ಸಿಗರೇಟ್ ಧೂಮಪಾನಕ್ಕಾಗಿ ತೆಳುವಾದ ಕಾಗದದಲ್ಲಿ ಸುತ್ತಲಾದ ಮನಃಪ್ರಭಾವಕ ವಸ್ತುವನ್ನು, ಸಾಮಾನ್ಯವಾಗಿ ತಂಬಾಕನ್ನು ಹೊಂದಿರುವ ಕಿರಿದಾದ ಉರುಳೆ. ಬಹುತೇಕ ಸಿಗರೇಟ್‍ಗಳು ಶೀಟ್ ಎಂದು ಕರೆಯಲ್ಪಡುವ "ಪುನಾರಚಿಸಿದ ತಂಬಾಕು" ಉತ್ಪನ್ನವನ್ನು ಹೊಂದಿರುತ್ತವೆ. ಇದು ಮರುಬಳಕೆಯ [ತಂಬಾಕು] ಕಾಂಡಗಳು, ವೃಂತಗಳು, ತುಣುಕುಗಳು, ಸಂಗ್ರಹಿಸಿದ ಧೂಳು, ಮತ್ತು ನೆಲದಿಂದ ಗುಡಿಸಿದ ವಸ್ತುಗಳನ್ನು ಹೊಂದಿರುತ್ತದೆ. ಇದಕ್ಕೆ ಅಂಟು, ರಾಸಾಯನಿಕಗಳು ಮತ್ತು ಭರ್ತಿಸಾಮಗ್ರಿಗಳನ್ನು ಸೇರಿಸಲಾಗುತ್ತದೆ; ಈ ಉತ್ಪನ್ನಕ್ಕೆ ನಂತರ ತಂಬಾಕು ತುಣುಕುಗಳಿಂದ ಪಡೆಯಲಾದ ನಿಕೋಟಿನ್ ಅನ್ನು ಸಿಂಪಡಿಸಿ ಸುರುಳಿ ಆಕಾರವನ್ನು ನೀಡಲಾಗುತ್ತದೆ.[೧] ಸಿಗರೇಟ್‍ನ ಒಂದು ತುದಿಗೆ ಬೆಂಕಿ ಹಚ್ಚಿದಾಗ ಅದು ಕನಲುತ್ತದೆ ಮತ್ತು ಬಾಯಿಯೊಳಗೆ ಹಿಡಿದಿಡಲಾದ ಅಥವಾ ಬಾಯಿಗೆ ಸ್ಪರ್ಶಿಸಿದ ಇನ್ನೊಂದು ತುದಿಯಿಂದ ಹೊಗೆಯನ್ನು ಉಚ್ಛ್ವಾಸ ಮಾಡಲು ಅವಕಾಶ ಮಾಡಿಕೊಡುತ್ತದೆ.

ಹೊತ್ತಿಸದ, ಶೋಧಿಸಿದ ಸಿಗರೇಟ್

ಉಲ್ಲೇಖಗಳುಸಂಪಾದಿಸಿ

  1. Rabinoff, Michael; Caskey, Nicholas; Rissling, Anthony; Park, Candice (November 2007). "Pharmacological and Chemical Effects of Cigarette Additives". American Journal of Public Health. 97 (11): 1981–1991. doi:10.2105/AJPH.2005.078014. PMC 2040350. PMID 17666709.
"https://kn.wikipedia.org/w/index.php?title=ಸಿಗರೇಟ್&oldid=915487" ಇಂದ ಪಡೆಯಲ್ಪಟ್ಟಿದೆ