ಸುಚೇತ ಕೃಪಲಾನಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು.[] []ಮತ್ತು ರಾಜಕಾರಣಿ. ಅವರು 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರಕಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದರು.

ಸುಚೇತ ಕೃಪಲಾನಿ
ಸುಚೇತ ಕೃಪಲಾನಿ

ಉತ್ತರಪ್ರದೇಶದ ಮುಖ್ಯಮಂತ್ರಿ
ಅಧಿಕಾರ ಅವಧಿ
2 October 1963 – 13 March 1967
ಉತ್ತರಾಧಿಕಾರಿ Chandra Bhanu Gupta
ವೈಯಕ್ತಿಕ ಮಾಹಿತಿ
ಜನನ 25 June 1908
Ambala, Punjab, British India
ಮರಣ 1 December 1974
ರಾಜಕೀಯ ಪಕ್ಷ INC
ಸಂಗಾತಿ(ಗಳು) Acharya Kriplani

ಜನನ, ವಿದ್ಯಾಭ್ಯಾಸ

ಬದಲಾಯಿಸಿ

ಸುಚೇತಾ ಮಜುಂದಾರ್ ೧೯೦೮ ರಂದು ambari ಪಟ್ಟಣದಲ್ಲಿ ಜನಿಸಿದರು. ಸುಚೇತ ಕೃಪಲಾನಿಯು ಬೆಂಗಾಳಿ ಕುಟುಂಬದವರು. ಇವರ ತಂದೆ ಮಜುಂದಾರ್ ಭಾರತದ ದೇಶಪ್ರೇಮಿಯಾಗಿದ್ದರು. ಇವರು ತಮ್ಮ ವಿಧ್ಯಾಭ್ಯಾಸವನ್ನು ಇಂದ್ರಪ್ರಸ್ಥ ಕಾಲೇಜು ಮತ್ತು ಸೈಂಟ್ ಸ್ಟಿಫನ್ಸ್ ಕಾಲೇಜು ದೆಹಲಿಯಲ್ಲಿ ಮಾಡಿದರು. ನಂತರ ಬನಾರಸ್ ಹಿಂದೂ ವಿಶ್ವವಿಧ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

  • ಇವರು ವಿಭಜನೆಯ ಸಮಯದಲ್ಲಿ, ಮಹಾತ್ಮ ಗಾಂಧೀಜಿಯವರ ಜೊತೆಗೆ ಕೈ ಜೋಡಿಸಿ ಕಾರ್ಯವನ್ನು ನಿರ್ವಹಿಸಿದರು. ಇವರು ಗಾಂಧೀಜಿಯ ಜೊತೆಗೆ ನೊಯಾಕಾಲಿಗೆ ೧೯೪೬ರಲ್ಲಿ ಪ್ರಯಾಣವನ್ನು ಬೆಳೆಸಿದರು. ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಭಾರತದ ಐತಿಹಾಸಿಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.
  1. ಈಕೆ ಸಂವಿಧಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ. ಆಗಸ್ಟ್ ೧೫, ೧೯೪೭ರಂದು ಅಧಿವೇಶನದಲ್ಲಿ ರಾಷ್ಟ್ರಗೀತೆಯಾದ ವಂದೇ ಮಾತರಂ ಅನ್ನು ಹಾಡಿದರು. ಇವರು ಉತ್ತರಪ್ರದೇಶದ ರಾಜಕಾರಣಿಯಾಗಿದ್ದರು.
  2. ೧೯೫೨ ರಿಂದ ೧೯೫೭ವರೆಗೆ ಲೋಕಸಭಾ ಸದಸ್ಯೆಯಾಗಿದ್ದರು. ೧೯೬೩ರಲ್ಲಿ ಇವರು ಉತ್ತರ ಪ್ರದೇಶದ ಪ್ರಥಮ ಮಹಿಳಾ ರಾಜ್ಯಪಾಲೆಯಾಗಿ ಆಯ್ಕೆಯಾದರು.

೧೯೭೪ ರಲ್ಲಿ ಇವರು ನಿಧನರಾದರು.

ಉಲ್ಲೇಖ

ಬದಲಾಯಿಸಿ
  1. http://thirdeyemoment.blogspot.in/2014/04/19081974.html
  2. ಅಪರೂಪದ-ಸಂಸದೆ-ಸುಚೇತಾ www.prajavani.net