ಸಾಬುದಾನ ಖಿಚಡಿ ಎಂಬುದು ಭಾರತೀಯ ಭಕ್ಷ್ಯವಾಗಿದೆ. ಇದನ್ನು ನೆನಸಿದ ಸಾಬುದಾನದಿಂದ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಶ್ಚಿಮ ಭಾರತದ ಭಾಗಗಳಲ್ಲಿ,ಮಹಾರಾಷ್ಟ್ರ,ಕರ್ನಾಟಕ,ಮಧ್ಯಪ್ರದೇಶ,ರಾಜಸ್ಥಾನ ಮತ್ತು ಗುಜರಾತ್ ಗಳಲ್ಲಿ ತಯಾರಿಸಲಾಗುತ್ತದೆ. ಮುಂಬೈ,ಪುಣೆ, ಇಂದೋರ್, ಭೋಪಾಲ್,ಜೈಪುರ್ ಮತ್ತು ನಾಗ್ಪುರ್ ಗಳಂತಹ ಪ್ರಮುಖ ಪಟ್ಟಣಗಳಲ್ಲಿ ಇದು ರಸ್ತೆ ಬದಿ ಆಹಾರವಾಗಿ ಲಭ್ಯವಿದೆ ಮತ್ತು ವರ್ಷವಿಡೀ ವ್ಯಾಪಕವಾಗಿ ಜನರು ಇದನ್ನು ತಿನ್ನುತ್ತಾರೆ. ಜನರು ಇದನ್ನು ಶಿವರಾತ್ರಿ, ನವರಾತ್ರಿ ಅಥವಾ ಇದೇ ರೀತಿಯ ಹಿಂದೂ ಧಾರ್ಮಿಕ ಸಂದರ್ಭಗಳಲ್ಲಿ ಉಪವಾಸವನ್ನು ಆಚರಿಸುವಾಗ ಆಯ್ಕೆ ಮಾಡುವ ಭಕ್ಷ್ಯವಾಗಿದೆ.ಇದನ್ನು ಮಹಾರಾಷ್ಟ್ರದ ವಿದರ್ಭ ಪ್ರದೇಶದ ಸಾಬುದಾನ ಊಲ್ ಎಂದು ಕರೆಯಲಾಗುತ್ತದೆ.

ಸಾಬುದಾನ ಖಿಚಡಿ
ಮೂಲ
ಪರ್ಯಾಯ ಹೆಸರು(ಗಳು)साबुदाना खिचड़ी
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಪಶ್ಚಿಮ ಭಾಗ
ವಿವರಗಳು
ಸೇವನಾ ಸಮಯತಿಂಡಿ
ಮುಖ್ಯ ಘಟಕಾಂಶ(ಗಳು)ಸಾಬುದಾನ, ಆಲೂಗಟ್ಟೆ, ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ತುಪ್ಪ
ಸಾಬುದಾನ ಖಿಚಡಿ

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ

ಮಾಡುವ ವಿಧಾನ

ಬದಲಾಯಿಸಿ

ಖಿಚಡಿ ಮಾಡುವ ಒಂದು ಗಂಟೆ ಮೊದಲು ಸಾಬುದಾನ ವನ್ನು ನೀರಿನಲ್ಲಿ ನೆನೆಸಿ ಇಡಬೇಕು. ಇದು ತುಂಬಾ ಅಗತ್ಯ.ಒಗ್ಗರಣೆಗೆ ಹೆಚ್ಚಿಟ್ಟುಕೊಂಡ ಹಸಿಮೆಣಸಿನಕಾಯಿ,ಹಸಿ ಶುಂಠಿ,ಆಲೂಗಡ್ಡೆ,ಗಜ್ಜರಿ ಹಾಕಿ ಚೆನ್ನಾಗಿ ತಾಳಿಸಿಕೊಂಡು ಸಾಬುದಾನವನ್ನು ಹಾಕಿ ಹುರಿದು ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿಕೊಳ್ಳಬೇಕು.[]

ಪೋಷಕಾಂಶಗಳು

ಬದಲಾಯಿಸಿ

ಸಾಬುದಾನ ಸುಮಾರು ಶುದ್ಧ ಕಾರ್ಬೋಹೈಡ್ರೇಟ್ ಮತ್ತು ಕಡಿಮೆ ಪ್ರೋಟೀನ್,ವಿಟಮಿನ್ ಗಳು ಅಥವಾ ಖನಿಜಗಳನ್ನು ಹೊಂದಿದೆ. ಸಾಬುದಾನ ಖಿಚಡಿಗೆ ಕಡಲೆಕಾಯಿಗಳ ಸೇರ್ಪಡೆ ವಿಷಯಕ್ಕೆ ಸೇರಿಸುತ್ತದೆ. ಇದರಿಂದ ಅದು ಹೆಚ್ಚು ಸಮತೋಲಿತ ಆಹಾರವಾಗಿ ಮಾಡುತ್ತದೆ. ಪಿಷ್ಟ ಮತ್ತು ಕೊಬ್ಬಿನಾಂಶದ ಪ್ರಮಾಣದಿಂದಾಗಿ ಇದು ಹೆಚ್ಚಿನ ಕ್ಯಾಲೊರಿ ಅಂಶವನ್ನು ಹೊಂದಿರುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. https://www.ruchiskitchen.com/sabudana-khichdi/
  2. https://foodviva-com.cdn.ampproject.org/v/foodviva.com/snacks-recipes/sabudana-khichdi-recipe/amp/?amp_js_v=a2&amp_gsa=1&usqp=mq331AQECAFYAQ%3D%3D#referrer=https%3A%2F%2Fwww.google.com&amp_tf=From%20%251%24s&ampshare=http%3A%2F%2Ffoodviva.com%2Fsnacks-recipes%2Fsabudana-khichdi-recipe%2Famp%2F%23referrer%3Dhttps%3A%2F%2Fwww.google.com%26amp_tf%3DFrom%2520%25251%2524s
  3. https://m-recipes-timesofindia-com.cdn.ampproject.org/v/s/m.recipes.timesofindia.com/recipes/sabudana-khichdi/amp_recipeshow/58853230.cms?amp_js_v=a2&amp_gsa=1&usqp=mq331AQECAFYAQ%3D%3D#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fm.recipes.timesofindia.com%2Frecipes%2Fsabudana-khichdi%2Famp_recipeshow%2F58853230.cms%23referrer%3Dhttps%3A%2F%2Fwww.google.com%26amp_tf%3DFrom%2520%25251%2524s