ಸಾಸಲು ಶಿವರುದ್ರಯ್ಯ ಮರುಲಯ್ಯ
ಸಾ.ಶಿ.ಮರುಳಯ್ಯ ಅವರು ವೃತ್ತಿಯಲ್ಲಿ ಶಿಕ್ಷಕರು. ಅವರು ಕವನಗಳು, ಸಣ್ಣ ಕಥೆಗಳು ನಾಟಕಗಳೊಂದಿಗೆ ಸುಮಾರು ಎಪ್ಪತ್ತೈದು ಕೃತಿಗಳನ್ನೂ ಬರೆದಿದ್ದಾರೆ. ತಮ್ಮ ಬರಹಗಳಲ್ಲಿ ಅವರು ಪ್ರಕೃತಿಯ ಪ್ರೀತಿ, ಸಮಾಜದ ಭಕ್ತಿ ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಇವರನ್ನು "ಕೃತಿ ವಿಭೂತಿ ಪುರುಷ" ರೆಂದು ಅನೇಕರು ಕರೆಯತ್ತಾರೆ.
ಜನನ, ಜೀವನ
ಬದಲಾಯಿಸಿಸಾಸಲು ಶಿವರುದ್ರಯ್ಯ ಮರುಳಯ್ಯ ೧೯೩೧ ಜನವರಿ ೨೮ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲೂಕಿನ 'ಸಾಸಲು' ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಸಾಸಲು ಗ್ರಾಮದಲ್ಲಿ. ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿಎ ಆನರ್ಸ್ ಮತ್ತು ಎಂ.ಎ. ಮಾಡಿದರು. ೧೯೭೧ ರಲ್ಲಿ ಅವರು ಧಾರವಾಡ ವಿಶ್ವವಿದ್ಯಾಲಯದಿಂದ ಪಿಎಚ್. ಡಿ ಪದವಿ ಸಿಕ್ಕಿತು. ಅವರು ವೃತ್ತಿಯಲ್ಲಿ ಶಿಕ್ಷಕರು. ಹಾಗಾಗಿ ಅನೇಕ ವಿದ್ಯಾರ್ಥಿಗಳಿಗೆ ಅವರು ಕನ್ನಡ ಹೇಳಿಕೊಟ್ಟರು. ಕೆಲವು ಬಾರಿ ಅವರು ಮಂಗಳೂರು ಸರ್ಕಾರಿ ಕಾಲೇಜು ಮತ್ತು ಚನ್ನಪಟ್ಟಣ ಕಾಲೇಜಿನಲ್ಲಿ ಕೆಲಸ ಮಾಡಿದರು. ಕುವೆಂಪು, ಎಸ್.ವಿ. ರಂಗಣ್ಣ ಮತ್ತು ಮುಂತಾದವರು ಇವರಿಗೆ ಶಿಕ್ಷಕರು. ಅವರು ಕವನಗಳು, ಸಣ್ಣ ಕಥೆಗಳು ನಾಟಕಗಳೊಂದಿಗೆ ಸುಮಾರು ಎಪ್ಪತ್ತೈದು ಕೃತಿಗಳನ್ನೂ ಬರೆದಿದ್ದಾ ರೆ. ಇವರು ೭ ನಾಟಕಗಳನ್ನು, ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವರ ಹಾಡುಗಳು ಸರಳ ಮತ್ತು ಸುಂದರ. ತನ್ನ ಬರಹಗಳಲ್ಲಿ ಅವರು ಪ್ರಕೃತಿ, ಪ್ರೀತಿ, ಸಮಾಜ ಮುಖಿ ಆಲೋಚನೆ, ಭಕ್ತಿ ಮತ್ತು ತಮ್ಮ ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಡಾ.ರಾಜ್ ಕುಮಾರ್ ಅವರ ಹಾಡುಗಳನ್ನು ಹಾಡಿದ್ದಾರೆ. ಗಾಂಧಿ, ಅಕ್ಕಮಹಾದೇವಿ ಮೊದಲಾದವರ ಕವಿತೆಗಳನ್ನು ಬರೆದಿದ್ದಾರೆ.
ಪ್ರಮುಖ ಕೃತಿಗಳು
ಬದಲಾಯಿಸಿಕವನ ಸಂಕಲನ
ಬದಲಾಯಿಸಿ- ಶಿವತಾಂಡವ
- ಕೆಂಗನಕಲ್ಲು
- ಬೃಂದಾವನ ಲೀಲೆ
- ರೂಪಸಿ
- ರಾಸಲೀಲೆ
- ಸುರಭಿ- ಮುಂತಾದವು ಇವರ ಕವನ ಸಂಕಲನ.
ಕೆಂಗನಕಲ್ಲು ೬೫ ಸಾಲುಗಳು ಕೃತಿ. ರಾಸಲೀಲೆಯಲ್ಲಿ ಭಕ್ತಿ ಗೀತೆಗಳಿವೆ. ಬೃಂದಾವನ ಲೀಲೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಜನಪ್ರಿಯವಾಗಿದೆ.
ಕಥಾ ಸಂಕಲನ
ಬದಲಾಯಿಸಿ- ನೆಲದ ಸೊಗಡು
- ಪುರುಷ ಸಿಂಹ
- ಹೇಮಕೂಟ
ಆಧ್ಯಾತ್ಮಿಕ ಕಾದಂಬರಿ
ಬದಲಾಯಿಸಿ- ಸಾಮರಸ್ಯದ ಶಿಲ್ಪಿ
- ಮಹಾ ಪ್ರಸಾದಿ
ಜೀವನ ಚರಿತ್ರೆಗಳು
ಬದಲಾಯಿಸಿ- ಭಾರತರತ್ನ ನೆಹರು
- ಶಿವಮೂರ್ತಿಶಾಸ್ತ್ರೀಗಳು
- ದೇವುಡು
ರೂಪಕಗಳು
ಬದಲಾಯಿಸಿ- ಅಂಬೆ
- ನಾಟ್ಯಾಂಜಲೀ
ನೃತ್ಯ ರೂಪಕಗಳು
ಬದಲಾಯಿಸಿ- ಧ್ರುವತಾರೆಯಾಗುವೆನು
- ಭಕ್ತಿ ಭಾವುಕಿ
ನಾಟಕಗಳು
ಬದಲಾಯಿಸಿ- ವಿಜಯವಾತಾಪಿ
- ಮರೀಬೇಡಿ
- ಶ್ರೀ ರೇಣುಕ ಪರಂಜ್ಯೋತಿ
- ಸ್ನೋ ವೈಟ್ ಬಹಳ ಮುಖ್ಯ ನಾಟಕ. ಸ್ನೋ ವೈಟ್ ಒಂದು ನೃತ್ಯ ನಾಟಕ. ಇದನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ.
ವಚನ ವೈಭವ ಕೃತಿಗಳು
ಬದಲಾಯಿಸಿ- ಶೂನ್ಯ ಸಂಪಾದನೆಗೊಂದು ಮುನ್ನುಡಿ
- ಅಭಿವ್ಯಕ್ತಿ
- ಅವಸ್ಥಾ
ಇತರ ಗ್ರಂಥಗಳು
ಬದಲಾಯಿಸಿ- ರಜತ ಕರಂಡಿ
- ಮರುಳ ಸಿದ್ಧಾ
- ಭಾಸನ ಸ್ವಪ್ನವಾಸವದತ್ತ ಸಂಸ್ಕೃತ ನಾಟಕವನ್ನು ಅನುವಾದಿಸಿದಾರೆ.
- "ಮನಿಷ" ಇವರ ಪ್ರಬಂಧ.
ವ್ಯಕ್ತಿ ಚಿತ್ರಗಳು
ಬದಲಾಯಿಸಿ- 'ಕನ್ನಡದ ಮೂವರು ಕಟ್ಟಾಳುಗಳು',
- ಹನುಮಂತಯ್ಯ ಮತ್ತು
- ರಾಜ್ ಕುಮಾರ್
- ಗ್ರೀಮ್ ಸಹೋದರರ ಕಥೆಯನ್ನು ಆಧರಿಸಿದ ನಾಟಕ ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡು ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚಿಗೆ ಪಡೆಯಿತು.
ಪ್ರಶಸ್ತಿ, ಗೌರವಗಳು
ಬದಲಾಯಿಸಿ- ಕೆಂಗನಕಲ್ಲು, ಭಾಸನ ಮಕ್ಕಳು ಕೃತಿಗಳಿಗೆ ಬಹುಮಾನ ಬಂದಿದೆ.
- ಮನು.ಶ್ರೀ ಸಾಹಿತ್ಯ ಪ್ರಶಸ್ತಿ ದೊರಕಿದೆ.
- ಕನ್ನಡ ಸಾಹಿತ್ಯ ಪರಿಷತಲ್ಲಿ ಅದ್ಯಕ್ಷರಾಗಿ ಸೇವೆ ಸಲ್ಲಿಸಿದಾರೆ.
- ಚೆನ್ನಪಟ್ಟಣ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದರು.
- ಕೆಲವು ದಿನದ ಹಿಂದೆ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ.
- ಡಾ. ಸಾ. ಶಿ. ಮರುಳಯ್ಯ ಅವರ ಹುಟ್ಟುಹಬ್ಬವನ್ನು ಸಾಹಿತಿ ಸುದಿನ ಕಾರ್ಯಕ್ರಮದಡಿ ಜನವರಿ ೨೮ರಂದು ಆಚರಿಸಲು ನಿರ್ಧರಿಸಿತು.