ಸುಪ್ರಿಯಾ ಎಸ್. ರಾವ್

ಸುಪ್ರಿಯಾ ಎಸ್. ರಾವ್, ಒಬ್ಬ ಬಹುಮುಖ ವ್ಯಕ್ತಿತ್ವದ ಕಲಾವಿದೆ. ಕನ್ನಡ ರಂಗಭೂಮಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದಲ್ಲೂ ಪಾದಾರ್ಪಣೆ ಮಾಡಿದ್ದಾರೆ. ಅವರು ವಸ್ತ್ರ ವಿನ್ಯಾಸ, ಪ್ರಸಾಧನ, ಸ್ಟೇಜ್ ನ ಕೆಲಸಗಳು,ಸಂಗೀತ ಸಂಯೋಜನೆ,ಸಾಹಿತ್ಯ ರಚನೆ,ಮೊದಲಾದ ವಿಭಾಗಗಳಲ್ಲಿ ಒಳ್ಳೆಯ ಅನುಭವಿಗಳು. ಕಲಾತ್ಮಕ ಚಿತ್ರಗಳಲ್ಲಿ ಕೆಲಸಮಾಡುವ ಆಸೆಯುಳ್ಳವರು. [೧] ಸುಪ್ರಿಯ ಅವರು ಅಭಿನಯ ವೈವಿಧ್ಯಮಯ. ಅವರು

ಅಭಿನಯಿಸಿದ ನಾಟಕಗಳು ಬದಲಾಯಿಸಿ

  1. ಗಿರಿಜಾ ಕಲ್ಯಾಣ
  2. ಕರ್ಣಾಂತರಂಗ,
  3. ರಾವಣ ದರ್ಶನ,
  4. ಮೈಥಿಲಿ,[೨]
  5. ಮಂಥರೆ,
  6. ಯಹೂದಿ ಹುಡುಗಿ,

ಜನನ, ಪರಿವಾರ ಬದಲಾಯಿಸಿ

ಸುಪ್ರಿಯ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು. ತಾಯಿ ಸೀತಾಲಕ್ಷ್ಮಿ, ಸಂಗೀತ ಬಲ್ಲವರು. ಮಗಳಿಗೆ ಅವರಿಂದಲೇ ಸಂಗೀತದ ಕಲಿಕೆ ಶುರುವಾಯಿತು. ತಂದೆ ರಂಗಕರ್ಮಿ ಹಾಗೂ ನಟ. ಸುಪ್ರಿಯ ೮ ನೆಯ ತರಗತಿಯಲ್ಲಿದ್ದಾಗ, "ಎದೆತುಂಬಿಹಾಡಿದೆನು" ಎನ್ನುವ ಟೆಲಿವಿಶನ್ ಶೋನಲ್ಲಿ ಭಾಗವಹಿಸಿ ಕರುನಾಡಿಗೆ ಪರಿಚಿತಳಾದಳು. ಅವರು ಮೊದಲನೆಯ ಪಿಯುಸಿಯಲ್ಲಿದ್ದಾಗ,"ಸರಿಗಮಪ"ಸ್ಟಾರ್ ಸಿಂಗರ್-ಸೀಸನ್-೨ ನಲ್ಲಿ ಟೆಲಿವಿಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಗಳಿಸಿದರು. ಸುಪ್ರಿಯರವರು ಸಂಗೀತದ ಜೊತೆಗೆ, ಬಿ.ಬಿ.ಎ.ಪರೀಕ್ಷೆ ಮುಗಿಸಿ ಎಂ.ಕಾಂ ಪದವಿಗೆ ಶ್ರಮಿಸುತ್ತಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ಬದಲಾಯಿಸಿ

  1. "ಹಸಿರು ರಿಬ್ಬನ್", ಕನ್ನಡದ ಹೆಸರಾಂತ ಲೇಖಕ, ಕವಿ, ಎಚ್ಚೆಸ್ವಿ ಯವರ ಬರೆದ, ಚಿತ್ರದಲ್ಲಿ ಅಭಿನಯಿಸಿದ್ದಾರೆ.[೩]
  2. "ಅಮೃತ ವಾಹಿನಿ", ನಿರ್ದೇಶಕ ನರೇಂದ್ರ ಬಾಬು ನಿರ್ದೇಶನದ ಚಿತ್ರ ನಿರ್ಮಾಣದ ಹಂತದಲ್ಲಿದೆ.

ಕಿರುತೆರೆಯಲ್ಲಿ ಬದಲಾಯಿಸಿ

ನಿರ್ದೆಶಕ, ಟೀ.ಎನ್.ಸೀತಾರಾಂರವರ "ಮಗಳು ಜಾನಕಿ" ಧಾರಾವಾಹಿಯಲ್ಲಿ ನಿರಂಜನನ ಅಕ್ಕ"ಸಂಜನ" ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು ಬದಲಾಯಿಸಿ

  • ಗಾನಶ್ರೀ-೨೦೦೮ ಪ್ರಶಸ್ತಿ,
  • ಸಹ್ಯಾದ್ರಿ ಸುಗಮ ಸಂಗೀತ ಅಕ್ಯಾಡೆಮಿ ಪುರಸ್ಕಾರ,
  • ಮೈಥಿಲಿ ಏಕ ವ್ಯಕ್ತಿ ಪ್ರದರ್ಶನಕ್ಕಾಗಿ, ಕೃಷಿ ಮಹಾವಿದ್ಯಾಲಯ ಶಿವಮೊಗ್ಗ ಇವರಿಂದ ಮೆಚ್ಚುಗೆ ಪುರಸ್ಕಾರ,
  • ಶಿವಮೊಗ್ಗ ದಸರಾ-೨೦೧೪ ರಲ್ಲಿ ಮೈಥಿಲಿ ನಾಟಕಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ,
  • ಉಡುಪಿ ರಂಗಭೂಮಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ,
  • ಕಲಾ ಪ್ರತಿಭೋತ್ಸವದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಅಪೇಕ್ಷಾ ಕಲಾವೃಂದದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,
  • ೧೮ ನೇ ಅಖಿಲಭಾರತ ಕುವೆಂಪು ಏಕಾಂಕ ನಾಟಕ ಸ್ಪರ್ಧೆ-೨೦೧೪ ಕರ್ಣಾಂತರಂಗ ನಾಟಕಕ್ಕೆ ಪ್ರಶಸ್ತಿ,
  • ಶ್ರೀಗಂಧ ಸಂಸ್ಥೆಯಿಂದ ಆರ್. ಏನ್. ಜಯಗೋಪಾಲ್ ಅತ್ಯುತ್ತಮ ಗಾಯಕಿ ಪ್ರಶಸ್ತಿ,
  • ಸ್ಪಂದನ ಶ್ರೀ ಟ್ರಸ್ಟ್ ವತಿಯಿಂದ ಕಲಾಸೇವೆಯನ್ನು ಗುರುತಿಸಿ ಸ್ಪಂದನ ಶ್ರೀ ಪ್ರಶಸ್ತಿ,

ಉಲ್ಲೇಖಗಳು ಬದಲಾಯಿಸಿ

  1. ಸುಪ್ರಿಯಾ ಗಾನಾಭಿನಯ
  2. ಏಕವ್ಯಕ್ತಿ ನಾಟಕದ ಬಹುಮುಖೀ ಪ್ರತಿಭೆ, ಸುಪ್ರಿಯಾ ರಾವ್
  3. asianetnews, ಸುವರ್ಣ ನ್ಯೂಸ್, ಚಿತ್ರ ವಿಮರ್ಶೆ, ಹೇಗಿದೆ ಹಸಿರು ರಿಬ್ಬನ್

ಬಾಹ್ಯಸಂಪರ್ಕಗಳು ಬದಲಾಯಿಸಿ

  1. ಚಿತ್ರೀಕರಣ ಮುಗಿಸಿಕೊಂಡ 'ಅಮೃತವಾಹಿನಿ',ಮಾರ್ಚ್,೧೯,೨೦೧೯,Public Vibe