ಸುಧಾ-ಆರ್.ಕೆ.ಹೋಂ ನ ಕೈಬರಹದ ಪತ್ರಿಕೆ
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಬೆಂಗಳೂರಿನಲ್ಲಿ 'ಸುಧಾ' ಎಂಬ ಹೆಸರಿನ 'ಕೈಬರಹದ ಪತ್ರಿಕೆ' ಇದೆ. ಇದು 'ಮೈಸೂರ್ ಪ್ರಿಂಟರ್ಸ್' ಯಜಮಾನತ್ವದ ಮುದ್ರಿತ ಪತ್ರಿಕೆಯಲ್ಲ. ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂನ ಸಜ್ಜನ್ ರಾವ್ ವೃತ್ತಕ್ಕೆ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು-೫೬೦ ೦೦೪ನಲ್ಲಿ ವಾಸ್ತವ್ಯಹೊಂದಿ, ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವ, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಬರೆಯಲ್ಪಟ್ಟು, ಸಂಪಾದಿಸಲ್ಪಟ್ಟಿದೆ. ಅದರಲ್ಲಿರುವ ಕವಿತೆ, ನಾಟಕ, ವಿಚಾರಪೂರ್ಣಲೇಖನಗಳು, ಹಾಸ್ಯ-ಚುಟಕಗಳು, ಮುಂತಾದ ಲೇಖನಗಳು ಆದರ್ಶಪ್ರಾಯವಾಗಿವೆ. ವಿದ್ಯಾರ್ಥಿಗಳೇ ಸುಂದರವಾದ ಮುಖಪುಟದ ವಿನ್ಯಾಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ.
'ಕೈಬರಹದ ಸುಧಾಪತ್ರಿಕೆಯ ಆರಂಭ'
ಬದಲಾಯಿಸಿಸನ್, ೧೯೨೭ ರಲ್ಲೇ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಜೊತೆಗೆ ಸಾಂಸ್ಕೃತಿಕ ವಿದ್ಯೆಯನ್ನು ಬಲಪಡಿಸಿಕೊಳ್ಳಲು ಪ್ರೋತ್ಸಾಹ ನೀಡಲು, 'ಡಿಬೇಟಿಂಗ್ ಸೊಸೈಟಿ'ಯ ಸ್ಥಾಪನೆಯಾಯಿತು. ಮುಂದೆ ಇದನ್ನೇ 'ಸ್ಟೂಡೆಂಟ್ಸ್ ಯೂನಿಯನ್' ಎಂದು ಕರೆಸಿಕೊಂಡು ೧೯೪೪-೪೫ ರಲ್ಲಿ 'ಸಾಹಿತ್ಯ ಸಂಘ' ಮೈದಳೆಯಿತು. ೧೯೪೭ ರಲ್ಲಿ ಪ್ರಪ್ರಥಮವಾಗಿ ಕೈಬರಹದ ಸುಧಾ ಎಂಬ ಪತ್ರಿಕೆಯನ್ನು ಹಾಸ್ಟೆಲ್ ನ ಇನ್ಮೇಟ್ ಗಳು ಹೊರತಂದರು. ಈ ಅಭಿಯಾನದ ಹಿಂದೆ. ಜಿ.ವಿ.ಯವರ 'ಪ್ರೋತ್ಸಾಹದ ಅಭಯ ಹಸ್ತ' ವಿತ್ತು.
ಕೃಪೆ
ಬದಲಾಯಿಸಿ- ಈ ಪ್ರತಿಯನ್ನು ಹಳೆಯ ವಿದ್ಯಾರ್ಥಿ, ಡಾ.ಎಚ್.ಆರ್.ಚಂದ್ರಶೇಖರ್, ರವರ 'ಖಾಸಗೀ ಫೈಲ್' ನಿಂದ ಪಡೆಯಲಾಗಿದೆ.