ಸಾತ್ಪುರ ಪ್ರಕಲ್ಪನೆ

ಕೆಲವು ಪಕ್ಗಿಗಳು ಈಶಾನ್ಯ ಭಾರತ – ಪಶ್ಚಿಮಘಟ್ಟಗಳ ಅಧಿಕ ತೇವಾಂಶವುಳ್ಳ ನಿತ್ಯ ಹರಿದ್ವರ್ಣದ ಮಳೆಕಾಡಿನಲ್ಲಷ್ಟೇ ವಾಸಿಸುತ್ತಿದ್ದು ಇವುಗಳ ನಡುವಿನ 1500 ಮೈಲಿ ಅಗಾಧ ಅಂತರದಲ್ಲಿನ ವಿಶಾಲ ಪ್ರದೇಶದಲ್ಲೆಲ್ಲೂ ಕಾಣಸಿಗುವುದಿಲ್ಲ. ಈ ಒಂದು ವಿಶಿಷ್ಟತೆ ಸಲೀಂ ಆಲಿಯವರಿಗೆ ಟ್ರಾವಂಕೂರ್‌ನ ಹಕ್ಕಿ ಸಮೀಕ್ಷೆಯಲ್ಲಿ(1935)[]ಕಂಡುಬರುತ್ತದೆ. ಈ ಎರಡೂ ಪ್ರದೇಶದಲ್ಲಷ್ಟೇ ಕಾಣಸಿಗುವ ಪಕ್ಷಿಗಣಗಳನ್ನು ಪ್ರತ್ಯೇಕಿಸುವ ಅಗಾಧ ಅಂತರಕ್ಕೆ ಯುಕ್ತ ವೈಜ್ಞಾನಿಕ ವಿವರಣೆ ಕೆಳಗಿನಂತಿದೆ. ಭಾರತೀಯ ಪರ್ಯಾಯ ದ್ವೀಪದ ಭೌಗೋಳಿಕ ಇತಿಹಾಸದ ಒಂದು ಹಂತದಲ್ಲಿ ಎತ್ತರದ ಪರ್ವತಶ್ರೇಣಿಗಳ ನಿರಂತರ ಸರಪಳಿ ಹಿಮಾಲಯದಿಂದ-ಗಾರೋ ಪರ್ವತಗಳು – ಸಾತ್ಪುರ ಶ್ರೇಣಿ-ಪಶ್ಚಿಮಘಟ್ಟಗಳವರೆಗೆ ಅಸ್ತಿತ್ವದಲ್ಲಿದ್ದು, ಇಂದಿಗಿಂತ ಸಾವಿರಾರು ಅಡಿಗಳಷ್ಟು ಎತ್ತರವಿದ್ದು, ತೇವಾಂಶವುಳ್ಳ ನಿತ್ಯಹರಿದ್ವರ್ಣದ ಮಳೆಕಾಡಿನಿಂದಾವರಿಸಿತ್ತು(ಸಾತ್ಪುರ ಶ್ರೇಣಿ ಇಂದಿಗಿಂತ 3000 ಅಡಿಗಳಷ್ಟು ಎತ್ತರವಿತ್ತು). ಈ ಪರ್ವತ ಮಾಲೆ ಸೇತುವೆಯಾಗಿ ಮಲಯನ್ ವಲಯದ ಪ್ರಾಣಿ-ಸಸ್ಯಗಳು ಭಾರತೀಯ ಪರ್ಯಾಯ ದ್ವೀಪ-ಪಶ್ಚಿಮಘಟ್ಟಗಳಿಗೆ ಹರಡಲು ಸಹಕಾರಿಯಾಯಿತು. ಲಕ್ಷಾಂತರ ವರ್ಷಗಳ ಗಾಳಿ -ಮಳೆ-ಬಿಸಿಲಿನಿಂದಾದ ಸವೆತ ನಿರಂತರವಾಗಿದ್ದ ಪರ್ವತ ಶ್ರೇಣಿಗಳ ಎತ್ತರವನ್ನು ಕುಬ್ಜಗೊಳಿಸಿದ್ದರಿಂದ, ಆರ್ದ್ರ ವಾತಾವರಣ ಕ್ಷೀಣಿಸಿ ವಿಶೇಷವಾಗಿ ಆರ್ದ್ರ ವಾತಾವರಣಕ್ಕೆ ಹೊಂದಿಕೊಂಡು ಬಾಳುತ್ತಿದ್ದ ಅರಣ್ಯ ಪಕ್ಷಿಗಳು ಕ್ರಮೇಣ ಇಳಿಮುಖವಾಗಿ ಇಲ್ಲವಾಗಿವೆ. ಅಗತ್ಯವಾದ ಆರ್ದ್ರತೆ ಮತ್ತು ಸಸ್ಯವರ್ಗದ ಅವಶೇಷಗಳು ಉಳಿದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಈ ವಿಶೇಷ ಪಕ್ಷಿಗಣಗಳು ಇಂದಿಗೂ ಅಸ್ತಿತ್ವದಲ್ಲಿವೆ. ಮಲಯನ್ ವಲಯದ ಪ್ರಾಣಿ-ಸಸ್ಯಗಳು ಭಾರತೀಯ ಪರ್ಯಾಯ ದ್ವೀಪ-ಪಶ್ಚಿಮಘಟ್ಟಗಳಿಗೆ ಹರಡಲು ಸಾತ್ಪುರ ಪರ್ವತ ಶ್ರೇಣಿಗಳು ಸೇತುವೆಯಾಗಿ ಕಾರ್ಯನಿರ್ವಹಿಸಿವೆ ಎಂಬುದೇ “ಸಾತ್ಪುರ ಪ್ರಕಲ್ಪನೆ”(Satpura hypothesis). ಹಿಮಾಲಯದಲ್ಲಿ ಕಾಣ ಬರುವ ಕೆಲ ಮೀನುಗಳು ಭಾರತೀಯ ಪರ್ಯಾಯದ್ವೀಪದೆಲ್ಲೆಡೆ ಕಾಣಬರುವುದರ ಹಿನ್ನೆಲೆಯಾಗಿ ಈ ಪ್ರಕಲ್ಪನೆಯನ್ನು ಪ್ರತಿಪಾದಿಸಿದ್ದಾರೆ ಇದು ಸುಂದರ್‌ ಲಾಲ್‌ ಹೋರಾ ಅವರು ಪ್ರಸ್ತಾಪಿಸಿದ ಪ್ರಾಣಿಭೌಗೋಳಿಕಾ ಕಲ್ಪನೆ (1949)[]. ಈ ಪ್ರಾಣಿಭೌಗೋಳಿಕಾ ಕಲ್ಪನೆಯನ್ನು ಭಾರತೀಯ ಜೀವಶಾಸ್ತ್ರಜ್ಞರು ಕ್ರಮೇಣ ಸ್ವೀಕರಿಸಿ, ಹೆಚ್ಚು ಪ್ರಚಲತೆಯನ್ನು ಪಡೆಯುತ್ತದೆ. ಆ ನಂತರದ ದಿನಗಳಲ್ಲಿ, ಪ್ರಾಣಿಶಾಸ್ತ್ರ ಹಾಗೂ ಇತರ ಕ್ಷೇತ್ರಗಳಲ್ಲಿನ ವಿಜ್ಞಾನಿಗಳು ಅದರ ಬೆಂಬಲಕ್ಕೆ ಸ್ಥಿರವಾಗಿ ಪುರಾವೆಗಳನ್ನು ಒದಗಿಸುತ್ತಿದ್ದಾರೆ[].

[] [] []

ಉಲ್ಲೇಖಗಳು

ಬದಲಾಯಿಸಿ