ಸಾರ್ಣಡ್ಡೆ

ಸಾರ್ಣಡ್ಡೆ
ಸಾರ್ನೆದಡ್ಡೆ
ಇತರ ಹೆಸರುಸಾರ್ಣಡ್ಡೆ
ಬಗೆಸಿಹಿ/ಖಾರ ತಿನಿಸು
ಮೂಲಭಾರತ
ಪ್ರದೇಶ ಅಥವಾ ರಾಜ್ಯಮಂಗಳೂರು , ಉಡುಪಿ

ತುಳುನಾಡಿನ ಸಾರ್ನೆದಡ್ಡೆ ಅಥಾವಾ ಸಾರ್ಣಡ್ಡೆ , ಒಂದು ಬಗೆಯ ಸಿಹಿ ತಿನಸು. ಇದು ರುಚಯಲ್ಲಿ ಸ್ವಲ್ಪ ಪಾಯಸದ ಹಾಗೆ ಇರುತ್ತದೆ. ಕೆಲವು ಭಾಗದಲ್ಲಿ ಸ್ವಲ್ಪ ಖಾರ ಕೂಡಾ ಮಾಡುತ್ತಾರೆ. ಇದು ಕುಚ್ಚಲು ಅಕ್ಕಿ ಅಥಾವಾ ಬಿಳಿ ಅಕ್ಕಿಯನ್ನು ರುಬ್ಬಿ ಅದರಿಂದ ಮಾಡುವ ತಿನಿಸು. ರುಬ್ಬಿದ ಹಿಟ್ಟನ್ನು ಒಂದು ದೊಡ್ಡ ದೊಡ್ಡ ತೂತು ಇರುವ ಪಾತ್ರೆಯಲ್ಲಿ ಹಿಟ್ಟನ್ನು ಇಳಿಸಿ ಅದನ್ನು ಬೇಯಿಸಿ ಅಡ್ಯೆ ಮಾಡಿ, ಅದಕ್ಕೆ ಸಿಹಿಯಾದ ಗಸಿಯನ್ನು ಬೆರಸಿ ಮಾಡುವ ತಿನಿಸು.

ಸಾರ್ನೆದಡ್ಡೆಯ ಪಾತ್ರೆ

ಬದಲಾಯಿಸಿ
 
ಸಾರ್ನೆದಡ್ಡೆ ಮಾಡಲು ಉಪಯೋಗಿಸುವ ಪಾತ್ರೆಯ ಎದುರಿನ ಚಿತ್ರ
 
ಸಾರ್ನೆದಡ್ಡೆ ಮಾಡಲು ಉಪಯೋಗಿಸುವ ಪಾತ್ರೆಯ ಹಿಂದಿನ ಚಿತ್ರ

ಸಾರ್ನೆದಡ್ಡೆ ಮಾಡುವುದಕ್ಕಾಗಿ ಅಂಗಡಿಯಲ್ಲಿ ಅದಕ್ಕಾಗಿಯೇ ಮಾಡಿದ ಬೇರೆ ಪಾತ್ರೆಗಳು ಸಿಗುವುದಿಲ್ಲ. ಅದಕ್ಕಾಗಿ ಮನೆಯಲ್ಲಿಯೇ ನಾವು ಪಾತ್ರೆಯನ್ನು ಮಾಡಬೇಕಾಗಿದೆ. ಅದಕ್ಕೆ ಬೇಕಾಗಿ ಹಳೆಯ ಅಗಲ ತಳ ಇರುವ ಪಾತ್ರೆಯನ್ನು ತೆಗೆದುಕೊಂಡು ಅದರ ತಳ ಭಾಗದಲ್ಲಿ ಚಿತ್ರದಲ್ಲಿ ಕಾಣುವಂತೆ ಚಿಕ್ಕ ಚಿಕ್ಕ ತೂತುಗಳನ್ನು ಮಾಡಬೇಕು.ಹೀಗೆ ಮಾಡಿದರೆ ಸಾರ್ನೆದಡ್ಡೆ ಮಾಡುವ ಪಾತ್ರೆ ಸಿಧ್ಧವಾಗುತ್ತದೆ.

ಸಾರ್ನೆದಡ್ಡೆ ಮಾಡಲು ಬೇಕಾಗುವ ಸಾಮಾನುಗಳು

ಬದಲಾಯಿಸಿ
  • ಕೆಂಪುಮೆಣಸು - ೨-೩(ಬೇಕಾದರೆ ಮಾತ್ರ).
  • ತೆಂಗಿನಕಾಯಿ ಯ ತುರಿ- ಒಂದು ಲೋಟ.
  • ಸಂಬರ, ಜೀರಿಗೆ - ಕಾಲು ಚಮಚ.
  • ಬೆಳ್ಳುಳ್ಳಿ - ೪ ಎಸಳು, ನೀರುಳ್ಳಿ - ೧.
  • ಬೆಲ್ಲ - ರುಚಿಗೆ ತಕ್ಕಷ್ಟು.

ಸಾರ್ನೆದಡ್ಡೆ ಮಾಡುವು ಕ್ರಮ

ಬದಲಾಯಿಸಿ

ಅಡ್ಯೆ ಮಾಡುವ ಕ್ರಮ

ಬದಲಾಯಿಸಿ

ಹಿಂದಿನ ದಿವಸ ನೀರು ಹಾಕಿ ನೆನೆಸಿದ ಅಕ್ಕಿಗೆ ಉಪ್ಪು ಹಾಕಿ ರುಬ್ಬಬೇಕು. ಆ ಬಳಿಕ ಅದನ್ನು ಬಾಣಲೆಗೆ ಹಾಕಿ ಬಿಸಿ ಮಾಡಬೇಕು. ಒಂದು ಹದ ಬೆಂದ ಬಳಿಕ , ನೀರನ್ನು ಬಿಸಿ ಆಗಲು ಇಡಬೇಕು. ನೀರು ಕೊದಿಯುವಾಗ ತೂತು ಇರುವ ಪಾತ್ರೆಯನ್ನು ಅದರ ಮೇಲೆ ಇಡಬೇಕು. ಆ ಬಳಿಕ ಬಿಸಿ ಮಾಡಿದ ಅಡ್ಯೆಯನ್ನು ಸ್ವಲ್ಪ ಸ್ವಲ್ಪ ತೆಗೆದು ತೂತು ಇರುವ ಪಾತ್ರೆಯ ಮೇಲೆ ಇಟ್ಟು ಒತ್ತಬೇಕು. ಒತ್ತುವಾಗ ತೂತಿನ ಸಹಾಯದಿಂದ ಚಿಕ್ಕ ಚಿಕ್ಕ ಮುದ್ದೆಯ ಆಕಾರದಲ್ಲಿ ಅಡ್ಯೆ ಬಿಸಿ ನೀರಿಗೆ ಬೀಳುತ್ತದೆ. ಹೀಗೆಯೇ ಎಲ್ಲಾ ಅಡ್ಯೆಯನ್ನು ತೂತಿನ ಸಹಾಯದಿಂದ ಬಿಸಿ ನೀರಿಗೆ ಹಾಕಬೆಕು. ಈ ಅಡ್ಯೆ ಸರೀ ಬೆಂದ ಬಳಿಕ ಜಾಲಿಯಿಂದ ತೆಗೆದು ಬೇರೆ ಪಾತ್ರೆಗೆ ಹಾಕಬೇಕು.[]

ಸಿಹಿಯಾದ ಗಸಿ ಮಾಡುವ ಕ್ರಮ

ಬದಲಾಯಿಸಿ

ಬಾಣಲೆಯಲ್ಲಿ ಒಗ್ಗರಣೆಗೆ ಇಟ್ಟು, ತೆಂಗಿನಕಾಯಿಯ ತುರಿಯೊಂದಿಗೆ ಅದನ್ನು ರುಬ್ಬಿ , ರುಬ್ಬಿದ ಹಿಟ್ಟನ್ನು ಕುದಿಸಿ, ಕುದಿಸುವಾಗ ಅದು ಸಿಹಿ ಆಗುದಕ್ಕೆ ಬೆಲ್ಲ ಹಾಕಿ ಮಿಶ್ರ ಮಾಡಬೇಕು. ಬಿಸಿ ಆಗುತಿದ್ದಂತೆ, ಅದಕ್ಕೆ ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಹಾಕಿ .

ಸಾರ್ನೆದಡ್ಡೆ

ಬದಲಾಯಿಸಿ

ಮಿಶ್ರ ಮಾಡಿದ ಸಿಹಿಯಾದ ಗಸಿಯನ್ನು , ಅದಗಲೇ ತಯಾರಿಸಿದ ಅಡ್ಯೆಗೆ ಹಾಕಿ ಮಿಶ್ರ ಮಾಡಬೇಕು. ಇದು ಪಾಯಾಸದ ಹದಕ್ಕೆ ಬರಬೇಕು. ಸ್ವಲ್ಪ ಕುದಿಸಿ ಆಮೇಲೆ ಒಲೆಯಿಂದ ಕೆಳಗಿರಿಸಬೇಕು. ಹೀಗೆ ಮಾಡಿದರೆ ತುಳುನಾಡಿನ ಸಾರ್ನೆದಡ್ಡೆ ತಿನ್ನಲು ತಯಾರು.

ಸಂಧರ್ಭ

ಬದಲಾಯಿಸಿ

ತುಳುನಾಡಿನಲ್ಲಿ ಅನೇಕ ಸಂದರ್ಭಗಳಲ್ಲಿ ಸಾರ್ನೆದಡ್ಡೆ ಮಾಡುತ್ತಾರೆ. ಹೆಚ್ಚಾಗಿ ಊರಿನಲ್ಲಿ ಆಟ ಆಗುವ ಸಂದರ್ಭ, ಹಬ್ಬ ಹರಿದಿನ ಗಳಲ್ಲಿ, ಮದುವೆ ಸಮಾರಂಭಗಳಲ್ಲಿ. ಜೋರಾಗಿ ಮಳೆ ಬರುವ ಆಟಿ ತಿಂಗಳಲ್ಲಿ ಕೂಡಾ ತುಳುನಾಡಿನ ಜನರು ಸಾರ್ನೆದಡ್ಡೆ ಮಾಡಿ ಸವಿಯುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "ಸಾರ್ನೆದಡ್ಡೆ". www.google.com. Archived from the original on 17 July 2022. Retrieved 17 July 2022.