ಸುಂಡೆ

ಸಸ್ಯಗಳ ಒಂದು ಪ್ರಭೇದ

ಸುಂಡೆ ಸಸ್ಯವು (ಕುದನೆ) ತೋಟಗಾರಿಕೆಯಲ್ಲಿ ಬದನೆಗೆ ಮೂಲಕಾಂಡವಾಗಿ ಬಳಸಲಾಗುವ ಒಂದು ಪೊದೆಯಂಥ, ನೆಟ್ಟಗಿರುವ ಮತ್ತು ಮುಳ್ಳುಮುಳ್ಳಾದ ಬಹುವಾರ್ಷಿಕ ಸಸ್ಯ. ಕಸಿ ಮಾಡಲಾದ ಸಸ್ಯಗಳು ಬಹಳ ಗಟ್ಟಿಮುಟ್ಟಾಗಿದ್ದು, ಬೇರು ವ್ಯವಸ್ಥೆಯನ್ನು ಬಾಧಿಸುವ ರೋಗಗಳನ್ನು ಸಹಿಸಿಕೊಳ್ಳುತ್ತವೆ. ಹಾಗಾಗಿ, ಬೆಳೆಯು ಎರಡನೇ ವರ್ಷಕ್ಕೆ ಮುಂದುವರಿಯಲು ಅವಕಾಶ ನೀಡುತ್ತವೆ.

ಅಡುಗೆಯಲ್ಲಿ ಬದಲಾಯಿಸಿ

ತಮಿಳುನಾಡಿನಲ್ಲಿ, ಇದರ ಕಾಯಿಯನ್ನು ನೇರವಾಗಿ ಸೇವಿಸಲಾಗುತ್ತದೆ, ಅಥವಾ ಸಾಂಬಾರ್, ಪೊರಿಯಲ್, ಅವಿಯಲ್ ಮತ್ತು ಪುಳಿಕುಲಂಬುವಿನಂತಹ ಬೇಯಿಸಿದ ಆಹಾರವಾಗಿ ಸೇವಿಸಲಾಗುತ್ತದೆ. ಮೊಸರಿನಲ್ಲಿ ನೆನೆಸಿ ನಂತರ ಒಣಗಿಸಿ, ಅಂತಿಮ ಉತ್ಪನ್ನವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದನ್ನು ಸುಂಡೆಕಾಯಿ ವಾಟ್ರಲ್ ಎಂದು ಕರೆಯಲಾಗುತ್ತದೆ (ತಮಿಳುನಾಡಿನ ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯವಿದೆ). ಇದು ತಮಿಳುನಾಡಿನಾದ್ಯಂತ ಪ್ರಸಿದ್ಧವಾಗಿದೆ. ಭಾರತದ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಒಂದಾದ ಸಿದ್ಧ ಔಷಧಿಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸುಂಡೆವಾಟ್ರಲ್ ಚೂರ್ಣವನ್ನು ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ಸುಂಡೆ&oldid=913203" ಇಂದ ಪಡೆಯಲ್ಪಟ್ಟಿದೆ