ಸಿಲ್ವರ್ ಅರೋವಾನಾ, ದಕ್ಷಿಣ ಅಮೇರಿಕ ಆಸ್ಟಿಯೋಗ್ಲೋಸಮ್ ಸಿಹಿ ನೀರಿನ ಮೂಳೆ ಮೀನು ಆಗಿದ್ದು, ಆಸ್ಟಯೋಗೋಸಿಡೆ ಕುಟುಂಬಕ್ಕೆ ಸೇರಿದೆ. ಸಿಲ್ವರ್ ಅರೋವಾನಾಗಳನ್ನು ಕೆಲವೊಮ್ಮೆ ಅಕ್ವೇರಿಯಂಗಳಲ್ಲಿ ಇರಿಸಲಾಗುತ್ತದೆ. ಆದರೆ ಅವು ಪರಭಕ್ಷಕ ಮೀನುಗಳಾಗಿದ್ದು, ದೊಡ್ಡ ಟ್ಯಾಂಕ್‍ನ ಅಗತ್ಯವಿರುತ್ತದೆ.[೧] ಈ ಮೀನಿನ ಸಾಮಾನ್ಯ ಹೆಸರು ಆಸ್ಟಿಯೋಗ್ಲೋಸಮ್ ಅಂದರೆ ಮೂಳೆ-ನಾಲಿಗೆ ಮತ್ತು ನಿರ್ದಿಷ್ಟ ಹೆಸರು ಬೈಸಿಹೋರ್ಸಮ್ ಎಂದರೆ ಟು ಬಾರ್ಬೆಲ್ಸ್(ಇದು ಗ್ರೀಕ್ ಭಾಷೆ).

ಸಿಲ್ವರ್ ಅರೋವಾನಾ
ಸಿಲ್ವರ್ ಅರೋವಾನಾ

ವ್ಯಾಪ್ತಿ ಮತ್ತು ಆವಾಸ ಸ್ಥಾನ ಬದಲಾಯಿಸಿ

ಈ ದಕ್ಷಿಣ ಅಮೆರಿಕಾದ ಪ್ರಭೇದವು ಅಮೆಜಾನ್‍ಗೆ ಸ್ಥಳೀಯವಾಗಿದೆ.[೨] ಎಸ್ಸೆಕಿಬೋ ಮತ್ತು ಓಯಾಪಾಕ್ ಜಲಾನಯನ ಪ್ರದೇಶಗಳಲ್ಲಿ ಇದು ಮುಖ್ಯವಾಗಿ ಕಂಡುಬರುತ್ತದೆ.ಇದು ಬ್ರಾಂಕೋ ನದಿಯನ್ನು ಹೊರತುಪಡಿಸಿ ರಿಯೊ ನೀಗ್ರೋ ಜಲಾನಯನ ಪ್ರದಶಗಳಲ್ಲಿ ಇರುವುದಿಲ್ಲ.ಇಲ್ಲಿ ಸಿಲ್ವರ್ ಮತ್ತು ಕಪ್ಪು ಅರೋವಾನಾಗಳು ವಾಸಿಸುತ‍್ತವೆ. ಸಿಲ್ವರ್ ಅರೋವಾನಾವು ಪ್ರವಾಹಕ್ಕೆ ಒಳಗಾದ ಕಾಡುಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ನೀರಿನ ಆವಾಸ ಸ್ಥಾನಗಳಲ್ಲಿ ಕಂಡುಬರುತ್ತದೆ.[೩]

ವಿವರಣೆ ಬದಲಾಯಿಸಿ

ಈ ಮೀನು ತುಲನಾತ್ಮಕವಾಗಿ ದೊಡ್ಡ, ಉದ್ದವಾದ ದೇಹ ಮತ್ತು ಮೊನಚಾದ ಬಾಲವನ್ನು ಹೊಂದಿದೆ, ಡಾರ್ಸಲ್ ಮತ್ತು ಗುದದ ರೆಕ್ಕೆಗಳು ಸಣ್ಣ ಕಾಡಲ್ ಫಿನ್‌ವರೆಗೆ ವಿಸ್ತರಿಸಿವೆ ಮತ್ತು ಅವು ಬಹುತೇಕ ಬೆಸೆದುಕೊಂಡಿವೆ. ಇದರ ಗರಿಷ್ಠ ಒಟ್ಟು ಉದ್ದವನ್ನು ಸಾಮಾನ್ಯವಾಗಿ ೦.೯ ಮೀ (೩.೦ ಅಡಿ) ಎಂದು ಪರಿಗಣಿಸಲಾಗುತ್ತದೆ, ಆದರೆ ೧.೨ ಮೀ (೩.೯ ಅಡಿ) ವರೆಗಿನ ಮೀನುಗಳ ವರದಿಗಳಿವೆ. ಕಪ್ಪು ಅರೋವಾನಾಕ್ಕಿಂತ ಭಿನ್ನವಾಗಿ, ಸಿಲ್ವರ್ ಅರೋವಾನಾ ತನ್ನ ಜೀವಿತಾವಧಿಯಲ್ಲಿ ಒಂದೇ ಬಣ್ಣವನ್ನು ಹೊಂದಿರುತ್ತದೆ. ಎರಡು ಜಾತಿಗಳ ವಯಸ್ಕ ಮೀನುಗಳಿಗೆ ಹೋಲಿಕೆಯಿದೆ, ಆದರೆ ಮೆರಿಸ್ಟಿಕ್ಸ್ ಮೂಲಕ ಪ್ರತ್ಯೇಕಿಸಬಹುದು.[೪]

ಅರೋವಾನಾಗಳನ್ನು ಕೆಲವೊಮ್ಮೆ ಅಕ್ವಾರಿಸ್ಟ್‌ಗಳು ಡ್ರ್ಯಾಗನ್ ಮೀನು ಎಂದು ಕರೆಯುತ್ತಾರೆ, ಏಕೆಂದರೆ ಅವುಗಳ ಹೊಳೆಯುವ, ರಕ್ಷಾಕವಚದಂತಹ ಮಾಪಕಗಳು ಮತ್ತು ಡಬಲ್ ಬಾರ್ಬೆಲ್‌ಗಳು ಪೂರ್ವ ಏಷ್ಯಾದ ಜಾನಪದ ಕಥೆಗಳಲ್ಲಿ ಡ್ರ್ಯಾಗನ್‌ಗಳವಿವರಣೆಯನ್ನು ನೆನಪಿಸುತ್ತವೆ.[೫]

ನಡವಳಿಕೆ ಬದಲಾಯಿಸಿ

ನೀರಿನಿಂದ ಜಿಗಿಯುವ ಮತ್ತು ಅದರ ಬೇಟೆಯನ್ನು ಹಿಡಿಯುವ ಸಾಮರ್ಥ್ಯದ ಕಾರಣದಿಂದಾಗಿ ಈ ಜಾತಿಯನ್ನು ವಾಟರ್ ಮಂಕಿ ಎಂದೂ ಕರೆಯುತ್ತಾರೆ. ಬಾವಲಿಗಳು[೬], ಇಲಿಗಳು ಮತ್ತು ಪಕ್ಷಿಗಳ ಅವಶೇಷಗಳೊಂದಿಗೆ ಮಾದರಿಗಳು ಕಂಡುಬಂದರೂ, ಇದು ಸಾಮಾನ್ಯವಾಗಿ ಸಂಭಾವ್ಯ ಬೇಟೆಗಾಗಿ ಕಾಯುತ್ತಿರುವ ನೀರಿನ ಮೇಲ್ಮೈ ಬಳಿ ಈಜುತ್ತದೆ. ಅದರ ಮುಖ್ಯ ಆಹಾರವು ಕಠಿಣಚರ್ಮಿಗಳು, ಕೀಟಗಳು, ಸಣ್ಣ ಮೀನುಗಳು ಮತ್ತು ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಇತರ ಪ್ರಾಣಿಗಳನ್ನು ಒಳಗೊಂಡಿರುತ್ತದೆ. ಅದರ ಡ್ರಾಬ್ರಿಡ್ಜ್ ತರಹದ ಬಾಯಿಯನ್ನು ಆಹಾರಕ್ಕಾಗಿ ಪ್ರತ‍್ಯೇಕವಾಗಿ ಅಳವಡಿಸಲಾಗಿದೆ.

ಸಂರಕ್ಷಣಾ ಸ್ಥಿತಿ ಬದಲಾಯಿಸಿ

ಸಿಲ್ವರ್ ಅರೋವಾನಾವನ್ನು ಪ್ರಸ್ತುತ ಯಾವುದೇ ಸೈಟ್ಸ್ ಅನುಬಂಧದಲ್ಲಿ ಅಥವಾ ೨೦೦೪ರ ಐಯುವ್‍ಸಿಎನ್ ರೆಡ್ ಲಿಸ್ಟ್‌‍ನಲ್ಲಿ ಪಟ್ಟಿ ಮಾಡಲಾಗಿಲ್ಲ. ಇದು ದಕ್ಷಿಣ ಅಮೆರಿಕಾದ ಅತ್ಯಂತ ಜನಪ್ರಿಯ ಅಲಂಕಾರಿಕ ಮೀನುಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದರ ಸಂರಕ್ಷಣೆಯ ಸ್ಥಿತಿಯು ಗಮನಕ್ಕೆ ಅರ್ಹವಾಗಿದೆ.

 
ಹಿಮ ಅರೋವಾನಾ

ಆಗಸ್ಟ್ ೨೦೦೫ ರಲ್ಲಿ ಎನ್ವಿರಾನ್ಮೆಂಟ್ ನ್ಯೂಸ್ ಸರ್ವಿಸ್ ವರದಿ ಮಾಡಿದಂತೆ, ಸಿಲ್ವರ್ ಅರೋವಾನಾ ಜನಸಂಖ್ಯೆಯ ಹಂಚಿಕೆಯ ಬಳಕೆಯು ಬ್ರೆಜಿಲಿಯನ್ ಮತ್ತು ಕೊಲಂಬಿಯಾದ ಅಧಿಕಾರಿಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಎಳೆಯ ಸಿಲ್ವರ್ ಅರೋವಾನಾಗಳನ್ನು ಕೊಲಂಬಿಯಾದಲ್ಲಿ ಅಕ್ವೇರಿಯಂ ಮೀನುಗಳಾಗಿ ಮಾರಾಟ ಮಾಡಲಾಗುತ್ತದೆ, ಆದರೆ ಬ್ರೆಜಿಲಿಯನ್ ಅಮೆಜೋನಿಯಾದ ಜನರು ಆಹಾರಕ್ಕಾಗಿ ವಯಸ್ಕ ಮೀನುಗಳನ್ನು ಹಿಡಿಯುತ್ತಾರೆ. ಅರೋವಾನಾಗಳ ಸಂಖ್ಯೆಯಲ್ಲಿ ತೀವ್ರ ಕುಸಿತವು ಬ್ರೆಜಿಲಿಯನ್ ಅಧಿಕಾರಿಗಳು ಸೆಪ್ಟೆಂಬರ್ ೧ ಮತ್ತು ನವೆಂಬರ್ ೧೫ ರ ನಡುವೆ ಮೀನುಗಾರಿಕೆಯನ್ನು ನಿಷೇಧಿಸಲು ಕಾರಣವಾಯಿತು; ಕೊಲಂಬಿಯನ್ನರು ನವೆಂಬರ್ ೧ ಮತ್ತು ಮಾರ್ಚ್ ೧೫ ರ ನಡುವೆ ಈ ಮೀನುಗಳನ್ನು ಹಿಡಿಯುವುದನ್ನು ನಿಷೇಧಿಸುತ್ತಾರೆ.

ಸಿಲ್ವರ್ ಅರೋವಾನಾವನ್ನು ಅನುಭವಿ ಅಕ್ವಾರಿಸ್ಟ್‌ಗಳು ಸಾಕುಪ್ರಾಣಿಯಾಗಿ ಇರಿಸುತ್ತಾರೆ, ಇದನ್ನು ಏಷ್ಯನ್ ಅರೋವಾನಾಗೆ ಪ್ರವೇಶಿಸಬಹುದಾದ ಪರ್ಯಾಯವೆಂದು ಪರಿಗಣಿಸಲಾಗುತ್ತದೆ, ಇದನ್ನು ಸೈಟ್ಸ್ ಅನುಬಂಧ ಐನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಆದ್ದರಿಂದ ಕಾನೂನುಬದ್ಧವಾಗಿ ಪಡೆಯುವುದು ಕಷ್ಟ ಮತ್ತು ದುಬಾರಿಯಾಗಿದೆ.

ಇದನ್ನು ನೋಡಿ ಬದಲಾಯಿಸಿ

  1. ಸಿಹಿನೀರಿನ ಮೀನು ಜಾತಿಗಳ ಪಟ್ಟಿ
  2. ಏಷ್ಯನ್ ಅರೋವಾನಾ


ಉಲ್ಲೇಖಗಳು ಬದಲಾಯಿಸಿ

  1. https://www.practicalfishkeeping.co.uk/features/articles/predators-south-american-arowana
  2. "ಆರ್ಕೈವ್ ನಕಲು". Archived from the original on 2022-07-23. Retrieved 2022-07-23.
  3. https://link.springer.com/article/10.1023/A:1007699130333
  4. https://nas.er.usgs.gov/queries/factsheet.aspx?SpeciesID=799
  5. https://www.bookbrahma.com/book/desha-videshagala-svarasyakara-janapada-kathegalu
  6. "ಆರ್ಕೈವ್ ನಕಲು". Archived from the original on 2022-06-15. Retrieved 2022-07-23.