You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಸಾಂಸ್ಥಿಕ ಯೋಜನೆ ಪೀಠಿಕೆ: ಶಿಕ್ಷಣಕ್ಕೆ ಒಂದು ಯೋಜನೆಯು ಅಗತ್ಯ. ಅಂತೆಯೇ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಿಕ ಯೋಜನೆಗಳ ವ್ಯವಸ್ಥಾ ಕ್ರಮವನ್ನು ಅನುಸರಿಸಿ ಕೊಂಡು ರೂಪಗೊಳ್ಳುತ್ತವೆ.ಆದರೆ ರಾಷ್ಟ್ರದ ಯೋಜನೆಗಳ ಅನುಷ್ಠಾಣವು ನೇರವಾಗಿ ಕೆಳಹಂತದಲ್ಲಿ ಅನ್ವಯಗೊಳ್ಳುವುದು ಅಸಾದ್ಯ. ಆದುದರಿಂದಲೇ ಸಾಂಸ್ಥಿಕ ಯೋಜನೆಯು ಈಗ ರುಢಿಗೆ ಬಂದಿದೆ ಇದೊಂದು ಶಿಕ್ಷಣದ ಆವಿಷ್ಕಾರವೂ ಆಗಿದ್ದು ತನ್ನದೆ ಆದ ಪ್ರಾಮುಖ್ಯಾತೆ ಪಡೆದಿದೆ.

ಐತಿಹಾಸಿಕ ಹಿನ್ನಲೆ: ೧೯೬೮ ನವೆಂಬರ್ ೧ ರಂದು ಭೋಪಾಲದಲ್ಲಿ ಸಾಂಸ್ಥಿಕ ಯೋಜನೆಯ ವಿಷಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರೌಡ ವ್ಯಾಸಂಗವೊಂದು ಏರ್ಪಟ್ಟಿತ್ತು. ಈ ವ್ಯಾಸಂಗದಲ್ಲಿ ತಮ್ಮ ದೀರ್ಘ ಅನುಭವದ ಮಾತುಗಳಿಂದ ಸಾಂಸ್ಥಿಕ ಯೋಜನೆಯ ಬಗೆಗೆ ಮಾತನಾಡಿದ ”ಎಂ.ಬಿ.ಬುಚ್” ರವರು ಇದನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ. ”ಸಂಸ್ಥೆಯ ಅಗತ್ಯಗಳಿಗೆ ಅನುಗುಣವಾಗಿ ಉಪಲಬ್ಧವಿರುವ ಮತ್ತು ವ್ಯವಹಾರವನ್ನು ಸುಧಾರಿಸುವ ಮೂಲಕ ಭವಿಷ್ಯದಲ್ಲಿ ಸಂಸ್ಥೆಯ ಅಭಿವೃದ್ದಿಗಾಗಿ ಸಿದ್ದ ಪಡಿಸುವ ಕಾರ್ಯ ಸಮೂಹವೇ ಸಾಂಸ್ಥಿಕ ಯೋಜನೆ”

ಈ ವಾಕ್ಯವನ್ನು ವಿಶ್ಲೇಷಿಸಿದಾಗ ಈ ಕೆಳಗಿನ ಅಂಶಗಳು ಕಂಡು ಬರುತ್ತವೆ.

೧. ಸಾಂಸ್ಥಿಕ ಯೋಜನೆಯ ಲಭ್ಯವಿರುವ ಮತ್ತು ಭವಿಷತ್ತಿನಲ್ಲಿ ದೊರೆಯ ಬಹುದಾದ ಸಂಪನ್ಮೂಲಗಳನ್ನು ಆಧರಿಸುತ್ತದೆ.

೨. ಸಾಂಸ್ಥಿಕ ಯೋಜನೆಯು ಸಂಪೂರ್ಣವಾಗಿ ಅಗತ್ಯಗಳಿಗೆ ಅನುಕೂಲವಾಗಿದೆ.

೩. ಈ ಯೋಜನೆಯು ಅಲ್ಪ ಕಾಲಿಕ ಅಥವಾ ದೀರ್ಘ ಕಾಲಿಕವೂ ಆಗಿರಬಹುದು.

೪. ಸಾಂಸ್ಥಿಕ ಯೋಜನೆಯು ಸಿದ್ದ ಪಡಿಸಿದ ಅಭಿವೃದ್ಧಿ ಕಾರ್ಯ ಸಮೂಹಗಳನ್ನು ಒಳಗೊಂಡಿದೆ.

ಸಾಂಸ್ಥಿಕ ಯೋಜನೆಯ ಉದ್ದೇಶಗಳು:

೧. ಶಾಲಾ ವಿನ್ಯಾಸದಲ್ಲಿ ಸುಧಾರಣೆ ತರುವುದು.

೨. ಶಾಲೆಯ ಕಾರ್ಯಗಳು ಯೋಗ್ಯ ದಿಕ್ಕಿನಲ್ಲಿ ಸಾಗುವಂತೆ ನಿರ್ದೇಶಿಸುವುದು.

೩. ಶಾಲೆಯ ಕಾರ್ಯಗಳು ಯೋಗ್ಯವಾಗುವಂತೆ ಯುಕ್ತ ರೀತಿಯಲ್ಲಿ ತೊಡಗಲು ಶಿಕ್ಷಕರಿಗೆ ಸದಾವಕಾಶವನ್ನು ಒದಗಿಸುವುದು.

೪. ತನಗೆ ಅತಿ ಸುಲಭವಾಗಿ ಲಭ್ಯವಾಗುವ ಎಲ್ಲ ಭೌತಿಕ ಸಂಪನ್ಮೂಲವನ್ನು ಸದ್ವನಿಯೋಗಪಡಿಸಿಕೊಂಡು ಶಿಕ್ಷಣಿಕ ವಯವಸ್ಥೆಯು ತನ್ನೆಲ್ಲ ಪ್ರಸಕ್ತ ನಿಯತಾಂಕಗಳಲ್ಲಿ ಅಭಿವೃದ್ದಿ ಆಗುವಂತಹ ಸರ್ವ ವ್ಯಾಪ್ತಿ ಯೋಜನೆಗಳನ್ನು ತಯಾರಿಸುವುದು.

೫.ಶಾಲೆಯ ಯೋಜನೆಗಳಲ್ಲಿ ಮತ್ತು ಭೋಧನೆಯನ್ನು ಸುಧಾರಣೆಗಳನ್ನು ತರುವಲ್ಲಿ ಶಿಕ್ಷಕರ ಸ್ವತಂತ್ರ್ಯವನ್ನು ಸಡಿಲಗೊಳಿಸುವುದು.

೬. ಸಹಪಠ್ಯ ಚಟುವಟಿಗಳ ಸೂಕ್ತ ಸಂಘಟನೆ ಮಾಡುವುದು.

೭. ಶಿಕ್ಷಣವು ಒಂದು ಬಂಡವಾಳ ಹೂಡಿಕೆ ಎಂಬ ಪರಿಕಲ್ಪನೆಯನ್ನು ಸಧಿತಗೊಳಿಸುವುದು.

ಸಾಂಸ್ಥಿಕ ಯೋಜನೆಯ ಲಕ್ಷಣಗಳು:'

೧. ಅಗತ್ಯತೆ ಮತ್ತು ಬೇಡಿಕೆಗಳಿಗೆ ಅಡಿಪಾಯವಾಗಿರಬೇಕು.

೨. ಗುರಿಗಳಿಗೆ ಆಧ್ಯತೆ ನೀಡುವುದು.

೩. ವಿಧಾನ ಮತ್ತು ತಂತ್ರಗಳಲ್ಲಿ ನಿರ್ಧಿಷ್ಟತೆಯನ್ನು ಹೊಂದಿರುವುದು.

೪. ಶಾಲೆಯ ಮತ್ತು ಸಮುದಾಯದ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅವಕಾಶ ನೀಡುವುದು.

೫. ವ್ಯಕ್ತಿಗಳ ಕಾರ್ಯಗತವಾಗಿರದೆ ವಿಕೇಂದ್ರೀ ಕೃತ ಮತ್ತು ಪ್ರಜಾ ಸತ್ತಾತ್ಮಕ ಸಂವಹನ ಆಗಿರುತ್ತದೆ.

೬. ಪರಿಸರದಲ್ಲಿ ಆಗುವ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಸಾಂಸ್ಥಿಕ ಯೋಜನೆಯು ನಿರಂತರವಾಗಿ ಅಭಿವೃದ್ದಿ ಹೊಂದುತ್ತಿರುತ್ತದೆ.

೭. ನಮ್ಯತೆಯ ಗುಣವನ್ನು ಹೊಂದಿದ ಯೋಜನೆಯಾಗಿದೆ.

೮.ನಿರ್ಧಿಷ್ಟವಾಗಿ ವಿವಿಧ ವರ್ಷಗಳ ಯೋಜನೆಯ ಜಯಾ ಪಜಯಗಳನ್ನು ಮೌಲ್ಯ ಮಾಪನ ಮಾಡುವುದು ಮತ್ತು ಪರಿವರ್ತನೆ ತಂದುಕೊಳ್ಳುವುದು.

ಸಾಂಸ್ಥಿಕ ಯೋಜನೆಯ ವ್ಯಾಪ್ತಿ:

೧. ಶಾಲಾಸ್ಥವರ ಸುಧಾರಣೆ: ಶುಧ್ದವಾದ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ, ಉಪಹಾರ ಮತ್ತು ಆರೋಗ್ಯ ಸೇವೆ ಒದಗಿಸುವುದು, ಪಾಠೋಪಕರಣಗಳ ವ್ಯವಸ್ಥೆ. ಆಕರ್ಷಕ ಕಟ್ಟಡ ವಿನ್ಯಾಸ, ಆಟೋಪಕರಣಗಳು ಮತ್ತು ಆಟದ ಬಯಲು.

೨. ಭೋಧನಾತ್ಮಕ ಸುಧಾರಣೆ: ಭೋಧನೆಗೆ ಸಂಬಂಧಿಸಿದ ಚರ್ಚೆ, ಕ್ರಿಯಾ ಸಂಶೋಧನೆಯ ವಿನಿಮೆಯ, ವಿಶೇಷ ಉಪನ್ಯಾಸ ಮಾಲಿಕ, ವೃತ್ತಿ ನಿರತ ತರಬೇತಿಗಳಿಗೆ ಶಿಕ್ಷಕರನ್ನು ಕಳಿಸುವುದು. ಪುನಶ್ಚೇತನ ಶಿಬಿರಗಳ ಮತ್ತು ರಜಾ ತರಬೇತಿಗಳು

೩. ಸಹಪಠ್ಯ ಚಟುವಟಿಕೆಗಳು: ವಿದ್ಯಾರ್ಥಿ ಒಕ್ಕೂಟ ರಚನೆ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜ ಸೇವೆ, ಶೈಕ್ಷಣಿಕ ಪ್ರವಾಸ, ವನ ಭೋಜನಕೂಟ ಹಾಗೂ ಕ್ರಿಡೆಗಳು ಇತ್ಯಾದಿ.

೪. ಸುಧಾರಿತ ಆಡಳಿತಾತ್ಮಕ ಯೋಜನೆಗಳನ್ನು ರೂಪಿಸುವಿಕೆ:

ಸಾಂಸ್ಥಿಕ ಯೋಜನೆಯ ಹಂತಗಳು

೧. ವರ್ತಮಾನ ಸ್ಥಿತಿಯನ್ನು ವಿಶ್ಲೇಷಿಸುವುದು.

೨. ಸಂಪನ್ಮೂಲಗಳನ್ನು ನಿರೀಕ್ಷಿಸುವುದು.

೩. ಸುಧಾರಣೆಯ ಕಾರ್ಯಕ್ರಮಗಳನ್ನು ತಯಾರಿಸುವುದು.

೪. ಯೋಜನೆಯನ್ನು ಮೌಲ್ಯಮಾಪನವನ್ನು ಮಾಡುವುದು.

ಸಾಂಸ್ಥಿಕ ಯೋಜನೆಯ ಒಳಗೂಂಡಿರುವ ಕಾರ್ಯಕ್ರಮಗಳು:

೧. ವಿದ್ಯಾರ್ಥಿಗಳ ಪ್ರವೇಶ ಮತ್ತು ವರ್ಗವಿಂಗಡಣೆ.

೨. ಭೋಧನಾ ಕಾರ್ಯವನ್ನು ಹಂಚಿಕೊಡುವದು, ವಿಷಯಗಳು ವಿತರಣೆ.

೩. ವೇಳಾ ಪತ್ರಿಕೆಯ ತಯಾರಿಕೆ.

೪. ಸಹಪಠ್ಯ ಮತ್ತು ಪಠ್ಯೇತರ ವೇಳಾಪಟ್ಟಿ ತಯಾರಿಸುವುದು.

೫. ವಾರದ ಪರೀಕ್ಷಣಗಳು, ಮಾಸಿಕ ಪರಿಕ್ಷೆಗಳು, ಪೂರ್ವತಯಾರಿ ಪರೀಕ್ಷೆಗಳನ್ನು ನಡೆಸುವುದು.

೬. ಫಲಿತಾಂಶ ಪ್ರಕಟನೆ ಮತ್ತು ಪ್ರಗತಿ ಪತ್ರಿಕೆಗಳನ್ನು ಚರ್ಚಿಸುವುದು.

೭. ಪಾಲಕ- ಭೋಧಕರ ಸಭೆ ಮತ್ತು ಇತರ ಸಭೆಗಳು

೮. ದಾಖಲಾತಿಗಳ ನಿರ್ವಹಣೆ.