ಸೀತೆ ಆಟ
ಸೀತೆ ಆಟ ಅಂತ ಹೇಳುವ ಆಟ ಅದು ಚೆನ್ನೆಮಣೆಯಲ್ಲಿ ಆಡುವ ಆಟ.ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾತ್ರ ಈ ಚೆನ್ನೆ ಮಣೆ ಆಟವನ್ನು ಆಡುವ ಸಂಪ್ರದಾಯ ಇದೇ. ಯಾಕೆಂದರೆ ಆಟಿ ತಿಂಗಳಿನಲಿ ಜೋರಾಗಿ ಮಳೆ ಬರುವ ಕಾರಣ ಯಾವುದೇ ರೀತಿಯಲ್ಲಿ ಕೃಷಿ ಬೇಸಾಯಗಳನ್ನು, ಕೆಲಸಗಳನ್ನು ಮಾಡಲು ಆಗದೆ ಮನೆಯಲ್ಲಿಯೇ ಕೂತು ಹೊತ್ತು ಕಳೆಯಲು ಚೆನ್ನೆಮಣೆ ಆಟವನ್ನು ಆಡುತಿದ್ದರು.[೧] ಸೋಣ ಬಂದ ನಂತರ ಮಳೆ ಕಡಿಮೆ ಆದಾಗ ಚೆನ್ನೆಮಣೆ ಯನ್ನು ಅಟ್ಟಕ್ಕೆ ಹಾಕುವುದು ವಾಡಿಕೆ.ಹೆಚ್ಚು ಅಂದರೆ ಅಷ್ಟಮಿ ವರೆಗೆ ಆಡಬಹುದು
ಚೆನ್ನೆಮಣೆಯ ಪರಿಚಯ
ಬದಲಾಯಿಸಿಚೆನ್ನೆಮಣೆ ಯನ್ನು ಒಳ್ಳೆ ಜಾತಿಯ ಮರದಲ್ಲಿ ತಯಾರು ಮಾಡುತ್ತಾರೆ.ಈ ಮಣೆ ಆಯತಾಕಾರದಲ್ಲಿ ಇರುತ್ತದೆ. ಇದರಲ್ಲಿ ಕಾಯಿಗಳನ್ನು ಹಾಕಲು ಗುಳಿಗಳನ್ನು ಮಾಡಿರುತ್ತಾರೆ.ಅದರಲ್ಲಿ ಕಾಯಿಗಳನ್ನು ಹಾಕಿ ಇಡಬಹುದು. ಒಂದೊಂದು ಬದಿಯಲ್ಲಿ ಏಳು ಗುಳಿಗಳು ಇರುತ್ತವೆ.[೨] ಆಟದಲ್ಲಿ ಅದನ್ನು ಮನೆ ಅಂತ ಕರೆಯುತ್ತಾರೆ.
ಚೆನ್ನೆಮಣೆಯ ಆಟದ ಉಪಯೋಗ
ಬದಲಾಯಿಸಿಚೆನ್ನೆಮಣೆ ಆಟ ಆಡಿದರೆ ನಮ್ಮ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಎದುರಾಳಿಯು ಆಡುವ ಆಟವನ್ನು ನೋಡುವಾಗ ನಮ್ಮ ತಲೆಯಲ್ಲೂ ಆಲೋಚನಾ ಶಕ್ತಿಯು ಹೆಚ್ಚಾಗುತ್ತದೆ. ಚೆನ್ನೆಮಣೆ ಆಡುವಾಗ ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಮನಸಿಗೆ ಶಾಂತಿ ದೊರೆಯುತ್ತದೆ. ಮನೆಯವರು, ನೆರೆಮನೆಯವರು ಹೀಗೆ ಎಲ್ಲರೂ ಸೇರಿ ಆಡುವಾಗ ಸಾಮಾಜಿಕ ಬಾಂದವ್ಯ ಹೆಚ್ಚಾಗುತ್ತದೆ. ಚೆನ್ನೆಮಣೆ ಯಲ್ಲಿರುವ ಗುಳಿ(ಮನೆಯಿಂದ )ಕಾಯಿ ಹೆಕ್ಕಲು ಬೆರಳು ಹಾಕುವಾಗ ಬೆರಳಿನ ತುದಿಗೆ ಬಲ ಬಿದ್ದಾಗ ಅದು ಶಕ್ತಿ ಕೇಂದ್ರದ ಮೇಲೆ ಒತ್ತಡ ಬಿದ್ದು ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ನಮ್ಮ ಶರೀರಕ್ಕೆ ಆರೈಕೆ ಸಿಗುತ್ತದೆ.
ಆಟಕ್ಕೆ ಬೇಕಾದ ವಸ್ತುಗಳು
ಬದಲಾಯಿಸಿಈ ಆಟಕ್ಕೆ ಚೆನ್ನೆಮಣೆ ಮತ್ತು ಆಟ ಆಡಲು ಕಾಯಿಗಳು ಬೇಕು.ಸಾಮಾನ್ಯವಾಗಿ ಮಂಜೊಟ್ಟಿ ಕಾಯಿಗಳಲ್ಲಿ ಆಡುತ್ತಾರೆ. ಆ ಕಾಯಿ ಇಲ್ಲಾಂದ್ರೆ, ಹುಣಸೆ ಹಣ್ಣಿನ ಬೀಜ (ಪುಳಿಂಕಟೆ )ಇದರಲ್ಲಿ ಆಡುತ್ತಾರೆ. ಈ ಆಟ ಒಬ್ಬಳೆ ಆಡುವ ಆಟ ಆದ ಕಾರಣ ಸೀತೆ ಆಟ ಎಂಬ ಹೆಸರು ಬಂತು
ಆಟ ಆಡುವ ವಿಧಾನ
ಬದಲಾಯಿಸಿಸೀತೆ ಆಟ ಅಂದರೆ ಒಬ್ಬರೇ ಆಡುವ ಆಟ. ಮುಂಚಿನ ಕಾಲದಲ್ಲಿ ಸೀತೆ ರಾಮನಿಗಾಗಿ ಕಾದು ಕುಳಿತುಕೊಲ್ಲುವಾಗ ಆಡುತ್ತಿದ್ದ ಈ ಆಟಕ್ಕೆ ಚೆನ್ನೆ ಮಣೆ ಆಟದಲ್ಲಿ ಸೀತೆ ಆಟ ಅಂತ ಹೆಸರಿದೆ. ಇದರಲ್ಲಿ ಎಲ್ಲಾ ೧೪ ಮೆನೆಗಳು ಒಬ್ಬರಿಗೆ ಎಲ್ಲಾ ಮನೆಗೆ ನಾಲ್ಕು ನಾಲ್ಕು ಕಾಯಿಗಳನ್ನು ಹಾಕಿ ಆಡುವ ಕ್ರಮವೂ ಇದೆ. ಮತ್ತೆ ಕೆಲವು ಕಡೆ ಒಂದನೇ ಮನೆಗೆ ಒಂದು, ಎರಡನೇ ಮನೆಗೆ ಎರಡು, ಮೂರನೇ ಮನೆಗೆ ಮೂರು, ನಾಲ್ಕನೆ ಮನೆಗೆ ನಾಲ್ಕು ಕಾಯಿ ಐದನೇ ಮನೆಗೆ ಐದು ಕಾಯಿ, ಆರನೇ ಮನೆಗೆ ಆರು ಕಾಯಿ, ಏಳನೇ ಮನೆಗೆ ಏಳು ಕಾಯಿ, ಹಾಗೇ ಇನ್ನೊಂದು ಬದಿಯ ಕಾಯಿಗಳನ್ನು ಹಾಕಿಕೊಂಡು ಹಾಕಿಕೊಂಡು ಬರ್ಬೇಕು. ಮತ್ತೆ ಒಂದು ಮನೆಯ ಕಾಯಿ ತೆಗೆದು ಎಲ್ಲಾ ಮನೆಗೆ ಹಾಕಿಕೊಂಡು ಬರ್ಬೇಕು. ಇದರಲ್ಲಿ ಕಾಯಿ ಮುಗಿಲಿಕೆ ಇಲ್ಲ. ಮತ್ತೆ ಸೋಲು ಗೆಲುವು ಇಲ್ಲ.
ಉಲ್ಲೇಖ
ಬದಲಾಯಿಸಿ- ↑ "Chennemane - an Interesting Indoor Game of Tulunadu Region". 5 July 2021.
- ↑ "Chennemane is a symbol of Tulu culture and heritage". The Hindu. 24 July 2012.