ಸಿದ್ದಪ್ಪ ತೋಟದಪ್ಪ ಕಂಬಳಿ ೧೮೮೨ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು.ಮುಂಬಯಿ ಪ್ರಾಂತ್ಯದಲ್ಲಿ ಧಾರವಾಡ ಉತ್ತರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ, ಪ್ರಾಂತ್ಯದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ದೊಡ್ಡಮೇಟಿ ಅಂದಾನಪ್ಪ, ಗಿರಿಮಲ್ಲಪ್ಪ ನಲ್ವಾಡಿ, ವಿಶ್ವನಾಥ ರಾವ್ ಜೋಗ್, ಶ್ರೀಪಾದ ಕರಿಗುದ್ರಿ ಮತ್ತು ತಿಮ್ಮಪ್ಪ ನೇಸ್ವಿ ಯವರ ಜೊತೆ ಧಾರವಾಡ ಪ್ರಾಂತ್ಯದ ಶಾಸಕರಾಗಿದ್ದರು. ಬೆಳಗಾವಿ,ಬಿಜಾಪುರ, ಕೆನರಾ ಮತ್ತು ಧಾರವಾಡ ಪ್ರಾಂತ್ಯಗಳನ್ನು ಮುಂಬಯಿ ಪ್ರಾಂತ್ಯದಿಂದ ಕನ್ನಡ ಭಾಷಿಕರ ರಾಜ್ಯವೊಂದಕ್ಕೆ ಸೇರಿಸಲು ಹಾತೊರೆಯುತ್ತಿದ್ದ ಕಂಬಳಿಯವರು, ಈ ಕಾರಣದಿಂದ ಕರ್ನಾಟಕ ಎಂಬ ರಾಜ್ಯವನ್ನು ಸ್ಥಾಪಿಸಲು ಬ್ರಿಟಿಷ್ ಸರ್ಕಾರಕ್ಕೆ ಮನವಿಯಿತ್ತರು. .[] ಆದರೆ, ಮೈಸೂರು ಪ್ರಾಂತ್ಯದಿಂದ ಮುಕ್ತ ಪ್ರತಿಕ್ರಿಯೆ ಬರಲಿಲ್ಲ. ಆದರೂ, ಕರ್ನಾಟಕ ಎಂಬ ಪದವನ್ನು ಸಾಧ್ಯವಾದಷ್ಟೂ ಬಳಸಲು ಮುಂದಾದರು. ಮುಂಬಯಿ ಸರ್ಕಾರದಲ್ಲಿ ಸಚಿವರಾಗಿದ್ದ ಕಂಬಳಿಯವರ ಸೇವೆಗೆ ಬ್ರಿಟಿಷ್ ಸರ್ಕಾರ ಸರ್ ಪದವಿಯಿತ್ತು ಗೌರವಿಸಿತು. ಭಾಷಾವಾರು ಪ್ರಾಂತ್ಯದ ರಚನೆಗಾಗಿ ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ಹೇರುತ್ತಾ ಬಂದ ಸರ್ ಕಂಬಳಿಯವರು, ಈ ಕಾರಣಕ್ಕಾಗಿ ಹಲವರ ಕೆಂಗಣ್ಣಿಗೆ ಗುರಿಯಾದರು. ೧೯೪೯ರಲ್ಲಿ ಪ್ರಸಕ್ತ ಪಾವಟೆನಗರದಲ್ಲಿರುವ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಪರೋಕ್ಷವಾಗಿ ಕಾರಣರಾದರು. ಸ್ವತಂತ್ರ ದೊರೆತ ಮೇಲೆ ನೆಹರೂ ಸರ್ಕಾರದ ಯೋಜನೆಗಳನ್ನು ವಿರೋಧಿಸಿ ಜೀವತ್‌ರಾಮ್_ಕೃಪಲಾನಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪ್ರಫ಼ುಲ್ಲ ಚಂದ್ರ ಘೋಷ್, ಮದ್ರಾಸ್ ಮುಖ್ಯಮಂತ್ರಿ ಟಂಗಟೂರಿ ಪ್ರಕಾಶಂರೊಡಗೂಡಿ ಕಿಸಾನ್ ಮಜ್ದೂರ್ ಪ್ರಜಾ ಪಕ್ಷ ಸ್ಥಾಪಿಸಿದರು. ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಧಾರವಾಡದ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತು. ಇದು ಕಂಬಳಿಯವರಿಗೆ ಹಿನ್ನಡೆಯಾಯಿತು. ೧೯೫೨ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯು ಪ್ರಜಾ ಸೋಷಲಿಸ್ಟ್ ಪಕ್ಷದೊಂದಿಗೆ ವಿಲೀನವಾಯಿತು.

ಸರ್ ಸಿದ್ದಪ್ಪ ಕಂಬಳಿ
Born೧೧-೦೯-೧೮೮೨
ಹುಬ್ಬಳ್ಳಿ
Occupation(s)ಶಿಕ್ಷಣ, ಆಡಳಿತ, ರಾಜಕೀಯ,
ಹುಬ್ಬಳ್ಳಿ-ಧಾರವಾಢ ಮಹಾನಗರಪಾಲಿಕೆಯ ಬಳಿ, ಸರ್ ಸಿದ್ದಪ್ಪ ಕಂಬಳಿಯವರ ಕಂಚಿನ ಪ್ರತಿಮೆ
ಹುಬ್ಬಳ್ಳಿ-ಧಾರವಾಢ ಮಹಾನಗರಪಾಲಿಕೆಯ ಬಳಿ, ಸರ್ ಸಿದ್ದಪ್ಪ ಕಂಬಳಿಯವರ ಕಂಚಿನ ಪ್ರತಿಮೆಯ ಕೆಳಗೆ ಅವರ ಬದುಕು-ಸಾಧನೆ
  • ಕೃಷಿ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೦-೧೯೩೪)[]
  • ಶಿಕ್ಷಣ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೨-೧೯೩೭)

ಕೃಷಿ, ಶಿಕ್ಷಣ ಮತ್ತು ಅಬ್ಕಾರಿ ಖಾತೆ ಸಚಿವ, ಮುಂಬಯಿ ಸರ್ಕಾರ (೧೯೩೨-೧೯೩೭)[]

ಉಲ್ಲೇಖಗಳು‌‌

ಬದಲಾಯಿಸಿ
  1. The Indian Year Book. Bennett, Coleman & Company.
  2. "ಆರ್ಕೈವ್ ನಕಲು". Archived from the original on 2015-06-13. Retrieved 2014-09-11.
  3. "ಆರ್ಕೈವ್ ನಕಲು". Archived from the original on 2013-12-07. Retrieved 2014-09-11.