ಸಿಮಿ ಗೆರೆವಾಲ್,' ದೂರದರ್ಶನದ ಕಾಲದಿಂದಲೂ 'ಶೋಬಿಜಿನೆಸ್' ನಲ್ಲಿ ಉಳಿದುಕೊಂಡಿರುವ, ಹಾಗೂ 'ಸದಾ ಬಿಳಿ ಡ್ರೆಸ್' ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ 'ಶೋಗರ್ಲ್'. ಇಂದಿಗೂ ಹರೆಯದ ಹುಡುಗಿಯ ತರಹ ,ನೀಟಾಗಿ ಡ್ರೆಸ್ ಮಾಡಿಕೊಂಡು ಮೀಡಿಯಾದಲ್ಲಿ ಮಿಂಚುವಾಕೆ. ಆಕೆ ನಡೆಸುತ್ತಿದ್ದ ಬಹುಜನಪ್ರಿಯ ಟೆಲಿವಿಶನ್ ಶೋ, ಇಂಡಿಯಾಸ್ ಮೋಸ್ಟ್ ಡಿಸೈರಬಲ್ ಇದೀಗ ಮುಕ್ತಾಯಗೊಂಡಿದೆ. ನಟನೆಯ ಅವಕಾಶಗಳು ಕಡಿಮೆಯಾದಂತೆ, 'ಚಿತ್ರ ನಿರ್ಮಾಪಕಿ' ಹಾಗೂ 'ನಿರ್ದೇಶಕಿ'ಯಾಗಿ ಕೆಲಸಮಾಡಿದರು. ದೂರದರ್ಶನಕ್ಕೆ, ಇಟ್ಸ್ ಎ ವುಮನ್ಸ್ ವರ್ಲ್ಡ್ ಎಂಬ ಚಿತ್ರ ಮಾಡಿಕೊಟ್ಟರು. ರಾಜ್ ಕಪೂರ್ ಹಾಗೂ ರಾಜೀವ್ ಗಾಂಧಿಯವರ ಬಗ್ಗೆ 'ವೃತ್ತಚಿತ್ರ' (Documentary) ತಯಾರಿಸಿದರು.

ಸಿಮಿ ಗೆರೆವಾಲ್
Garewal in Jan 2012
Born
Simrita Garewal

(೧೯೪೭-೧೦-೧೭)೧೭ ಅಕ್ಟೋಬರ್ ೧೯೪೭
Occupation(s)Film actor, Producer, director, Chat show Hostess
Years active1962 – present

ಸಿಮಿ ಗೆರೆವಾಲರ ಪರಿವಾರ ಬದಲಾಯಿಸಿ

ಸೇನೆಯ ಬ್ರಿಗೆಡಿಯರ್ ಮಗಳಾಗಿ ಇಂಗ್ಲೆಂಡಿನಲ್ಲಿ ಬಾಲ್ಯವನ್ನು ಕಳೆದ ಸಿಮಿ, ೧೫ ರ ಹರೆಯದಲ್ಲೇ ಬಾಲಿವುಡ್ ನಟ ಫಿರೋಝ್ ಖಾನ್ ರ ಜೊತೆ ನಟನೆಗೆ ಪ್ರಾರಂಭಿಸಿದಳು. ಆಕೆ ಅಬಿನಯಿಸಿದ ಮೊದಲ ಚಿತ್ರ, ಟಾರ್ಝನ್ ಗೋಸ್ ಟು ಇಂಡಿಯ, ನಟನೆಯನ್ನು ಹೆಚ್ಚು ಕಲಿಯದ ಸಿಮಿ, ಇಂಗ್ಲೀಷ್ ಭಾಷೆಯಲ್ಲಿ ಚೆನ್ನಾಗಿ ಮಾತಾಡಬಲ್ಲವಳೆಂದು ಪಾತ್ರಗಳು ದೊರೆತಿತ್ತು. ರಾಜ್ ಕಪೂರ್ ನ ಚಿತ್ರ ಮೇರಾ ನಾಮ್ ಜೋಕರ್, ಸತ್ಯಜಿತ್ ರೇ ರವರ ’ಅರಣ್ಯರ್ ದಿನ್ ರಾತ್ರಿ, ಮೃಣಾಲ್ ಸೇನ್ ರವರ, ಪದಾತಿಕ್, ಹೀಗೆ ಖ್ಯಾತನಾಮರ ಚಿತ್ರಗಳಲ್ಲಿ ನಟಿಸಿ ಹೆಸರುಮಾಡಿದರು. ಶಶಿಕಪೂರ್ ಜೊತೆ ಸಿದ್ಧಾರ್ಥ್ ಚಿತ್ರದಲ್ಲಿ ಅರೆ ನಗ್ನಳಾಗಿ ನಟಿಸಿದ 'ಸಿಮಿಗೆರೆವಾಲ್,' ಅನೇಕ ವಿವಾದಗಳಿಗೆ ಗ್ರಾಸವಾಗಿದ್ದಳು. ಭಾರತದಲ್ಲಿ ಆ ಚಿತ್ರ ಬಿಡುಗಡೆಗೂ ತಡೆಯಾಯಿತು.

ವೈವಾಹಿಕ ಜೀವನ ಬದಲಾಯಿಸಿ

'ಮುಂಬಯಿ ನ ಜುಹು ವಲಯ'ದ ಐಶಾರಾಮಿ ಫ್ಲಾಟ್ ನಲ್ಲಿ ವಾಸಿಸುವ 'ಸಿಮಿ ಗೆರೆವಾಲ್' ಸ್ವಚ್ಛಂದ ಪ್ರವೃತ್ತಿಯ ಸ್ವತಂತ್ರ್ಯ ವ್ಯಕ್ತಿತ್ವದ ಹೆಣ್ಣು. ಅವರ ಎರಡು ವಿವಾಹಗಳೂ ಮುರಿದುಬಿದ್ದವು. ಹಲವು ವರ್ಷಗಳಿಂದ ನಡೆಸುತ್ತಿದ್ದ ರ್ಯಾಂಡೆಸ್ ವಸ್ ವಿತ್ ಸಿಮಿ ಗೆರೆವಾಲ್ 'ಟೆಲೆವಿಶನ್ ಶೋ' ಅತ್ಯಂತ ಜನಪ್ರಿಯವಾಗಿತ್ತು. ಆಕೆ ಕೇಳುತ್ತಿದ್ದ ವೈಯಕ್ತಿಕ ಹಾಗೂ ಡಿಗ್ನಿಫೈಡ್ ಪ್ರಶ್ನೆಗಳಿಗೆ ಎಲ್ಲರೂ ಬೆರಗಾಗಿ ಉತ್ತರ ನೀಡುತ್ತಿದ್ದರು.