ಸಿಡ್ನಿ ಶೆಲ್ಡ್‌ನ್

ಸಿಡ್ನಿ ಶೆಲ್ಡನ್ (ಫೆಬ್ರವರಿ ೧೧, ೧೯೧೭-ಜನವರಿ ೩೦, ೨೦೦೭) ರವರು ಒಬ್ಬ ಅಮೇರಿಕದ ಲೇಖಕ. ಇವರು ಅತ್ಯಂತ ಜನಪ್ರಿಯಗೊಂಡದ್ದು ಅವರು ತಮ್ಮ ಐವತ್ತರ ನಂತರ ಬರೆದ ಕಾದಂಬರಿಗಳಿಂದ. ಅದರಲ್ಲಿ ಕೆಲವು "ಮಾಸ್ಟರ್ ಆಫ್ ದಿ ಗೇಮ್"(೧೯೮೨) "ದಿ ಅದರ್ ಸೈಡ್ ಆಫ್ ಮಿಡ್ನೈಟ್"(೧೯೭೩) ಮತ್ತು "ರೇಜ್ ಆಫ್ ಎಂಜಲ್ಸ್"(೧೯೮೦)

ಸಿಡ್ನಿ ಶೆಲ್ಡನ್
ಜನನಸಿಡ್ನಿ ಶೆಚ್ಚ್‌ಟೆಲ್
(೧೯೧೭-೦೨-೧೧)೧೧ ಫೆಬ್ರವರಿ ೧೯೧೭
ಮರಣJanuary 30, 2007(2007-01-30) (aged 89)
ರಂಚೋ ಮಿರಗೆ, ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್
ವೃತ್ತಿಕಾದಂಬರಿಕಾರ
ರಾಷ್ಟ್ರೀಯತೆಆಂಗ್ಲರು
ಕಾಲ೧೯೬೯-೨೦೦೭
ಪ್ರಕಾರ/ಶೈಲಿಕ್ರೈಂ ಫಿಕ್‍ಷನ್,
ತ್ರಿಲ್ಲರ್
ಬಾಳ ಸಂಗಾತಿಜೇನ್ ಕೌಫ್‍ಮನ್ ಹಾರ್‍ಡಿಂಗ್ (೧೯೪೫-೧೯೪೮; ವಿಚ್ಚೇಧನ)
ಜೊರ್‍ಜಾ ಕರ್‍ಟ್‍ನೈಟ್ (೧೯೫೧-೧೯೫೮; ಅವಳ ಮೃತ್ಯು; ೧ ಮಗು)
ಅಲೆಕ್ಸಾಂಡರ್ ಜಾಯ್ಸ್ ಕೊಸ್ತೋಫ್ಫ್, (೧೯೮೯-೨೦೦೭; ಅವನ ಮೃತ್ಯು)

ಆರಂಭಿಕ ಜೀವನ

ಬದಲಾಯಿಸಿ

ಶೆಲ್ಡ್‌ನ್ ಹುಟ್ಟಿದ್ದು ಸಿಡ್ನಿ ಸ್ಚೆಚ್ತೆಲ್ ನ ಚಿಕಾಗೋನ ಇಲಿನಾಯ್ಸ್ನಲ್ಲಿ. ಇವರ ತಂದೆ ತಾಯಿ ರಷ್ಯಾದ ಯಹೂದಿ ಸಂತತಿಯವರಾಗಿದ್ದರು. ಇವರ ತಂದೆ ಓಟೋ ಸ್ಚೆಚ್ತೆಲ್(೧೮೯೪-೧೯೭೬) ಹಾಗೂ ತಾಯಿ ನಟಾಲಿಯಾ ಮಾರ್ಕಸ್. ಇವರು ತಮ್ಮ ಹತ್ತನೇ ವಯಸ್ಸಿನಲ್ಲಿ ತಮ್ಮ ಕವನ ಸಂಕಲನವನ್ನು ಪ್ರಕಟಿಸಿದರು. ಖಿನ್ನತೆಯ ಸಂದರ್ಭದಲ್ಲಿ ಇವರು ವಿಧವಿಧವಾದ ಕೆಲಸಗಳನ್ನು ಕೈಗೊಂಡರು. ಈಸ್ಟ್ ಹೈ ಸ್ಕೂಲ್ನಲ್ಲಿ ಪದವಿ ಪಡೆದ ನಂತರ ನೋರ್ಥ್ವೆಸ್ತೆರ್ನ್ ಯೂನಿವರ್ಸಿಟಿಯಲ್ಲಿ ಸಣ್ಣ ನಾಡಕಗಳನ್ನು ಕೊಡುಗೆಯಾಗಿ ನೀಡಿದರು.

ವೃತ್ತಿ

ಬದಲಾಯಿಸಿ

೧೯೩೭ರಲ್ಲಿ ಶಲ್ಡ್‌ನ್ನವರು ಹೋಲಿವುಡ್ ಕ್ಯಾಲಿಫೋನಿಯಾ ಹೀಗೆ ವಿಧ ವಿಧವಾದ ಜಾಗಗಳಿಗೆ ತೆರಳಿದರು ಇವರು ಅಲ್ಲಿ ಹಲವಾರು ವಿಮರ್ಶಾತ್ಮಕ ಕೃತಿಗಳನ್ನು ಪರಿಶೀಲಿಸಿದರು. ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಇವರು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೇನೆಯನ್ನು ಸೇರಿದರು. ಅಲ್ಲಿ ಯುಧ್ಧ ಸೇವೆ ತರಬೇತುಯಲ್ಲಿ ವಿಮಾನ ಚಾಲಕರಾಗಿ ಸೇವೆ ಸಲ್ಲಿಸಿದರು. ಆದರೆ ಕೆಲವು ಕಾಲದ ನಂತರ ಇವರ ಘಟಕವನ್ನು ವಿರ್ಸಜಿಸಲಾಯಿತು.ಅಲ್ಲಿಂದ ಅವರು ತಮ್ಮ ಮಾಮೂಲಿನ ಜೀವನಕ್ಕೆ ಹಿಂದಿರುಗಿದಾದ ಅವರು ನ್ಯೂಯಾರ್ಹಗೆ ಬಂದರು.ಇಲ್ಲಿಂದ ಅವರ ಸಿನಿಮಾ ಜಗತ್ತಿನ ವೃತ್ತಿಆರಂಭವಾಯಿತು.

ವಯಕ್ತಿಕ ಜೀವನ

ಬದಲಾಯಿಸಿ

ಶೆಲ್ಡನ್ ರವರ ಮೊದಲ ಮದುವೆ ಜೇನ್ ಕಾಫ್ಮನ್ ಹಾರ್ಡಿಂಗ್ (೧೯೪೫ - ೧೯೪೮)ಅವರೊಂದಿಗೆ ನಡೆದಿತ್ತು.

ಕಾದಂಬರಿಗಳು

ಬದಲಾಯಿಸಿ
  • ದ ನೇಕೆಡ್ ಫೇಸ್
  • ದಿ ಅದರ್ ಸೈಡ್ ಆಫ್ ಮಿಡ್ನೈಟ್
  • ದಿ ಸ್ಟ್ರೇಂಜರ್ ಇನ್ ದ ಮಿರರ್
  • ಬ್ಲಡ್ ಲೈನ್
  • ರೇಜ್ ಆಫ್ ಏಂಜಲ್ಸ್
  • ಮಾಸ್ಟರ್ ಆಫ್ ದ ಗೇಮ್
  • ಇಫ್ ಟುಮಾರೋ ಕಮ್ಸ್
  • ವಿಂಡ್ ಮಿಲ್ಸ್ ಆಫ್ ದ ಗಾಡ್ಸ್
  • ದ ಸಾಂಡ್ಸ್ ಆಫ್ ಟೈಂ
  • ಮೆಮರೀಸ್ ಆಫ್ ಮಿಡ್ನೈಟ್
  • ದ ಡೂಮ್ಸ್ ಡೇ ಕೊನ್ಸ್ಪಿರಸಿ