ಸೀಮಾ ಕೌಶಿಕ್ ಮೆಹ್ತಾ (ಜನನ ೧೯೭೬) ಒಬ್ಬ ಭಾರತೀಯ ಕಥಕ್ ಪರಿಣಿತರು ಮತ್ತು ಆಭರಣ ವಿನ್ಯಾಸಕಿ. ಮುಂಬೈನಲ್ಲಿ ಸೌಲಭ್ಯ ವಂಚಿತ ಮಕ್ಕಳೊಂದಿಗೆ ಕೆಲಸ ಮಾಡಿದ ನಂತರ, ೨೦೧೯ ರಲ್ಲಿ ಅವರ ನೃತ್ಯದಲ್ಲಿನ ಸಾಧನೆಗಾಗಿ ಅವರು ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದರು.[][]

ಸೀಮಾ ಕೌಶಿಕ್ ಮೆಹ್ತಾ
೨೦೧೯ ಮಾರ್ಚ್‌ನಲ್ಲಿ
ಜನನc.೧೯೭೬
ರಾಷ್ಟ್ರೀಯತೆಭಾರತೀಯರು
ವಿದ್ಯಾಭ್ಯಾಸಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅಕಾಡೆಮಿ ಆಫ್ ಆರ್ಟ್ ಕಾಲೇಜ್
ವೃತ್ತಿನರ್ತಕಿ ಮತ್ತು ಆಭರಣ ವಿನ್ಯಾಸಕ
ಗಮನಾರ್ಹ ಕೆಲಸಗಳುನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿ
 
೨೦೧೯ ರಲ್ಲಿ ಲೀಲಾ ಡ್ಯಾನ್ಸ್ ಕಲೆಕ್ಟಿವ್‌ಗಾಗಿ ಮೆಹ್ತಾ ನೃತ್ಯ ಮಾಡಿದ್ದಾರೆ

ಮೆಹ್ತಾ ೨೦೧೦ ರಲ್ಲಿ ಚಿತ್ರೇಶ್ ದಾಸ್ ಅವರ ಶಿಷ್ಯೆಯಾದರು. ೧೦೧೫ ರಲ್ಲಿ ಚಿತ್ರೇಶ್ ದಾಸ್ ಸಾಯುವವರೆಗೂ ಅವರ ಆಲೋಚನೆಗಳನ್ನು ಅನುಸರಿಸಿದರು. ಮೆಹ್ತಾ ಅವರ ಬಳಿ ತರಬೇತಿ ಪಡೆದರು ಮತ್ತು ಅವರ ನೃತ್ಯ ಶೈಲಿಯನ್ನು ಭಾರತದಲ್ಲಿ ಪ್ರದರ್ಶಿಸುತ್ತಿದ್ದರು.[] ಅವರು ಮತ್ತು ಪಂಡಿತ್ ದಾಸ್ ಅವರು ೨೦೧೦ ರಲ್ಲಿ ಭಾರತದ ಮುಂಬೈನಲ್ಲಿ ಅವರ ಶಾಲೆ ಛಂದಂ ನೃತ್ಯ ಭಾರತಿಯ ಎರಡನೇ ಶಾಖೆಯನ್ನು ಸ್ಥಾಪಿಸಿದರು. ಶೋಷಣೆಯಿಂದ ಮುಕ್ತರಾಗಲು ಕಲ್ಕತ್ತಾದ ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೆ ಕಥಕ್ ನೃತ್ಯವನ್ನು ಮೆಹ್ತಾ ಅವರ ಮಾರ್ಗದರ್ಶಕರು ಕಲಿಸಿದ್ದರು.

೨೦೧೯ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ಮೆಹ್ತಾ ಅವರಿಗೆ ನಾರಿ ಶಕ್ತಿ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು. ಇದಕ್ಕೆ ೧೦೦೦ ಮಹಿಳೆಯರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದ್ದು, ೪೪ ಮಂದಿಯನ್ನು ಆಯ್ಕೆ ಮಾಡಲಾಗಿದೆ.[] ಮುಂಬೈನಲ್ಲಿ ಸೌಲಭ್ಯ ವಂಚಿತ ಮಕ್ಕಳೊಂದಿಗೆ ಕೆಲಸ ಮಾಡಿದ್ದರಿಂದ ಮೆಹ್ತಾ ಅವರನ್ನು ಆಯ್ಕೆ ಮಾಡಲಾಗಿದೆ. ಮಕ್ಕಳು ನೃತ್ಯವನ್ನು ಕಲಿಯುವುದರೊಂದಿಗೆ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುತ್ತಿದ್ದರು. ಸಮಾರಂಭದಲ್ಲಿ ಮೇನಕಾ ಗಾಂಧಿ ಅವರು ಭಾರತದಲ್ಲಿ ಮಹಿಳೆಯರ ಮಹತ್ವಾಕಾಂಕ್ಷೆಯ ಬಗ್ಗೆ ಮಾತನಾಡಿದರು.

ಮೆಹ್ತಾ ಅಮೇರಿಕನ್ ಟ್ಯಾಪ್ ಡ್ಯಾನ್ಸರ್ ಜೇಸನ್ ಸ್ಯಾಮ್ಯುಯೆಲ್ಸ್ ಸ್ಮಿತ್ ಅವರೊಂದಿಗೆ ಕಾಣಿಸಿಕೊಂಡರು. ಸ್ಯಾಮ್ಯುಯೆಲ್ಸ್ ಸ್ಮಿತ್ ಈ ಹಿಂದೆ ತನ್ನ ಮಾರ್ಗದರ್ಶಕರೊಂದಿಗೆ ಪ್ರವಾಸ ಮಾಡಿದ್ದರು. ಕಥಕ್ ಮತ್ತು ಟ್ಯಾಪ್ ಡ್ಯಾನ್ಸ್ ಒಂದಕ್ಕೊಂದು ಪೂರಕವಾಗಿರುತ್ತವೆ ಏಕೆಂದರೆ ಎರಡೂ ಪ್ರಮುಖ ವ್ಯತ್ಯಾಸವೆಂದರೆ ಪಾದರಕ್ಷೆಗಳೊಂದಿಗೆ ಪಾದಗಳನ್ನು ಬಳಸುವುದೆ ಕಥಕ್ ಅನ್ನು ಬರಿ ಪಾದದಲ್ಲಿ ಮಾಡಲಾಗುತ್ತದೆ.

ಮೆಹ್ತಾ ಅವರು ಛಂದಂ ನೃತ್ಯ ಭಾರತಿ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ಇನ್ನೂ ಆಭರಣ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.[] ಆಭರಣ ವಿನ್ಯಾಸ ಮತ್ತು ನೃತ್ಯ ಎರಡೂ ತನ್ನ ಜೀವನದ ಭಾಗವಾಗಿದೆ ಎಂದು ಅವರು ಹೇಳುತ್ತಾರೆ. ಅವರು ತಮ್ಮ ಕುಟುಂಬದ ಆಭರಣ ವ್ಯವಹಾರದಲ್ಲಿ ಸೃಜನಶೀಲ ನಿರ್ದೇಶಕರಾಗಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ