ಸಿಲ್ಕ್ ಸ್ಮಿತಾ
ಸಿಲ್ಕ್ ಸ್ಮಿತಾ (2 ಡಿಸೆಂಬರ್ 1960 – 23 ಸೆಪ್ಟೆಂಬರ್ 1996) ದಕ್ಷಿಣ ಭಾರತದ ಚಲನಚಿತ್ರ ನಟಿ.
ಸ್ಮಿತಾ ಉತ್ತಮ ನಡತೆಯುಳ್ಳ ಪಾತ್ರಗಳಲ್ಲಿ ಅಭಿನಯಿಸಿದರಾದರೂ, ಅವರು ಸಾಫ್ಟ್‌ಕೋರ್ ಚಿತ್ರಗಳಲ್ಲಿನ ಮನಮೋಹಕ ಪಾತ್ರಗಳಿಗೆ ಜನಪ್ರಿಯರಾದರು
ಸಿಲ್ಕ್ ಸ್ಮಿತಾ | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ವಿಜಯಲಕ್ಷ್ಮಿ ೨ ಡಿಸೆಂಬರ್ ೧೯೬೦ ಎಲೂರು, ಪಶ್ಚಿಮ ಗೋದಾವರಿ Dist., ಆಂಧ್ರ ಪ್ರದೇಶ, ಭಾರತ |
ನಿಧನ | September 23, 1996 ಚೆನ್ನೈ, ತಮಿಳು ನಾಡು, ಭಾರತ | (aged 35)
ಜೀವನಚರಿತ್ರೆ
ಬದಲಾಯಿಸಿವಿಜಯಲಕ್ಷ್ಮಿ ಎಂಬ ಹೆಸರಿನ ಇವರು ಆಂಧ್ರ ಪ್ರದೇಶದ ಎಲೂರು ಪ್ರದೇಶದಲ್ಲಿ ಒಂದು ಬಡ ಕುಟಿಂಬದಲ್ಲಿ ಜನಿಸಿದರು,
ನಾಲ್ಕನೇ ತರಗತಿಗೆ ತನ್ನ ವಿದ್ಯಾಬ್ಯಾಸವನ್ನು ನಿಲ್ಲಿಸಿ ಚಲನಚಿತ್ರ ತಾರೆಯಾಗಲು ನಿರ್ಧರಿಸಿದರು. ಆಕೆಯ ಚಿಕ್ಕಮ್ಮನ ಜೊತೆಯಲ್ಲಿ ಮದ್ರಾಸ್‌ಗೆ ತೆರಳಿದರು (ಆಗಿನ ದಕ್ಷಿಣ ಭಾರತದ ಚಲನಚಿತ್ರ)[೧], ತಕ್ಷಣವೇ ಆಕೆಗೆ ಒಬ್ಬ ಪ್ರಾಯೋಜಕರು ದೊರೆತು ಸ್ಮಿತಾ ಎಂಬ ಹೆಸರನ್ನು ಸೂಚಿಸಿದರು.[೨] ಆಕೆಯ ಮೊದಲ ಪ್ರಮುಖ ತಮಿಳು ಚಿತ್ರ 1979ರ ವಂದಿ ಚಕ್ರಂ (The Wheel )ನಿಂದ ಹೆಚ್ಚು ಗುರುತಿಸಲ್ಪಟ್ಟ ನಂತರ ಆ ಚಿತ್ರದಲ್ಲಿನ ಪಾತ್ರದ ಹೆಸರಾದ "ಸಿಲ್ಕ್" ಎಂಬ ಹೆಸರನ್ನು ಪಡೆದಳು..[೩]
ವೃತ್ತಿಜೀವನ
ಬದಲಾಯಿಸಿಸಿಲ್ಕ್ ಸ್ಮಿತಾ ಸುಮಾರು 200 ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ಕೆಲವೇ ಹಿಂದಿ ಚಲನಚಿತ್ರಗಳಲ್ಲಿ ತಾರೆಯಾಗಿ ಮೆರೆದಳು. ಆಕೆಯ ಕುಣಿತದ ಸಂಖ್ಯೆಗಳು ಮತ್ತು ಆಕೆಯ ಮೂಂಡ್ರು ಮುಗಮ್ ನಂತಹ ಚಿತ್ರಗಳಲ್ಲಿನ ದಿಟ್ಟ ಅಭಿನಯದಿಂದಾಗಿ ತಮಿಳು, ಕನ್ನಡ,ಮಲಯಾಳಂ ಮತ್ತು ತೆಲುಗು ಚಿತ್ರರಂಗದ ಕಾಮೋತ್ತೇಜಕ ಪಾತ್ರಗಳ ಸಂಕೇತವಾದಳು. ಆಕೆಯ ಐಟಮ್ ಪಾತ್ರದ ಅಭಿನಯದ ಅಮರಾನ್ ನಂತಹ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅದ್ದೂರಿ ಪ್ರದರ್ಶನ ಕಂಡವು. ಕೆಲ ಚಿತ್ರ ವಿಮರ್ಶಕರು, ಇತಿಹಾಸಕಾರರು ಮತ್ತು ಪತ್ರಕರ್ತರು ಆಕೆಯನ್ನು "ನಯವಾದ ಅಶ್ಲೀಲ ನಟಿ ಎಂದು ಬಣ್ಣಿಸಿದ್ದಾರೆ.[೪] . ಆಕೆಯ ಬಹಳಷ್ಟು ಚಿತ್ರಗಳು ಅಶ್ಲೀಲತೆಯನ್ನು ಹೊಂದಿದ್ದವು ಮತ್ತು ಒಂದು ಸಾಮಾನ್ಯ ಪ್ರಸಂಗವೆಂದರೆ ಆಕೆ ಅತ್ಯಲ್ಪ ಬಟ್ಟೆ ಹೊಂದಿರುವ ಬಿಕಿನಿಗಳನ್ನು ಧರಿಸಿ ಮನಸ್ಸಿಗೆ ಬಂದಂತೆ ವಿಚಿತ್ರವಾಗಿ ವರ್ತಿಸುತ್ತಾ ಪುಂಡಾಟಿಕೆ ಮಾಡುವುದಾಗಿತ್ತು. ವಿರಳವಾದ ಅಶ್ಲೀಲವಲ್ಲದ ಚಿತ್ರವಾದ ಸೀತಾಕೊಕ ಚಿಲಕ (1981)ದಲ್ಲಿ ಗಂಡನಿಂದ ದ್ರೋಹಕ್ಕೊಳಗಾದ ಹೆಂಡತಿಯ ಪಾತ್ರದಲ್ಲಿಯೂ ಸಹ ಆಕೆ ವಿಮರ್ಶಕರನ್ನು ಹಾಗೂ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದರು.[೫]
ಆಕೆಯ ಚಿತ್ರಗಳಲ್ಲೊಂದಾದ, ಲಯನಮ್ , ಚಿತ್ರವು ಇಂಡಿಯಾದ ವಯಸ್ಕರ ಚಲನಚಿತ್ರರಂಗದಲ್ಲಿ ಬಹಳಷ್ಟು ಯೋಗ್ಯವೆನಿಸಿ ಹೆಸರುಗಳಿಸಿತು, ಹಾಗೂ ಅದು ರೇಷ್ಮಾ ಕಿ ಜವಾನಿ ಎಂಬ ಹೆಸರಿನಿಂದ ಹಿಂದಿಯಲ್ಲಿ ಪುನರ್ನಿಮಿತವಾಯಿತು.[೬] ಆಕೆಯ ಅತ್ಯಂತ ಹೆಚ್ಚು ಗೌರವಾನ್ವಿತ ಮನೋಜ್ಞ ಅಭಿನಯದ ಮೂಂದ್ರಮ್ ಪಿರಾಯ್ , ಚಲನಚಿತ್ರವು ಸದ್ಮಾ ಎಂಬ ಹೆಸರಿನಲ್ಲಿ ಪುನರ್ನಿಮಿತವಾಯಿತು.[೭]
ಮರಣ
ಬದಲಾಯಿಸಿ1996ರಲ್ಲಿ , ಸ್ಮಿತಾ ಚೆನ್ನೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಶವವಾಗಿ ದೊರೆತರು.
ಅದರ ಹಿಂದಿನ ವರ್ಷದಲ್ಲಿ ಅವರ ವೃತ್ತಿಜೀವನವನ್ನು ಬದಲಾಯಿಸಿ ಚಲನಚಿತ್ರ ನಿರ್ಮಾಪಕಿಯಾಗಬೇಕೆಂದು ಪ್ರಯತ್ನಿಸಿದ್ದರು. ಹಣಕಾಸಿನ ತೊಂದರೆ, ಪ್ರೇಮದಲ್ಲಿನ ಆಶಾಭಂಗ ಮತ್ತು ಮದ್ಯಪಾನಕ್ಕೆ ಅಧೀನತೆ ಇವೆಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಯಿತು.[೧][೮] ಸ್ಮಿತಾ ಸಾವು ಆತ್ಮಹತ್ಯೆಯೆಂಬ ಸಂಶಯವುಂಟಾಯಿತು[೮]
ಆಯ್ದ ಚಲನಚಿತ್ರಗಳ ಪಟ್ಟಿ
ಬದಲಾಯಿಸಿ- ಯಮಕಿಂಕರುಡು (1982)
- ಮೂಂಡ್ರು ಮುಗಂ (1983)
- ಖೈದಿ (1983)
- ಚಾಲೆಂಜ್ (1984)
- ಲಯನಮ್ (1989)
- ಹಳ್ಳಿ ಮೇಷ್ಟ್ರು (1992)
- ಸ್ಪಡಿಕಮ್ (1995)
- ಅಧರ್ವಮ್ (1989)
ಅಡಿಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ "Obituary". The Independent cited in BNET. 1996-09-26. Archived from the original on 2015-09-24. Retrieved 2006-11-09.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ "Chronicle of a death foretold". Rediff India Abroad. 1997-04-04. Retrieved 2009-01-02.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ "Some reel-life role models". Deccan Herald. 2006-10-26. Retrieved 2006-11-09.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ "Magic workers". The Hindu. 2005-03-06. Archived from the original on 2011-06-29. Retrieved 2006-11-09.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ ಸೀತಾಕೊಕ ಚಿಲುಕ, Project Ghantsala, Retrieved: 2009-01-24
- ↑ "Sex Sells". Screen Weekly. 2002-11-08. Archived from the original on 2007-09-30. Retrieved 2006-11-09.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ "A saga of success". The Hindu. 2006-09-06. Archived from the original on 2007-10-21. Retrieved 2006-11-09.
{{cite news}}
: Unknown parameter|First Name=
ignored (help); Unknown parameter|Last Name=
ignored (help) - ↑ ೮.೦ ೮.೧ Vasudev, Shefalee (2002-12-23). "Young Affluent and Depressed". India Today. Archived from the original on 2008-12-26. Retrieved 2009-01-02.
{{cite news}}
: Italic or bold markup not allowed in:|publisher=
(help)
ಆಕರಗಳು
ಬದಲಾಯಿಸಿ- ಆಶಿಶ್ ರಾಜಾಧ್ಯಕ್ಷ, Encyclopedia of Indian Cinema ,ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರೆಸ್, 1994 (ISBN 0-85170-669-X)
- ರೂಪಾ ಸ್ವಾಮಿನಾಥನ್, Star Dust: Vignettes from the Fringes of the Film Industry , Penguin, 2004 (ISBN 0-14-303243-7)
- ಸುಪರ್ಣಾ ಭಾಸ್ಕರನ್, Made in India: Decolonizations, Queer Sexualities, Trans/National Projects , Palgrave Macmillan, 2004 (ISBN 1-4039-6726-1)