ಸಿಖ್ ಧರ್ಮದ ಮೂರು ಆಧಾರಸ್ತಂಭಗಳು

ಸಿಖ್ ಧರ್ಮದ ಮೂರು ಮುಖ್ಯ ಆಧಾರ ಸ್ತಂಭಗಳನ್ನು ಧರ್ಮಗುರು ಸಂತ ಗುರು ನಾನಕ್ ದೇವ್ ಅವರು ಸೂತ್ರವಾಗಿ ನೀಡಿದ್ದಾರೆ.

ಸಿಖ್ ಧರ್ಮ ಗ್ರಂಥ ಗುರು ಗ್ರಂಥ ಸಾಹಿಬ್ (ಪಂಜಾಬಿ ಭಾಷೆ ಗುರುಮುಖಿ ಲಿಪಿಯಲ್ಲಿದೆ)

ಪಂಜಾಬಿ:ನಾಮ್ ಜಪೋ, ಪಂಜಾಬಿ ಗುರುಮುಖಿ: ਨਾਮ ਜਪੋ

  • ದೇವರ ನಾಮ ಸ್ಮರಣೆಯನ್ನು ಎಂದೂ ಮರೆಯದಿರುವುದು.
  • ದೇವರ ಕೃಪೆಗಾಗಿ ನಿತ್ಯವೂ ಸಿಖ್ ಶ್ಲೋಕಗಳಾದ ನಿತ್ನಮ್ ಬನಿ(ಸಿಖ್ಖರ ದಿನ ನಿತ್ಯದ ಶ್ಲೋಕಗಳು)ಗಳನ್ನು ಪಠಿಸುವುದು.

ನಿಯತ್ತಿನ ಜೀವನ

ಬದಲಾಯಿಸಿ

ಪಂಜಾಬಿ:ಕಿರಾತ್ ಕರೋ, ಪಂಜಾಬಿ ಗುರುಮುಖಿ: ਕਿੱਰਤ ਕਰੋ

  • ನಿಯತ್ತಿನಿಂದ ಗಳಿಸುವುದು.
  • ಕಷ್ಟ ಪಟ್ಟು ದುಡಿಯುವುದು.
  • ತಮ್ಮ ಮಾನಸಿಕ ಹಾಗು ದೈಹಿಕ ಶಕ್ತಿಗಳನ್ನು ಯಥಾವತ್ತಾಗಿ ದುಡಿಸಿಕೊಂಡು ಮಾತ್ರವೇ ಸಂಪಾದಿಸುವುದು.
  • ದೇವರು ಕೊಡಮಾಡಿದ ಎಲ್ಲವನ್ನೂ ವರವೆಂದು ಪರಿಗಣಿಸಿ ಸದಾಕಾಲ ಸತ್ಯವನ್ನೇ ನುಡಿಯುತ್ತಾ ಸಭ್ಯರಾಗಿ ಬದುಕುವುದು.
  • ಉತ್ತಮ ನೈತಿಕ ಹಾಗು ಆಧ್ಯಾತ್ಮಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು.

ಹಂಚಿತಿನ್ನುವುದು

ಬದಲಾಯಿಸಿ

ಪಂಜಾಬಿ:ವಾಂದ್ ಚಕ್ಕೋ, ಪಂಜಾಬಿ ಗುರುಮುಖಿ: ਵੰਡ ਛਕੋ

  • ಆಹಾರ, ಸಂಪತ್ತು, ಧನ ಯಾವುದೇ ಆಗಲಿ ಧರ್ಮ, ಜಾತಿ, ಮತ, ಪಂಗಡಗಳ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೂ ಹಂಚಿಕೊಂಡು ಬಾಳುವುದು.
  • ಸಿಖ್ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯುವ ಯಾವುದೇ ಸಮುದಾಯದೊಂದಿಗೆ ಗುರುತಿಸಿಕೊಳ್ಳುವುದು ಹಾಗು ತಮ್ಮ ಕೈಲಾದಷ್ಟು ಆ ಸಮುದಾಯಕ್ಕೆ ನೆರವು ನೀಡುವುದು.
  • ಕೊಡುವುದರ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳುವುದು. ಕೊಡುವುದರಿಂದಲೇ ಶ್ರೇಯಸ್ಸು ಎಂಬ ಭಾವ ತಳೆಯುವುದು.

ಆಕರಗಳು

ಬದಲಾಯಿಸಿ