ಸಿಸ್ಟರ್ ಕ್ಲೇರ್ (ಕಲಾವಿದೆ)
ಸಿಸ್ಟರ್ ಕ್ಲೇರ್ | |
---|---|
Born | ಮೀರಾ ೧೯೩೭ ಆ೦ಧ್ರ ಪ್ರದೇಶ |
Died | ೧೧ ಫೆಬ್ರವರಿ ೨೦೧೮ ಬೆ೦ಗಳೂರು |
Nationality | ಭಾರತೀಯ |
Occupation | ಕ್ಯಾಥೊಲಿಕ್ ಸನ್ಯಾಸಿನಿ ಮತ್ತು ಕಲಾವಿದೆ |
Organization | ಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ) |
ಸಿಸ್ಟರ್ ಮೇರಿ ಕ್ಲೇರ್ (೧೯೩೭ - ೧೧ ಫೆಬ್ರವರಿ ೨೦೧೮) ಬೆಂಗಳೂರಿನವರು. ಕಲಾವಿದೆ ಮತ್ತು ಕ್ಯಾಥೋಲಿಕ್ ಸನ್ಯಾಸಿನಿ ಆಗಿದ್ದರು. ಅವರ ಹೆಸರಿನಲ್ಲಿ ೭೫೦ ಕ್ಕೂ ಹೆಚ್ಚು ವರ್ಣಚಿತ್ರಗಳು ಮತ್ತು ಕಲಾಕೃತಿಗಳು ಇವೆ. [೧] ಅವರ ಕೃತಿಗಳು ವಿಶೇಷವಾಗಿ ಕ್ರಿಶ್ಚಿಯನ್ ದೃಶ್ಯಗಳಲ್ಲಿ ಭಾರತೀಯ ಚಿತ್ರಣವನ್ನು ಬಳಸುವುದಕ್ಕೆ ಹೆಸರುವಾಸಿಯಾಗಿದೆ. ಅಂತೆಯೇ, ಅವರು ಹೆಚ್ಚು ತಿಳಿದಿರುವ ಸಮಕಾಲೀನ ಭಾರತೀಯ ಕ್ರಿಶ್ಚಿಯನ್ ಕಲಾವಿದರಲ್ಲಿ ಒಬ್ಬರು. [೨] [೩]
ಆರಂಭಿಕ ಜೀವನ
ಬದಲಾಯಿಸಿಆಂಧ್ರಪ್ರದೇಶದಲ್ಲಿ ಜನಿಸಿದ ಕ್ಲೇರ್ ರವರು, ಒಂಬತ್ತು ಜನ ಮಕ್ಕಳಲ್ಲಿ ಎರಡನೆಯವರಾಗಿದ್ದಾರೆ. [೪] ಅವರು ಮೇಲ್ಜಾತಿ ಹಿಂದೂ ಕುಟುಂಬದಲ್ಲಿ ಜನಿಸಿ, ಮೀರಾ ಎಂಬ ಹೆಸರನ್ನು ಪಡೆದಿದ್ದರು. [೫] [೬] ಆಕೆಯ ತಂದೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದರಿ೦ದ ಆಗಾಗ್ಗೆ ವರ್ಗಾವಣೆಗಳನ್ನು ಪಡೆಯುತ್ತಿದ್ದರು. ಅವರು ವರ್ಗಾವಣೆಯಾದಾಗಲೆಲ್ಲ ಕುಟುಂಬದವರು ಸಹ ಅವರೊಂದಿಗೆ ತೆರಳುತ್ತಿದ್ದರು. [೭] ಕುಟುಂಬವು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, Sr. ಕ್ಲೇರ್ ಅವರನ್ನು ಕ್ರಿಶ್ಚಿಯನ್ ಶಾಲೆಗೆ ಕಳುಹಿಸಲಾಯಿತು. ಅಲ್ಲಿ ಅವರು ಯೇಸುವಿನಲ್ಲಿ ಪ್ರೀತಿಯನ್ನು ಕಂಡುಕೊಂಡರು. [೮]
೧೭ ನೇ ವಯಸ್ಸಿನಲ್ಲಿ, ನಿಯೋಜಿತ ಮದುವೆಯನ್ನು ತಪ್ಪಿಸಲು, ಅವರು ತನ್ನ ಮನೆಯಿಂದ ಬೆಂಗಳೂರಿನಲ್ಲಿರುವ ಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ) ನಡೆಸುತ್ತಿರುವ ಸೇಂಟ್ ಮೇರಿ ಕಾನ್ವೆಂಟ್‌ಗೆ ಓಡಿಹೋದರು. ೧೮ ನೇ ವಯಸ್ಸಿನಲ್ಲಿ, ಅವರು ದೀಕ್ಷೆಯನ್ನು ಪಡೆದುಕೊ೦ಡು ಎಸ್.ಎಮ್.ಎಮ್.ಐ ಗೆ ಸೇರಿದರು. [೯] ಆರು ಮತ್ತು ಏಳನೆ ನೇ ತರಗತಿಗಳಿಗೆ ಬೋಧನೆ ಮಾಡಲು Sr ಕ್ಲೇರ್ ಅವರನ್ನು ನಿಯೋಜಿಸಲಾಯಿತು. [೧೦] ಅವರು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ಕಲಿಸಲು ಸಾಧ್ಯವಾಗದಿದ್ದಾಗ, ಚಿತ್ರಕಲೆಯನ್ನು ಪ್ರಾರಂಭಿಸಿದರು. ಆಕೆಯ ಪ್ರತಿಭೆಯನ್ನು ಗುರುತಿಸಿದ ಆಕೆಯ ತಾಯಿಯು ಅವರನ್ನು ಕಲಾಶಾಲೆಗೆ ಕಳುಹಿಸಿದರು. [೧೧] [೧೨]
ಕಲಾಕೃತಿ
ಬದಲಾಯಿಸಿಸಿಸ್ಟರ್ ಕ್ಲೇರ್ ಅವರ ಕಲಾಕೃತಿಯನ್ನು ಪೋಪ್ ಜಾನ್ ಪಾಲ್ II ಅವರಿಗೆ ಎಸ್.ಎಮ್.ಎಮ್.ಐ ನ ಮೊದಲ ಭಾರತೀಯ ಸುಪೀರಿಯರ್ ಜನರಲ್ ಆದ ಜೇನ್ ಸ್ಕೇರಿಯ ಅವರು ಉಡುಗೊರೆಯಾಗಿ ನೀಡಿದ್ದಾರೆ. [೧೩] ಅವರ ಕೃತಿಗಳು ಪುಸ್ತಕಗಳು, [೧೪] [೧೫] ಪೋಸ್ಟರ್‌ಗಳು, [೧೬] ಬ್ಲಾಗ್‌ಗಳು, [೧೭] ಮತ್ತು ಕ್ರಿಸ್ಮಸ್ ಕಾರ್ಡ್‌ಗಳಲ್ಲಿ ಕಾಣಿಸಿಕೊಂಡಿವೆ. Sr ಕ್ಲೇರ್ ಅವರ ವರ್ಣಚಿತ್ರಗಳು ಭಾರತೀಯ ಗ್ರಾಮೀಣ ವ್ಯವಸ್ಥೆಯಲ್ಲಿ ಕ೦ಡುಬರುವಬೈಬಲ್‌ನ ಕಥೆಗಳು ಮತ್ತು ವಿಚಾರಗಳ ಸುತ್ತ ಸುತ್ತುತ್ತವೆ. ಅವರು ಕಣ್ಣು ಕುಕ್ಕುವ ಬಣ್ಣಗಳು ಮತ್ತು ವಿಶಿಷ್ಟವಾದ ಭಾರತೀಯ ಸ೦ಯೋಜನೆಗಳು, ಚಿಹ್ನೆಗಳು ಮತ್ತು ಉಡುಪುಗಳನ್ನು ಬಳಸಿ ಚಿತ್ರಿಸಿದ್ದಾರೆ. [೧೮] ಅವರು ಭಾರತೀಯ ಚಿಹ್ನೆಗಳು ಮತ್ತು ಹಿನ್ನೆಲೆಯಲ್ಲಿ ಕ್ರುಸಿಫಿಕೇಫನ್, ದ ಲಾಸ್ಟ್ ಸಪ್ಪರ್ ಮತ್ತು ಕ್ರಿಸ್‌ಮಸ್‌ನಂತಹ ವಿಷಯಗಳನ್ನು ಚಿತ್ರಿಸಿದ್ದಾರೆ. [೧೯] ಅವರು ವಾರ್ಷಿಕವಾಗಿ ೧೦೦೦ ಕ್ಕೂ ಹೆಚ್ಚು ಕ್ರಿಸ್ಮಸ್ ಕಾರ್ಡ್‌ಗಳನ್ನು ಚಿತ್ರಿಸಿದ್ದಾರೆ ಮತ್ತು ಮುದ್ರಿಸಿದ್ದಾರೆಂದು ತಿಳಿದುಬಂದಿದೆ. [೨೦]
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸೇಂಟ್ ಮೇರಿ ಕಾನ್ವೆಂಟ್ ಆವರಣದಲ್ಲಿರುವ ಕ್ರಿಶ್ಚಿಯನ್ ಆರ್ಟ್ ಗ್ಯಾಲರಿಯಲ್ಲಿ ಕ್ಲೇರ್ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. [೨೧] ೧೮೦೦ ಚದರ ಅಡಿ ಆರ್ಟ್ ಗ್ಯಾಲರಿಯನ್ನು ದಿ ಸಲೇಶಿಯನ್ ಮಿಷನರೀಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಸ್.ಎಮ್.ಎಮ್.ಐ) ತೆರೆಯಿತು. [೨೨]
ಗುರುತಿಸುವಿಕೆ
ಬದಲಾಯಿಸಿಪೋಪ್ ಬೆನೆಡಿಕ್ಟ್ XVI ಅವರು ಕ್ಲೇರ್ ಅವರನ್ನು ಅಭಿನಂದಿಸಲು ಅವರನ್ನು ವ್ಯಾಟಿಕನ್‌ಗೆ ಆಹ್ವಾನಿಸಿದರು. ಅವರು ಹೋಗಲಿಲ್ಲ, ಆದರೆ ಪೋಪ್ ಅವರನ್ನು ಗೌರವಿಸಲು ಕಾರ್ಡಿನಲ್ ನನ್ನು ಬೆಂಗಳೂರಿಗೆ ಕಳುಹಿಸಿದರು. [೨೩] ಅವರು ೨೦೧೨ ರಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದಿಂದ ನೀಡಲ್ಪಡುವ ಜೀವಮಾನ ಸಾಧನೆಯ ಪ್ರಶಸ್ತಿಯಾದ ಅಸ್ಸಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ. [೨೪]
ಉಲ್ಲೇಖಗಳು
ಬದಲಾಯಿಸಿ- ↑ "Pentecost Art (India, Sister Claire)". Global Christian Worship.
- ↑ SJ, Anand Amaladass (19 September 2011). "Christian Themes in Indian Art from Mughal Times to the Present". Manohar Publishers.
- ↑ "India's noted nun painter dies". Mattersindia.com. 11 February 2018. Retrieved 19 November 2018.
- ↑ Fuller, Theological Seminary (2018). "Collection 0064:Collection of Sr Claire, SMMI Biblical Art, 1980-2003". Digital Commons Fuller Education. Archived from the original on 2021-10-17.
- ↑ Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
- ↑ "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2021-03-28.

- ↑ "Guide to the Sr. Claire, SMMI: Biblical Posters". oac.cdlib.org. Retrieved 2021-03-28.

- ↑ "Q & A with Sr. Marie Claire, impressing popes with her paintings". Global Sisters Report (in ಇಂಗ್ಲಿಷ್). 2017-01-24. Retrieved 2020-08-06.
- ↑ "Sr. Claire, SMMI: Biblical Posters". worldcat.org.
- ↑ Society, Bible (10 September 1988). "The Bible in Pictures TRILINGUAL Urdu, Sindhi and Parkari Language Comments by each Illustration Biblical Posters / Sr.M.Claire SMMI The Catholic Diocese of Hyderabad / Pakistan". Bible Society.
- ↑ "Guide to the Sr. Claire, SMMI: Biblical Posters". Oac.cdlib.org.
- ↑ "Christmas Story Art from India (Sr. Claire set 3)". Global Christian Worship.
- ↑ Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2021-03-28.
- ↑ "Art gallery in Bengaluru highlights nuns' works". Matters India (in ಅಮೆರಿಕನ್ ಇಂಗ್ಲಿಷ್). 2017-06-15. Retrieved 2021-03-28.

- ↑ Shekhar, Divya. "Meet the 80-yr-old nun who paints & prints over 1,000 Christmas cards a year". The Economic Times. Retrieved 2020-08-06.
- ↑ "India's noted nun painter dies". Matters India (in ಅಮೆರಿಕನ್ ಇಂಗ್ಲಿಷ್). 2018-02-11. Retrieved 2021-03-28.