ಸುನೀತಿ ಕೃಷ್ಣಸ್ವಾಮಿ

ಜನನ - ಮೇ. ೨೧.೧೯೩೨
ಮರಣ - ಆಗಸ್ಟ್.೧೪.೨೦೦೦

ಪ್ರಸಿದ್ಧ ಕಾದಂಬರಿಗಾರ್ತಿ ಸುನೀತಿ ಕೃಷ್ಣ ಸ್ವಾಮಿಯವರು ಮೈಸೂರಿನವರು. ತಂದೆ ಸುಬ್ಬರಾವ್ ಮತ್ತು ತಾಯಿ ಪಾರ್ವತಮ್ಮ.

ಬರವಣಿಗೆ

ಬದಲಾಯಿಸಿ

ಇವರ ಬರವಣಿಗೆ ಪ್ರಾರಂಭವಾಗಿದ್ದು ಕೊರವಂಜಿ ಪತ್ರಿಕೆಯ ಮೂಲಕ. ೧೯೬೯ ರಲ್ಲಿ ಕನ್ನಡಪ್ರಭ ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅದೃಷ್ಟ ಚಕ್ರಇವರ ಮೊಟ್ಟ ಮೊದಲನೆಯ ಕಾದಂಬರಿ. ಪಚ್ಚೆ ಮನೆ ಎಂಬ ಇನ್ನೊಂದು ಕಾದಂಬರಿ ೧೯೭೨ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.

ಇತರ ಕಾದಂಬರಿಗಳು

ಬದಲಾಯಿಸಿ
  • ಪಚ್ಚೆ ಮನೆ (೧೯೭೮)
  • ಅದೃಷ್ಟ ಚಕ್ರ(೧೯೭೯)
  • ಸಂಧ್ಯಾ ಕಿರಣ(೧೯೮೨)
  • ಸ್ಮೃತಿ ತರಂಗ(೧೯೭೯)
  • ಡಾಕ್ಟರ್ ರಮ್ಯ(೧೯೮೦)
  • ಮಂದಾರ(೧೯೮೦)
  • ಗಿಣಿ-ರಾಗಿಣಿ-ವಿರಾಗಿಣಿ(೧೯೮೨)
  • ಮೃಗಜಲ(೧೯೮೩)
  • ದೀಪ ಲಕ್ಷ್ಮೀ(೧೯೮೨)
  • ಕಂದರದಿಂದ ಅಂಬರಕ್ಕೆ

ಕ್ಯಾನ್ಸರ್ ಕಾಯಿಲೆಯಿಗೆ ತುತ್ತಾಗಿದ್ದರೂ ಧೃತಿಗೆಡದೆ ಕಿದ್ವಾಯಿಸಂಸ್ಥೆಯ ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದು, ಕ್ಯಾನ್ಸರ್ ಪೀಡಿತರಿಗೆ ಧೈರ್ಯ ತುಂಬುತ್ತಿದ್ದರು.