ಸಿಂಥನ್ ಟಾಪ್ ಪರ್ವತದ ಕಣಿವೆದಾರಿಯಾಗಿದೆ. ಇದು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬ್ರೆಂಗ್ ಕಣಿವೆ ಮತ್ತು ಚೆನಾಬ್ ಕಣಿವೆಯ ಕಿಶ್ತ್ವರ್ ಜಿಲ್ಲೆಯ ನಡುವೆ ಇದೆ.[]

ಸಿಂಥನ್ ಟಾಪ್‍ನ ನೋಟ

ಸಿಂಥನ್ ಕಣಿವೆಮಾರ್ಗವು ಅನಂತನಾಗ್‍ನ್ನು ಕಿಶ್ತ್ವರ್‌ನೊಂದಿಗೆ ಜೋಡಿಸುತ್ತದೆ. ಇದು ವರ್ಷದ ಬಹುಪಾಲು ಹಿಮದಿಂದ ಆವೃತವಾಗಿರುತ್ತದೆ. ಸಿಂಥನ್ ಟಾಪ್ ಸ್ಥಳೀಯ ಜನರನ್ನು ಹೊಂದಿಲ್ಲ. ಕೋಕರ್‌ನಾಗ್, ಡುಕ್ಸುಮ್‍ನಂತಹ ಪಕ್ಕದ ಸ್ಥಳಗಳ ಕುರುಬರು ಮತ್ತು ಪ್ರವಾಸಿಗರು ಹಾಗೂ ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರು ಡೇರೆಗಳಲ್ಲಿ ರಾತ್ರಿಯಿಡೀ ಉಳಿಯಬಹುದು.

ಪ್ರವಾಸೋದ್ಯಮ

ಬದಲಾಯಿಸಿ

ಕಣಿವೆಯ ಇತರ ಪ್ರದೇಶಗಳಂತೆ, ಸಿಂಥನ್ ಟಾಪ್ ತನ್ನ ಸೌಂದರ್ಯ ಮತ್ತು ಅದ್ಭುತ ಪ್ರವಾಸಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಚೆನಾಬ್ ಕಣಿವೆಯಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ. ಪರ್ವತಾರೋಹಣ, ಚಾರಣ ಮತ್ತು ಸ್ಕೀಯಿಂಗ್‌ಗಾಗಿ ಈ ಸ್ಥಳವು ಹೊರಹೊಮ್ಮುತ್ತಿದೆ.

'360 ಡಿಗ್ರಿ ವ್ಯೂ' ಎಂಬ ಸ್ಥಳದಲ್ಲಿ, ಕಾಶ್ಮೀರ ಮತ್ತು ಜಮ್ಮು ಎರಡೂ ವಿಭಾಗಗಳ ಪ್ರದೇಶಗಳನ್ನು ನೋಡಬಹುದು.

ಉಲ್ಲೇಖಗಳು

ಬದಲಾಯಿಸಿ