ಸಿ.ಎಸ್ ಲಕ್ಷ್ಮಿ ಅವರು ಭಾರತೀಯ ಮಹಿಳಾವಾದಿ ಬರಹಗಾರ್ತಿ ಮತ್ತು ಮಹಿಳಾ ಸಂಶೋಧಕಿ. ಅಂಬಾಯಿ ಅವರ ಕಾವ್ಯನಾಮ. ಅವರು ತಮಿಳುನಾಡಿನಲ್ಲಿ ಶಾಲಾ ಶಿಕ್ಷಕಿ ಮತ್ತು ಕಾಲೇಜು ಉಪನ್ಯಾಸಕರಾಗಿ ಕೆಲಸ ಮಾಡಿದರು. ಅವರು ಚಲನಚಿತ್ರ ನಿರ್ಮಾಪಕ ವಿಷ್ಣು ಮಾಥುರ್ ಅವರನ್ನು ವಿವಾಹವಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.[೧][೨][೩]

ಸಿ. ಎಸ್ ಲಕ್ಷ್ಮಿ
ಸಿ. ಎಸ್ ಲಕ್ಷ್ಮಿ
ಜನನ೧೯೪೪
ಕೊಯಂಬತ್ತೂರು,ತಮಿಳುನಾಡು
ವೃತ್ತಿಲೇಖಕಿ, ಸಂಶೋಧಕಿ
ಭಾಷೆತಮಿಳು
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಪಿಎಚ್ಡಿ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಜವಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ
ಬಾಳ ಸಂಗಾತಿವಿಷ್ಣು ಮತುರ್

ಸಾಹಿತ್ಯ ಬದಲಾಯಿಸಿ

೧೯೬೨ ಲಕ್ಷ್ಮಿ ಅವರು ಮೊದಲ ಕೃತಿ 'ನಂದಿಮಲೈ ಚಾರ್ಲಿಲೇ'ಯನ್ನು ಪ್ರಕಟಿಸಿದರು. ೧೯೬೬ರಲ್ಲಿ ಅವರ ಮೊದಲ ತಮಿಳು ಕಾದಂಬರಿ ಆಂಡಿ ಮಾಲೈ ಪ್ರಕಟವಾಯಿತು. ಈ ಕಾದಂಬರಿಯು "ಕಲೈಮಾಗಲ್ ನಾರಾಯಣಸ್ವಾಮಿ ಅಯ್ಯರ್" ಪ್ರಶಸ್ತಿಯನ್ನು ಪಡೆದುಕೊಂಡಿದೆ. ೧೯೬೭ರಲ್ಲಿ ಇವರ ಸಾಹಿತ್ಯಕ ನಿಯತಕಾಲಿಕೆ ಕನೈಜಳಿಯಲ್ಲಿ ಪ್ರಕಟವಾದ ಕಿರುಕಥೆ ಸಿರಗುಕಲ್ ಮುರುಯಮ್ ವಿಮರ್ಶಾತ್ಮಕ ಮೆಚ್ಚುಗೆ ಪಡೆದಿದೆ. ೧೯೭೬ರಲ್ಲಿ ತಮಿಳು ಮಹಿಳಾ ಬರಹಗಾರರ ಕೆಲಸವನ್ನು ಅಧ್ಯಯನ ಮಾಡಲು ಅವರಿಗೆ ಎರಡು ವರ್ಷಗಳ ಫೆಲೋಶಿಪ್ ನೀಡಲಾಯಿತು. ೧೯೮೪ರಲ್ಲಿ ದಿ ಫೇಸ್ ಬಿಸ್ ದಿ ಮಾಸ್ಕ್ (ಅಡ್ವೆಂಟ್ ಬುಕ್ಸ್) ಎಂಬ ಸಂಶೋಧನಾ ಕಾರ್ಯವನ್ನು ಪ್ರಕಟಿಸಲಾಯಿತು. ೧೯೮೮ರಲ್ಲಿ ವೀಟಿನ್ ಮುಲೈಯಿಲ್ ಔರು ಕ್ಯಾಮಯ್ಯಲೈರೈ) ಶೀರ್ಷಿಕೆಯ ಎರಡನೆಯ ತಮಿಳು ಸಣ್ಣ ಕಥಾ ಸಂಗ್ರಹವನ್ನು ಪ್ರಕಟಿಸಲಾಯಿತು.[೪][೫]

ಶಿಕ್ಷಣ ಕ್ಷೇತ್ರ ಬದಲಾಯಿಸಿ

ಮೂವತ್ತು ವರ್ಷಗಳಿಂದ ಮಹಿಳಾ ಅಧ್ಯಯನ ಕ್ಷೇತ್ರದಲ್ಲಿ ಲಕ್ಷ್ಮಿ ಅವರು ಸ್ವತಂತ್ರ ಸಂಶೋಧಕರಾಗಿದ್ದಾರೆ. ೧೯೯೨ರಲ್ಲಿ ಚಿಕಾಗೋದ ಕಲ್ಚರ್ ಮತ್ತು ಕಾನ್ಸಿಯಸ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕರಾಗಿದ್ದರು.[೬] ರೊಜಾ ಮುಥಾಯ್ಯ ಚೆಟ್ಟಿಯಾರ್ರ ಪುಸ್ತಕಗಳ ಸಂಗ್ರಹ ಮತ್ತು ಇತರ ಪ್ರಕಟಿತ ವಸ್ತುಗಳನ್ನು ಪಡೆದುಕೊಳ್ಳಲು ವಿಶ್ವವಿದ್ಯಾನಿಲಯವನ್ನು ಮನವೊಲಿಸುವ ಮೂಲಕ ಅವರು ರೋಜಾ ಮುಥ್ಯ ಸಂಶೋಧನಾ ಗ್ರಂಥಾಲಯ (ಆರ್ಎಮ್ಆರ್ಎಲ್)[೭]ಸ್ಥಾಪಿಸಲು ಪ್ರಯತ್ನಿಸಿದ್ದರು.

ಇಂಗ್ಲೀಷ್ ಪುಸ್ತಕಗಳು ಬದಲಾಯಿಸಿ

  • ದಿ ಫೇಸ್ ಬಿಹೈಂಡ್ ಮಾಸ್ಕ್: ವುಮೆನ್ ಇನ್ ತಮಿಳ್ ಲಿಟರೇಚರ್ (೧೯೮೪)
  • ಎ ಪರ್ಪಲ್ ಸಿ (೧೯೯೨)
  • ಬಾಡಿ ಬ್ಲೋವ್ಸ್ (೨೦೦೦)
  • ಸೆವೆನ್ ಸೀಸ್ ಅನದ ಮೌಂಟೇನ್
  • ದಿ ಅನ್ಹರಿಡ್ ಸಿಟಿ (೨೦೦೦)
  • ಇನ್ ಎ ಫೋರೆಸ್ಟ್: ಅ ಡೀರ್
  • ಅ ಮೀಟಿಂಗ್ ಆನ್ ದ ಅಂಧೇರಿ ಬ್ರಿಡ್ಜ್

ತಮಿಳು ಪುಸ್ತಕಗಳು ಬದಲಾಯಿಸಿ

  • ನಂದಿಮಲೈ ಚಾರ್ಲಿಲೇ (೧೯೬೨)
  • ಆಂದಿ ಮಲೈ (೧೯೬೭)
  • ಸಿರಕುಕಲ್ ಮುರಿಯಮ್ (೧೯೭೬)
  • ವೀಟಿನ್ ಮುಲೈಲ್ ಔರು ಕ್ಯಾಮಯ್ಯಲಾರಾಯ್ (೧೯೮೮)
  • ಕಲಾಚುವಾಡು ನೆರ್ಕನಾಲ್ಗಲ್ (೧೯೯೮)
  • ಕಾಟಿಲ್ ಒರು ಮಾನ್ (೨೦೦೦)
  • ವೆರಮ್ ಎರಿನ್ ಮೀನ್ಗಲ್ (೨೦೦೭)

ಉಲ್ಲೇಖಗಳು ಬದಲಾಯಿಸಿ

  1. https://www.loc.gov/acq/ovop/delhi/salrp/cslakshmi.html
  2. https://www.thehindu.com/fr/2005/05/06/stories/2005050603560300.htm
  3. https://books.google.co.in/books?id=ClNEJwXLNQIC&pg=PA166&redir_esc=y#v=onepage&q&f=false
  4. https://books.google.co.in/books?id=Y-TMhtk5AUYC&pg=PA13&redir_esc=y#v=onepage&q&f=false
  5. https://books.google.co.in/books?id=OjZYf9Xf9bcC&pg=PA488&redir_esc=y#v=onepage&q&f=false
  6. http://magazine.uchicago.edu/9512/9512Obsession2.html
  7. https://www.lib.uchicago.edu/e/su/southasia/about-rmrl.html