ಸಿ. ಪಿ. ಬೆಳ್ಳಿಯಪ್ಪ
ಶ್ರೀ ಸಿ. ಪಿ. ಬೆಳ್ಳಿಯಪ್ಪನವರ ಪೂರ್ಣ ಹೆಸರು ಚೆಪುಡಿರ ಪೂಣಚ್ಚ ಬೆಳ್ಳಿಯಪ್ಪ. ಇವರ ತಂದೆ ಕೊಡಗಿನ ಮಾಜಿ ಮುಖ್ಯಮಂತ್ರಿಗಳಾಗಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಿ. ಎಂ. ಪೂಣಚ್ಚನವರು. ಮೂಲತ: ಕೆಮಿಕಲ್ ಇಂಜಿನಿಯರ್ ಆದ ಇವರು, ಕೆಲಕಾಲ ಅಮೇರಿಕಾದಲ್ಲಿ ನೆಲೆಸಿ, ೧೯೯೦ ರಿಂದ ಈಚೆಗೆ ಕೊಡಗಿನಲ್ಲಿ ನೆಲೆಸಿದ್ದಾರೆ. ಕೊಡಗಿನಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಶುರುವಾಗುವಲ್ಲಿ ಇವರ ಪಾತ್ರ ಮಹತ್ವದ್ದು. ಇವರು ಪ್ರಸ್ತುತ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಗೌರವ ಅಧ್ಯಕ್ಷರು [೧]. ಕೊಡಗಿನ ಬಗ್ಗೆ ಅಪಾರ ಪ್ರೀತಿ ಉಳ್ಳ ಇವರು, ಕೊಡಗಿನ ಬಗ್ಗೆ ಮೂರು ಇಂಗ್ಲೀಷ್ ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೆ ನಿಯಮಿತವಾಗಿ ಪತ್ರಿಕೆಗಳಿಗೆ ಕೂಡ ಲೇಖನಗಳನ್ನು ಬರೆಯುತ್ತಾರೆ.
ಕೃತಿಗಳು
ಬದಲಾಯಿಸಿ- Tale of a Tiger's Tail and Other Yarns from Coorg
- Nuggets from Coorg History
- Victoria Gowramma The Lost Princess of Coorg
ಅನುವಾದಿತ ಕೃತಿ
ಬದಲಾಯಿಸಿ- ವಿಕ್ಟೋರಿಯಾ ಗೌರಮ್ಮ - ಕನ್ನಡಕ್ಕೆ ಅನುವಾದಗೊಂಡ ಕೃತಿ[೨]
ಉಲ್ಲೇಖ
ಬದಲಾಯಿಸಿ- ↑ http: //www. citcoorg.edu .in/index.php?option=com_content&view=article&id=66&Itemid=69
- ↑ http://chukkubukku.com/victoria-gowramma