ಸಾಲಗುಂದ ಐತಿಹಾಸಿಕ ದೇವಾಲಯ

ಆನೆಶಂಕರ ದೇವಾಲಯ

ಸ್ಥಳ: ಸಾಲಗುಂದ ಸಿಂಧನೂರು ತಾಲೂಕು

ನೆಲೆ: ಗ್ರಾಮದ ಪಶ್ಚಿಮ ದಿಕ್ಕು ಚಿಕ್ಕ ಗುಡ್ಡ

ದಿಸೆ: ಪೂರ್ವಾಭಿಮುಖವಾಗಿ

ಕಾಲ: ಕ್ರಿ.ಶ 1528

ಶಾಸನ: ತೃಟಿತ

ಪರಿಕರ: ಗಾರೆ ,ಗಚ್ಚು ,ಬೆಣಚು ಕಲ್ಲು

ದೇವಾಲಯದ ವಿವರ:

ಮೇಲೆ ವಿವರಿಸಿದಂತೆ ದೇವಾಲಯವು ಊರಿನ ಪಶ್ಚಿಮ ದಿಶೆಯಲ್ಲಿ ಸಣ್ಣದಾದರೂ ಕಡಿದಾದ ಹೆಬ್ಬಂಡೆಯ ಮೇಲೆ ನಿರ್ಮಿಸಲಾಗಿದೆ ಚಿಕ್ಕದಾದ ಈ ದೇವಾಲಯವನ್ನು ಅಬ್ಬರಾವು ಎಂಬುವವರು  ಮಾವಂದಿರಾದ ಅಯ್ಯನಿಗೆ ಪುಣ್ಯ ಸಂಚಯವಾಗಲಿ ಎಂದು ನಿರ್ಮಿಸ ಲಾಗಿದೆ ಈ ದೇವಾಲಯ ಸಾಲಗುಂದದ ಎಡದೊರೆ-೨೦೦೦ಕ್ಕೆ ಒಳಪಟ್ಟಂತೆ ಆಗ ರೌಡಕುಂದೇಯ ಸೀಮಾ ಆಡಳಿತಕ್ಕೆ ಒಳಪಟ್ಟಿತ್ತು, ಆಗ ಕೃಷ್ಣದೇವರಾಯ ಆಡಳಿತ ನಡೆಸುವ ಕಾಲ ಆಗಿತ್ತು .ಕುದುರೆಯ ನಾಯಕತನಕ್ಕೆ ಸೇರಿದ ಈ ಗ್ರಾಮದ ಅಧಿಕಾರಿಯೂ ಸಾಲಗುಂದಯ ಮಾವನಿಗಾಗಿ ಕೆರೆ ಹತ್ತಿರ ಫಲವತ್ತಾದ ಜಮೀನಿನಲ್ಲಿ ಎರಡು ಕೊಳಗೆ ಬೆಳೆಯುವ ಸಾಮರ್ಥ್ಯದ ಕಪ್ಪ ಜಮೀನನ್ನು ಈ ದೇವಾಲಯಕ್ಕೆ ನೀಡಿದ್ದಾನೆ. ಆದರೆ ಇಂದು ಯಾವುದೇ ವ್ಯವಸ್ಥೆಗೆ ಒಳಪಡದೆ ದೇವಾಲಯ ಅನಾಥವಾಗಿದೆ. ತಿರುಮಲ ವೆಂಕಟೇಶ್ವರನ ಈ ದೇವಾಲಯವು ಆನೆ ಶಂಕರ ದೇವಾಲಯವಾಗಿದೆ .ಗರ್ಭಗೃಹದಲ್ಲೂ ಲಿಂಗ ಪ್ರತಿಷ್ಠಾಪನೆಯಾಗಿದೆ ಮುಕುಂದಯ ನದಿ ತೀರದ ಪಾಪನಾಶೇಶ್ವರ ದೇವಾಲಯದಂತೆ ಇದು ಕೂಡ ಚಿಕ್ಕಪೇಟೆಗೆ ಅಂತಿದೆ .ಸುಲಭ ಶೈಲಿಯಲ್ಲಿ ನಿರ್ಮಿಸಿದ ಈ ದೇವಾಲಯಕ್ಕೆ ಗರ್ಭಗೃಹ ತೆರೆದ ಸುಖ ನಾಶಿ ನವರಂಗಗಳಿವೆ. ನವರಂಗಕ್ಕೆ ನಾಲ್ಕು ಚಪ್ಪಟೆಯಾದ ಕಂಬಗಳನ್ನು ಬಳಸಲಾಗಿದೆ ಇದರ ಸುತ್ತಲೂ ಗೋಡೆಯ ಕಂಬಗಳಿವೆ ಈ ದೇವಾಲಯದ ಗರ್ಭಗೃಹ ಪಟ್ಟಿಕೆ ಜಗಲಿಯೊಂದಿಗೆ ಧ್ಯಾನ ಪಾಲಕರನ್ನು ಹೊಂದಿದೆ. ಈ ದೇವಾಲಯದ ಶೈವ ದ್ವಾರಪಾಲಕರಿದ್ದು ಅವರಿಗೆ ಸಹಾಯಕರಾಗಿ ಸ್ತ್ರೀಯರಿದ್ದಾರೆ .ಕಲ್ಲು ಮತ್ತು ಗಾರೆ ಗಚ್ಚಿನಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ.ಮಳೆಯ ಮಚ್ಚಿಕೆ ಗಾರೆಯ ಕಂಬಗಳಿವೆ ಗೋಪುರ ವಿಲ್ಲ ದೇವಾಲಯದ ಚತುರ್ ಸಾಕ್ಷರದ ಕಂಬಗಳ ರಚನೆ ಇದೆ.