"ಸಾಂಗತ್ಯ " ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.
ಇದರಲ್ಲಿ ನಾಲ್ಕು ಸಾಲು(ಪಾದ)ಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಸಮವಾಗಿರುತ್ತವೆ.
ಹಳೆಗನ್ನಡದ ಕವಿಗಳ ಸಾಂಗತ್ಯಗಳಲ್ಲಿ ಆದಿಪ್ರಾಸ ಬಳಕೆ ಕಂಡುಬಂದರೂ ಇತ್ತೀಚಿನ ಕವಿಗಳು ಆದಿಪ್ರಾಸವನ್ನು ಬಳಸದೇ ಅಂತ್ಯಪ್ರಾಸಬಳಕೆ ಮಾಡಿರುವುದೂ ಇದೆ.
ಮೊದಲ ಸಾಲು ನಾಲ್ಕು ವಿಷ್ಣು ಗಣಗಳಿರುತ್ತವೆ. ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಅದರ ವಿನ್ಯಾಸ ಹೀಗಿದೆ.
೧ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೨ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ
೩ನೇ ಸಾಲು- ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
೪ನೇ ಸಾಲು-ವಿಷ್ಣು |ವಿಷ್ಣು |ಬ್ರಹ್ಮ


ಹಳೆಗನ್ನಡ ಪದ್ಯಕ್ಕೆ ಉದಾಹರಣೆ-
ಅಡಿಗಡಿ|ಗಗ್ರಜ|ರೆಲ್ಲರ|ಬೆಸಗೊಂಡು|
ಮೃಡರಿಪು|ವಾಪುರ|ದಿಂದ|
ಕಡುವೇಗ|ದಿಂದವೆ|ತೆರಳಿದ|ನಾರದ|
ನೊಡನೆ ವಿ|ಮಾನವ|ನೇರಿ|

(ಕಾಮನಕಥೆ-೫-೩)


ಯಕ್ಷಗಾನದ ಉದಾಹರಣೆ (ಕೃಷ್ಣಸಂಧಾನ - ಕವಿ ದೇವೀದಾಸ)

ಚರಣಾದಿ ಪೊರಳುವ ತರಳೆಯ ಪಿಡಿದೆತ್ತಿ ಕರುಣಾಳು ನುಡಿದ ದ್ರೌಪದಿಗೆ

ಸಿವಂತೆ ದು:ಖಿಸಬೇಡೇಳು ತಾಯೆ ನಿನ್ನಿರವೇನು ಪೇಳು ಪೇಳೆನಲು


ಹೊಸಗನ್ನಡ ಪದ್ಯಕ್ಕೆ ಉದಾಹರಣೆ-ಎಸ್.ವಿ.ಪರಮೇಶ್ವರಭಟ್ಟರ "ಇಂದ್ರಚಾಪ"ಕೃತಿಯ ಪದ್ಯ
ಬಂಗಾರ|ದಂತಹ| ನಾ ಕೊಟ್ಟ |ದಿನವನು |
ನೀ ಮಣ್ಣು |ಮಾಡಿದೆ|ಯೆಂದು|
ಕೆಂಪನೆ| ಮುಖಮಾಡಿ| ನನ್ನನೆ |ನೋಳ್ಪನು|
ದಿನಪನು| ತಾ ಪೋಗು|ವಂದು|

ನೋಡಿ : ಬದಲಾಯಿಸಿ


JAgjmag

"https://kn.wikipedia.org/w/index.php?title=ಸಾಂಗತ್ಯ&oldid=1144169" ಇಂದ ಪಡೆಯಲ್ಪಟ್ಟಿದೆ