ಸೀಬೆ (ಸೀಬೆಹಣ್ಣು - ಚೇಪೆ ಕಾಯಿ) ಉಷ್ಣವಲಯದ ಪೊದರುಗಳು ಮತ್ತು ಸಣ್ಣ ಮರಗಳ ಸುಮಾರು ೧೦೦ ಪ್ರಜಾತಿಗಳನ್ನು ಹೊಂದಿರುವ ಮರ್ಟಲ್ ಕುಟುಂಬ (ಮಿರ್ಟೇಸಿಯೀ) ಜಾತಿ ಸೈಡಿಯಮ್‍ನಲ್ಲಿನ ಒಂದು ಸಸ್ಯ. ಅದು ಮೆಕ್ಸಿಕೊ, ಮಧ್ಯ ಅಮೇರಿಕಾ, ಮತ್ತು ದಕ್ಷಿಣ ಅಮೇರಿಕಾದ ಉತ್ತರ ಭಾಗಕ್ಕೆ ಸ್ಥಳೀಯವಾಗಿದೆ. ಸೀಬೆಯನ್ನು ಈಗ ಉಷ್ಣವಲಯಗಳು ಮತ್ತು ಉಪೋಷ್ಣವಲಯಗಳಾದ್ಯಂತ ಆಫ಼್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಕರಿಬಿಯನ್, ಉತ್ತರ ಅಮೇರಿಕಾ, ಹವಾಯಿ, ನ್ಯೂ ಜ಼ೀಲಂಡ್, ಆಸ್ಟ್ರೇಲಿಯಾ ಮತ್ತು ಸ್ಪೇನ್‍ನ ಉಪೋಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಹಾಗು ದೇಶೀಕರಿಸಲಾಗಿದೆ.

Psidium guajava fruit2.jpg

ದಕ್ಷಿಣ ಭಾರತದಲ್ಲಿ ಇದು ಸ್ವಾಭಾವಿಕ ಬೆಳೆಯಾಗಿದ್ದು ಬಡವರ ಸೇಬು ಎಂದು ಹೆಸರಾಗಿದೆ. ಔಷಧೀಯ ಸಸ್ಯವಾಗಿಯೂ ಇದು ಬಳಕೆಯಲ್ಲಿದೆ.

ಕನ್ನಡದಲ್ಲಿ ಪೇರಲ (ಚೇಪೆ ಕಾಯಿ) ಎಂದೂ ಇದಕ್ಕೆ ಹೆಸರಿದೆ.

"https://kn.wikipedia.org/w/index.php?title=ಸೀಬೆ&oldid=986941" ಇಂದ ಪಡೆಯಲ್ಪಟ್ಟಿದೆ