ಕ್ಯೂ

(ಸಾಲು ಇಂದ ಪುನರ್ನಿರ್ದೇಶಿತ)

ಕ್ಯೂ ಎಂದರೆ ಸರಕುಗಳು ಅಥವಾ ಸೇವೆಗಳಿಗಾಗಿ ಸಾಲಿನಲ್ಲಿ ನಿಲ್ಲುವ ಜನರ ಗುಂಪು, ಮತ್ತು ಅಲ್ಲಿ ಜನರು ಕ್ಯೂನಲ್ಲಿ ಕಾಯುತ್ತಿದ್ದಾರೆ ಅಥವಾ ನಿಂತಿದ್ದಾರೆ ಎಂದು ಹೇಳಲಾಗುತ್ತದೆ. ಅಂತಹ ಸ್ಥಳಗಳನ್ನು ಕ್ಯೂ ಪ್ರದೇಶಗಳೆಂದು ಕರೆಯಲಾಗುತ್ತದೆ.

ಲೂವರ್‌ನ ಮುಂದೆ ಭೇಟಿಗಾರರ ಕ್ಯೂ
ನ್ಯೂ ಯಾರ್ಕ್ ನಗರದಲ್ಲಿನ ಒಂದು ಆಹಾರದಂಗಡಿಯಲ್ಲಿ ಕ್ಯೂ ಪ್ರದೇಶ.

ಉದಾಹರಣೆಗಳಲ್ಲಿ ಸ್ವ-ಸಹಾಯ ಅಂಗಡಿಗಳಲ್ಲಿ ಶೇಖರಿಸಲಾದ ಕಿರಾಣಿ ಸಾಮಾನು ಅಥವಾ ಇತರ ಸರಕುಗಳಿಗೆ ಸಂದಾಯ ಮಾಡುವ ಸ್ಥಳಗಳು, ಸ್ವ-ಸಹಾಯವಿರದ ಅಂಗಡಿ ಮುಂದೆ, ಎಟಿಎಂ ಎದುರು, ಟಿಕೆಟ್ ಮುಂಗಟ್ಟೆ ಎದುರು, ನಗರದ ಬಸ್ಸಿನ ಎದುರು, ಅಥವಾ ಟ್ಯಾಕ್ಸಿ ನಿಲ್ದಾಣದ ಮುಂದೆ ಸೇರಿವೆ.

ಕ್ಯೂ ನಿಲ್ಲುವುದು ಅನೇಕ ಕ್ಷೇತ್ರಗಳಲ್ಲಿನ ವಿದ್ಯಮಾನವಾಗಿದೆ, ಮತ್ತು ಇದನ್ನು ಕ್ಯೂ ಸಿದ್ಧಾಂತದ ಅಧ್ಯಯನದಲ್ಲಿ ವ್ಯಾಪಕವಾಗಿ ವಿಶ್ಲೇಷಿಸಲಾಗಿದೆ.

ಅರ್ಥಶಾಸ್ತ್ರದಲ್ಲಿ, ಕ್ಯೂ ನಿಲ್ಲುವುದನ್ನು ಕೊರತೆಯಿರುವ ಸರಕುಗಳು ಮತ್ತು ಸೇವೆಗಳ ಹಂಚಿಕೆಯನ್ನು ನಿಯಂತ್ರಿಸುವಲ್ಲಿ ಒಂದು ಬಗೆಯಾಗಿ ಕಾಣಲಾಗುತ್ತದೆ.

ಸಂಘಟಿತ ಕ್ಯೂ ಪ್ರದೇಶಗಳು ಸಾಮಾನ್ಯವಾಗಿ ಅಮ್ಯೂಸ್‍ಮೆಂಟ್ ಪಾರ್ಕುಗಳಲ್ಲಿ ಕಂಡುಬರುತ್ತವೆ. ಒಂದು ನಿರ್ದಿಷ್ಟ ಸಮಯದಲ್ಲಿ ಸವಾರಿಗಳಲ್ಲಿ ನಿರ್ದಿಷ್ಟ ಸಂಖ್ಯೆಗಳ ಅತಿಥಿಗಳಿಗೆ ಸೇವೆ ಒದಗಿಸಬಹುದು, ಹಾಗಾಗಿ ಕಾಯುತ್ತಿರುವ ಹೆಚ್ಚುವರಿ ಅತಿಥಿಗಳ ಮೇಲೆ ಸ್ವಲ್ಪ ನಿಯಂತ್ರಣವಿರಬೇಕು. ಇದು ಔಪಚಾರಿಕ ಕ್ಯೂ ಪ್ರದೇಶಗಳ ಬೆಳವಣಿಗೆಗೆ ಕಾರಣವಾಯಿತು—ಅಂದರೆ ಸವಾರಿಗಳನ್ನು ಹತ್ತಲು ಕಾಯುತ್ತಿರುವ ಜನರ ಸಾಲುಗಳನ್ನು ಕಂಬಿತಡೆಯಿಂದ ಸಂಘಟಿಸುವ ಪ್ರದೇಶಗಳು. ಈ ಪ್ರದೇಶಗಳಲ್ಲಿ ಅತಿಥಿಗಳಿಗೆ ಹವಾಮಾನ ನಿಯಂತ್ರಿತ ಕಟ್ಟಡದೊಳಗೆ ಅಥವಾ ಫ಼್ಯಾನ್‍ಗಳು ಹಾಗೂ ತುಂತುರು ಸಿಂಪಡಿಕೆ ಸಾಧನಗಳಿಂದ ಅವರ ತಲೆಗಳ ಮೇಲೆ ಛಾವಣಿಯ ಆಶ್ರಯ ನೀಡಬಹುದು. ಡಿಸ್ನಿ ಪಾರ್ಕ್‌ನಂತಹ ಕೆಲವು ಅಮ್ಯೂಸ್‍ಮೆಂಟ್ ಪಾರ್ಕುಗಳಲ್ಲಿನ ಕ್ಯೂ ಪ್ರದೇಶಗಳನ್ನು ವಿಸ್ತಾರವಾಗಿ ಅಲಂಕರಿಸಲಾಗಿರಬಹುದು, ಮತ್ತು ಅಲ್ಲಿ ನಿರೀಕ್ಷೆಗೆ ಇಂಬುನೀಡುವ ಹಿಡುವಳಿ ಪ್ರದೇಶಗಳಿರಬಹುದು. ಹೀಗೆ ಮಾಡುವುದರಿಂದ ಕಾಯುವಾಗ ನೋಡಲು ಏನಾದರೂ ಆಸಕ್ತಿದಾಯಕವಂಥದ್ದನ್ನು, ಅಥವಾ ಆಕರ್ಷಣೆಯ ಹೊಸ್ತಿಲಿಗೆ ಆಗಮಿಸಿದ್ದಾರೆ ಎಂಬ ಗ್ರಹಿಕೆಯನ್ನು ನೀಡುವ ಮೂಲಕ ಕ್ಯೂನಲ್ಲಿರುವ ಜನರಿಗೆ ಕಾಯುವ ಸಮಯ ಕಡಿಮೆ ಎನಿಸುತ್ತದೆ.

ರೇಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಕಾಯ್ದಿರಿಸಲು, ಬಸ್ ಹತ್ತಲು ಬಸ್ ನಿಲ್ದಾಣಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಕೂಡ ಕ್ಯೂಗಳು ಕಂಡುಬರುತ್ತವೆ.[]

ಸಾಮಾನ್ಯವಾಗಿ ಭದ್ರತಾ ತಪಾಸಣೆ ನಡೆಸುವ ಸಾರಿಗೆ ಟರ್ಮಿನಲ್‍ಗಳಲ್ಲಿ ಕ್ಯೂಗಳು ಕಂಡುಬರುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. "Queues get longer at railway station". ದಿ ಹಿಂದೂ. Mangalore. 3 May 2012. Retrieved Mar 2, 2015.
"https://kn.wikipedia.org/w/index.php?title=ಕ್ಯೂ&oldid=1080986" ಇಂದ ಪಡೆಯಲ್ಪಟ್ಟಿದೆ