ಸಾಲಿಗ್ರಾಮ ಉಡುಪಿ

ಬದಲಾಯಿಸಿ
 
ಸಾಲಿಗ್ರಾಮ Saligrama

ಸಾಲಿಗ್ರಾಮವು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿದೆ. ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ಲಿ ಇದಕ್ಕೆ ದೇಗುಲದ ರೂಪವನ್ನು ನೀಡಲಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಹಬ್ಬವು ತುಂಬಾ ಜನಪ್ರಿಯವಾಗಿದ್ದು, ರಾಜ್ಯವೂ ಸೇರಿದಂತೆ, ನೆರೆ ರಾಜ್ಯಗಳಿಂದಲೂ ಕೂಡಾ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ಈ ಪ್ರದೇಶವು ಉಡುಪಿ ಮತ್ತು ಕುಂದಾಪುರದ ಮಧ್ಯದಲ್ಲಿದೆ. ಉಡುಪಿಯಿಂದ ಉತ್ತರದಲ್ಲಿ ೨೧ ಕಿ.ಮೀ ದೂರದಲ್ಲಿದ್ದು, ಮಂಗಳೂರಿನಿಂದ ೮೧ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ನೀವು ಸುಲಭವಾಗಿ ರಾಷ್ಟ್ರೀಯ ಹೆದ್ದಾರಿ ೧೭ರ ಮೂಲಕ ಸಾಗಬಹುದು. ಬಸ್‌ ಸೇವೆಯು ಲಭ್ಯವಿದ್ದು, ಬೆಂಗಳೂರಿನಿಂದ ಸಾಲಿಗ್ರಾಮಕ್ಕೆ ನೇರವಾದ ಸಂಪರ್ಕ ಕೂಡಾ ಇದೆ. ನೀವು ಅಲ್ಲಿಗೆ ತಲುಪಿದ ಮೇಲೆ, ಸ್ಥಳಕ್ಕೆ ತಲುಪಲು ಸಾಕಷ್ಟು ಆಟೋಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಹಲವು ರೀತಿಯ ವಸತಿ ಸೌಲಭ್ಯಗಳು ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸಿಗರಿಗೆ ಲಭ್ಯವಿದೆ.