ್ಳೆಯ ಮಾತು

ಬದಲಾಯಿಸಿ

ಮೌಢ್ಯ ತೊರೆದು, ಜ್ಞಾನವಂತನಾಗು. ಜಾತಿ ತೊರೆದು, ನೀತಿವಂತನಾಗು. ಅಹಂಕಾರ ತೊರೆದು, ಗುಣವಂತನಾಗು. ಆಗಲೇ ನೀನು ಉತ್ತಮ-ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ.

     ~ ಬಸವ ವಿನಯ್(ವಿಪಿ)
  • ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ (ಸು:ಚೆನ್ನಾಗಿ, ಭಾಷಿತ:ಹೇಳಿದ್ದು). ‘ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.
  • ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ. ಸುಭಾಷಿತಗಳ ಬಗ್ಗೆ ‘ಸುಭಾಷಿತರತ್ನಭಾಂಡಾಗಾರ’ದ ಮಾತೊಂದು ಹೀಗಿದೆ:
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ ।
ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್‌ ।।
  • ಭಾಷೆಯ ಬಗ್ಗೆ ಒಂದು ಸುಭಾಷಿತ; ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತಭಾಷೆ; ಅದರಿಂದಾಗಿ ಆ ಭಾಷೆಯಲ್ಲಿರುವ ಕಾವ್ಯ ಮಧರವಾಗಿದೆ; ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ.
  • ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ.

ಸುಭಾಷಿತದ ವ್ಯಾಖ್ಯೆ

ಬದಲಾಯಿಸಿ
 
ಸುಗಂಧರಾಜ (Genus-Polianthes--
  • ನಾವಾಡುವ ಮಾತು ನಮ್ಮ ಬದುಕಿಗೆ ಪೂರಕವಾಗಿ ಒದಗಬೇಕು; ಬದುಕಿನ ಆಳವನ್ನೂ ವಿಸ್ತಾರವನ್ನೂ ಅದು ತೋರಿಸುವಂತಿರಬೇಕು; ನಮ್ಮ ಹಿತವನ್ನೂ ಅಹಿತವನ್ನೂ ಪ್ರಕಟಿಸುವಂತಿರಬೇಕು; ಇಷ್ಟೆಲ್ಲ ಇದ್ದರೂ ಆ ಮಾತು ಕೇಳಲು ಸಿಹಿಯಾಗಿರಲೂ ಬೇಕು. ಇಷ್ಟು ಗುಣಗಳನ್ನೂ ಒಳಗೊಂಡಿರುವುದೇ ‘ಸುಭಾಷಿತ’. ಇದನ್ನೇ ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೀಗೆ ಹೇಳಿಕೊಂಡಿದೆ:
ದ್ರಾಕ್ಷಾಮ್ಲಾನಾಮುಖೀ ಜಾತಾ ಶರ್ಕಾರಾ ಚಾಶ್ಮತಾಂ ಗತಾ/
ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ//
  • "ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯೂ ಬಾಡಿಹೋಯಿತು(ಸಪ್ಪೆಯಾಯಿತು); ಸಕ್ಕರೆ ಕಲ್ಲಾಗಿಹೋಯಿತು (ರುಚಿಇಲ್ಲದ್ದು). ಅಮೃತವು ಹೆದರಿ ಸ್ವರ್ಗಕ್ಕೆ ಓಡಿಹೋಯಿತು!’

ಸುಭಾಷಿತದ ಶ್ರೇಷ್ಠತೆ

ಬದಲಾಯಿಸಿ
  • ಸುಭಾಷಿತಗಳ ಸಂಗ್ರಹದಿಂದ ನಮ್ಮ ಜೀವನದೃಷ್ಟಿ ವಿಶಾಲವಾಗುವುದು; ಜೀವನದ ಎಷ್ಟೋ ಸಂದರ್ಭಗಳ ಗುಣಾವಗುಣಗಳನ್ನು ಸ್ಪಷ್ಟವಾಗಿ ವಿಮರ್ಶಿಸಲು ನೆರವಾಗುತ್ತವೆ; ಅದನ್ನೇ ಸುಭಾಷಿತವೊಂದು ಹೀಗೆಂದಿದೆ:
ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ/
ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಧೀಯತೇ//
  • ‘ಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’[]

ಧರ್ಮದ ಬಗೆಗೆ ಸುಭಾಷಿತ

ಬದಲಾಯಿಸಿ
ಸತ್ಯಂ ಬ್ರೂಯಾತ ಪ್ರಿಯಂ ಬ್ರೂಯಾತ್|
ನಬ್ರೂಯಾತ್ ಸತ್ಯಮಪ್ರಿಯಂ||
ಪ್ರಿಯಂ ಚ ನಾSನೃತಂ ಬ್ರೂಯಾತ್|
ಏಷ ಧರ್ಮಃ ಸನಾತನಃ ||
  • ಸತ್ಯವನ್ನು ನುಡಿಯಬೇಕು, ಪ್ರಿಯವಾದ ಸತ್ಯವನ್ನು ಹೇಳಬೇಕು. ಅಪ್ರಿಯವಾದ, ಎಂದರೆ ಪರರ ಮನಸ್ಸಿಗೆ ಅಥವಾ ಪರರಿಗೆ ಕೆಡುಕಾಗಬಹುದಾದ ನೋವುಂಟು ಮಾಡುವ ಸತ್ಯವನ್ನು ಹೇಳಬೇಡ. ಬೇರೆಯವರಿಗೆ ಅಥವಾ ಇತರರಿಗೆ ಸಂತೋಷವಾಗುವುದೆಂದು ಅಥವಾ ಅನುಕೂಲವಾಗುವುದೆಂದು ಸುಳ್ಳನ್ನು ನುಡಿಯಬೇಡ. ಇದೇ ಸನಾತನವಾದ ಶಾಶ್ವತವಾದ ಬಹುಕಾಲದಿಂದ ಒಪ್ಪಿತವಾದ ಧರ್ಮ. []

ವೇದವ್ಯಾಸರ ಧರ್ಮ ಸೂತ್ರ

ಬದಲಾಯಿಸಿ
 
ವೇದ ವ್ಯಾಸ(ಸಮಕಾಲೀನ ಚಿತ್ರ)
1) ಶ್ಲೋಕಾರ್ಧೇನ ಪ್ರವಕ್ಷಾಮಿ,
ಯದುಕ್ತಂ ಗ್ರಂಥಕೋಟಿಭಿಃ |
ಪರೋಪಕಾರಃ ಪುಣ್ಯಾಯ,
ಪಾಪಾಯ ಪರಪೀಡನಂ ||
  • ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, 18 ಪುರಾಣಗಳನ್ನೂ, ಶ್ರುತಿ ಸ್ಮøತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.

‘ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; ಪರೋಪಕಾರವೇ ಪುಣ್ಯ, ಪರ ಪೀಡನೆಯೇ ಪಾಪ’.

2) ಶ್ರೂಯತಾಂ ಧರ್ಮ ಸರ್ವಸ್ವಂ,
ಶ್ರುತ್ವಾಚ ಅವಧಾರ್ಯತಾಮ್ |
ಆತ್ಮನಃ ಪ್ರತಿಕೂಲಾನಿ
ನ ಪರೇಷಾಂ ಸಮಾಚರೇತ್ ||
  • ಎಲ್ಲಾ ಧರ್ಮ ಶಾಸ್ತ್ರ ಗಳನ್ನು ಓದಿದ್ದರೂ, ತಿಳಿದಿದ್ದರೂ, (ಕೇಳಿದ್ದರೂ, ಅದರಲ್ಲಿ ಏನೇ ಹೇಳಿದ್ದರೂ), ತನಗೂ, ಬೇರೆಯವರಿಗೂ ಕೆಡುಕಾಗವ ಕಾರ್ಯವನ್ನು ಮಾಡಬಾರದು. ಅಥವಾ ತನಗೆ ಯಾವುದು ಪ್ರತಿಕೂಲವೋ ಅಂಥದನ್ನು ಬೇರೆಯವರಿಗೆ-ಪರರಿಗೂ ಪ್ರತಿಕೂಲವೆಂದು ಅರಿತು, ಮಾಡಬಾರದು

[]

ವ್ಯಾಸಭಾರತದ ಪ್ರತಿಜ್ಞೆ

ಬದಲಾಯಿಸಿ
    • ಮಹಾಭಾರತದ ಆದಿಪರ್ವದ ಅಂಶಾವತರಣ ಪರ್ವವಾದ 62ನೆಯ ಅಧ್ಯಾಯದಲ್ಲಿ ಶ್ರೀ ಮಹಾಭಾರತದ ಪ್ರಶಂಸೆಂಯು ಬರುವುದು. ಆದರಲ್ಲಿ ವೈಶಂಪಾಯನ ಮುನಿಗಳು ಜನಮೇಜಯ ಮಹಾರಾಜನಿಗೆ ಮಹಾಭಾರತದ ಗುಣವರ್ಣನೆ ಮಾಡುತ್ತಾ, ಶ್ರೀ ಕೃಷ್ಣ ದ್ವೈಪಾಯನ ಮುನಿಯು ಅದ್ಭುತವಾದ ಈ ಮಹಾಭಾರತ ವ್ಯಾಖ್ಯಾನವನ್ನು ಮೂರವರ್ಷಗಳಲ್ಲಿ ರಚಿಸಿದನೆಂದು ಹೇಳಿದರು.

ವೈಶಂಪಾಯನ ಮುನಿ ಮಾಡಿದ ಕೊನಯ ಪ್ರಶಂಸೆಯು ಈರೀತಿ ಇದೆ:

ಧರ್ಮೇ-ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ |
ಯಧಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್ ||64||
  • ಭರತಶ್ರೇಷ್ಠನೇ, ಧರ್ಮ, ಅರ್ಥ, ಕಾಮ ಮತು ಮೋಕ್ಷಗಳಿಗೆ ಸಂಬಂಧಿಸಿದ ಯಾವದೇ ವಿಷಯವು ಇದರಲ್ಲಿದ್ದರೆ ಮಾತ್ರ ಅದು ಬೇರೆ ಗ್ರಂಥಗಳಲ್ಲಿ ಸಿಗಬಹುದು. ಆದರೆ ಇದರಲ್ಲಿ ಯಾವುದು ಇಲ್ಲವೋ ಅದು ಬೇರೆಲ್ಲಿಯೂ ಸಿಗಲಾರದು. (ಮಹಾಭಾರತದ ಬಗ್ಗೆ ಈ ಶ್ಲೋಕವು ಬಹಳ ಪ್ರಸಿದ್ಧವಾಗಿದೆ)[]

ವಿದ್ಯೆಯಿಂದ ಸುಖ

ಬದಲಾಯಿಸಿ
ವಿದ್ಯಾ ದಧಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ|
ಪಾತ್ರತ್ವಾ ಧನಮಾಪ್ನೋತಿ, ಧನದ್ಧರ್ಮಂ ತತಃ ಸುಖಂ||
  • ವಿದ್ಯೆಯಿಂದ ವಿನಯಗುಣವು ಬರುವುದು. ವಿನಯಗುಣದಿಂದ ಸಮಾಜದಲ್ಲಿ ಯೋಗ್ಯತೆ, ಗೌರವ ಸಿಗುವುದು. ಅದರಿಂದ ಸಂಪತ್ತು ಗಳಿಕೆಯಾಗುವುದು. ಸಂಪತ್ತಿನಿಂದ ಪ್ರಾಪಂಚಿಕ ಸುಖ ಸಿಗುವುದು. []

ಉಲ್ಲೇಖ

ಬದಲಾಯಿಸಿ
  1. "ಸುಭಾಷಿತ ಬದುಕಿಗೆ ಒದಗುವ ಮಧುರ ಮಾತು;30 Nov, 2016". Archived from the original on 2016-11-30. Retrieved 2016-11-30.
  2. ಸನಾತನಧರ್ಮ ಗ್ರಂಥ-ಕಿರುಹೊತ್ತಿಗೆ ಲೇಖಕ:ಅನಾಮಿಕ
  3. ಸುಭಾಷಿತಗಳು - ಚಂದಮಾಮ
  4. ಮಹಾಭಾರತದ ಆದಿಪರ್ವದ ಅಂಶಾವತರಣ ಪರ್ವವಾದ 62ನೆಯ ಅಧ್ಯಾಯ(ಶ್ಲೋಕ : 2379)
  5. संस्कृत सुभाषितानि - ०५ ಗೀತಾಪ್ರೆಸ್